ಮಂಗಳೂರು : ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಅಡ್ಯಾರುಪದವಿನಲ್ಲಿ ವಿದ್ಯಾರ್ಥಿಯೊಬ್ಬನಿಗೆ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿರುತ್ತಾರೆ.
ಮಂಗಳೂರು ಸಿಸಿಬಿ ಪೊಲೀಸರು ಈ ಕೊಲೆ ಯತ್ನ ಕೃತ್ಯದಲ್ಲಿ ಭಾಗಿಯಾದ ನಿತಿನ್ ಪೂಜಾರಿ, ಪ್ರಾಯ(21), ತಂದೆ: ಸತೀಶ್ ಪೂಜಾರಿ, ವಾಸ: ಅರ್ಕುಳ ಕಂಪಾ ಮನೆ, ಫರಂಗಿಪೇಟೆ ಅಂಚೆ, ಮಂಗಳೂರು ತಾಲೂಕು. – (ವೃತ್ತಿ – ಎಲೆಕ್ಟ್ರೀಶಿಯನ್), ಪ್ರಾಣೇಶ್ ಪೂಜಾರಿ, ಪ್ರಾಯ(20), ತಂದೆ: ಮಾಧವ ಪೂಜಾರಿ, ವಾಸ; ಕೆಂಜೂರು ಮನೆ, ಅಡ್ಯಾರ್ ಕಟ್ಟೆ, ಅಡ್ಯಾರ್ ಅಂಚೆ & ಗ್ರಾಮ, ಮಂಗಳೂರು- (ವೃತ್ತಿ-ಎಲೆಕ್ಟ್ರೀಶಿಯನ್), ಕಿಶನ್ ಪೂಜಾರಿ, ಪ್ರಾಯ(21), ತಂದೆ: ಸುಧೀರ್ ಪೂಜಾರಿ, ವಾಸ: ಅಳಪೆ ಕಂಡೇವು ಮನೆ, ಪಡೀಲ್ ಅಂಚೆ, ಮಂಗಳೂರು. — (ವೃತ್ತಿ–ಕಾರ್ಪೆಂಟರ್) ಎಂಬವರನ್ನು ಪತ್ತೆ ಮಾಡುವಲ್ಲಿ ಯಶಸ್ವಿ ಆಗಿರುತ್ತಾರೆ. ಆರೋಪಿಗಳ ಪೈಕಿ ಒಂದು ಹಾಗೂ ಎರಡನೇ ರವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪ್ರಕರಣಗಳಲ್ಲಿ ಆರೋಪಿತರಾಗಿದ್ದು, ಆರೋಪಿಗಳನ್ನು ಹಾಗೂ ಕೃತ್ಯಕ್ಕೆ ಉಪಯೋಗಿಸಿದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡು ಮುಂದಿನ ಕ್ರಮಕ್ಕಾಗಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
ಜುಲೈ7, ಶುಕ್ರವಾರ ದಂದು ನೌಶದ್ ಎಂಬಾತನು ತನ್ನ KA-19 Y-8437 ನೇ ಬೈಕ್ ನಲ್ಲಿ ಆತನ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೇರಳದ ಮಲಪುರಂ ನಿವಾಸಿ ಮಹಮ್ಮದ್ ಸಜೀದ್ ಎಂಬವನೊಂದಿಗೆ ಅಡ್ಯಾರ್ ನಲ್ಲಿ ಚಹಾ ಕುಡಿದು ವಾಪಸ್ಸು ಅಡ್ಯಾರ್ ನಿಂದ ಬಿತ್ತು ಪಾದೆಯ ತನ್ನ ಮನಗೆ ಹೋಗುತ್ತಿರುವಾಗ ಸಂಜೆ 4-15 ಗಂಟೆಗೆ ಅಡ್ಯಾರ್ ಪದವಿನಿಂದ ಸ್ವಲ್ಪ ಹಿಂದೆ ರಸ್ತೆ ಬದಿಯಲ್ಲಿ 3 ಮಂದಿ ಯುವಕರು ಇವರನ್ನು ನಿಲ್ಲಿಸಿ ಆ ಯುವಕರು ಬಂದಿದ್ದ ಸ್ಕೂಟರ್ ಸ್ಟಾರ್ಟ್ ಆಗುವುದಿಲ್ಲ ಎಂದು ಹೇಳಿ ಇವರ ಬಳಿಗೆ ಬಂದು ಅವರ ಪೈಕಿ ಒಬ್ಬಾತನು ನೌಫಲ್ ಗೆ ಹೊಡೆಯಲು ಪ್ರಯತ್ನಿಸಿದಾಗ ಆತನು ತಪ್ಪಿಸಿಕೊಂಡಾಗ ಜೊತೆಯಲ್ಲಿದ್ದ ಸಾಜಿದ್ ಎಂಬಾತನ ಕೈಗೆ ಹಾಗೂ ಬೆನ್ನಿಗೆ ತೀವ್ರ ತರಹದ ಗಾಯವುಂಟು ಮಾಡಿ ಕೊಲೆಗೆ ಪ್ರಯತ್ನಿಸಿ ನಂತರ ಅಲ್ಲಿಂದ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದುರು. ಗಾಯಗೊಂಡ ಸಾಜಿದ್ ನನ್ನು ಮಂಗಳೂರು ನಗರದ ಹೈಲ್ಯಾಂಡ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕೊಂಡು ಹೋಗಿದ್ದು, ಈಗ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯಲ್ಲಿರುತ್ತಾನೆ.
Click this button or press Ctrl+G to toggle between Kannada and English