ಉಳ್ಳಾಲದಲ್ಲಿ ಡಿವಿಎಸ್, ಬಂಟ್ವಾಳದಲ್ಲಿ ಶೋಭಾ ಸ್ಪರ್ಧೆಯ ಸವಾಲ್

2:43 PM, Tuesday, July 11th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

electionಮಂಗಳೂರು : ದಕ್ಷಿಣ ಕನ್ನಡದಲ್ಲಿ ನಡೆದ ಕೋಮು ಗಲಭೆಯ ಬಿಸಿ ರಾಜಕೀಯ ವಲಯದಲ್ಲಿ ತೀವ್ರ ಸಂಚಲ ಉಂಟು ಮಾಡಿದ್ದು. ನಾಯಕರು ಚುನಾವಣಾ ಸ್ಪರ್ಧೆಯ ಸವಾಲನ್ನು ಒಡ್ಡಿದ್ದಾರೆ.  ಸಂಸದೆ ಶೋಭಾ ಹಾಗೂ ಸಚಿವ ಡಿ.ವಿ. ಸದಾನಂದ ಗೌಡರು  ವಿಧಾನಸಭಾ ಚುನಾವಣೆಯಲ್ಲಿ ನನ್ನ ಹಾಗೂ ಖಾದರ್ ವಿರುದ್ಧ ಸ್ಪರ್ಧಿಸಿ ಗೆಲ್ಲಲಿ ಎಂದು ಸಚಿವ ಬಿ. ರಮಾನಾಥ ರೈ ಸವಾಲೆಸೆದಿದ್ದಾರೆ

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೈ ಸಂಸದೆ ಶೋಭಾ ಹಾಗೂ ಸಚಿವ ಡಿ.ವಿ. ಸದಾನಂದ ಗೌಡರಿಗೆ ಮಾಹಿತಿ ಕೊರತೆಯಿದೆ. ಅವರು ತಮ್ಮ ಹೇಳಿಕೆ ಮೂಲಕ ಜಿಲ್ಲೆಯ  ಶಾಂತಿ ಮತ್ತಷ್ಟು ಕದಡುತ್ತಿದ್ದಾರೆ. ಅವರಿಗೆಲ್ಲಾ ಬೇನಾಮಿ ಆಸ್ತಿ ಇರಬಹುದು. ಆದರೆ, ನನಗಿರುವುದು ಒಂದೇ ಮನೆ ಎಂದು ಆರೋಪಿಸಿದ್ದಾರೆ.

ಬಂಟ್ವಾಳ ಘರ್ಷಣೆ ಹಿಂದೆ ಮತೀಯವಾದಿಗಳ ಪಾತ್ರವಿದೆಯೇ ವಿನಃ ಗಲಭೆ ಹಿಂದೆ ಕಾಂಗ್ರೆಸ್ ಪಾತ್ರವಿಲ್ಲ. ಕೆಲವರು ತಮ್ಮ ಮೇಲೆ ಮಾಡುತ್ತಿರುವ ಆರೋಪ ನಿರಾಧಾರ. ಕಾಂಗ್ರೆಸ್ ಜಾತ್ಯಾತೀತ ಪಕ್ಷ. ಬಿಜೆಪಿ ನಾಯಕರು ಹೇಳಿಕೆ ಮೂಲಕ ಗಲಭೆಗೆ ಕುಮ್ಮಕ್ಕು ನೀಡುತ್ತಿದ್ದಾರೆ. ಶಾಂತಿ ಬಯಸದ ಬಿಜೆಪಿಯವರು ಶಾಂತಿ ಕದಡುವ ಹೇಳಿಕೆ ನೀಡುತ್ತಿದ್ದಾರೆ ಎಂದರು.

Rai ಸಾಮಾಜಿಕ ಜಾಲ ತಾಣಗಳ ಗಾಸಿಪ್ ಸುದ್ದಿಗಳಿಗೆ ಕಿವಿ ಕೊಡ ಬೇಡಿ. ಜಿಲ್ಲೆಯಲ್ಲಿ ಶಾಂತಿ ಮರುಸ್ಥಾಪಿಸಲು ಎಲ್ಲರೂ ಕೈ ಜೋಡಿಸಿ , ಗುರುವಾರ ಜಿಲ್ಲಾಡಳಿತದ ನೇತೃತ್ವದಲ್ಲಿ ಶಾಂತಿ ಸಭೆ ನಡೆಯಲಿದ್ದು, ಎಲ್ಲಾ ರಾಜಕೀಯ ಪಕ್ಷಗಳ ನೇತಾರರೂ ಸಭೆಯಲ್ಲಿ ಭಾಗವಹಿಸಿ ಶಾಂತಿ ಸ್ಥಾಪಿಸಲು ಪ್ರಯತ್ನಿಸಬೇಕು ಎಂದು ರೈ ವಿನಂತಿಸಿದರು .

ನಿಷೇಧಾಜ್ಞೆಯನ್ನು ಮುರಿದು ಶವಯಾತ್ರೆ ಮಾಡಿದ್ದಾರೆ. ಪ್ರತಿಭಟನೆಯ ನೆಪದಲ್ಲಿ ಕಲ್ಲಡ್ಕ ಪ್ರಭಾಕರ್ ಅವರನ್ನು ಎತ್ತಿಕೊಂಡು ವಿಜಯೋತ್ಸವ ಆಚರಿಸುತ್ತಾರೆ. ಸೂತಕದ ಮನೆಯಲ್ಲಿ ವಿಜಯೋತ್ಸವ ಆಚರಿಸುವವರು ಇವರೆಂಥ ಜನ ಎಂದು ಹೇಳಿದರು.

ಕರಾವಳಿಯಲ್ಲಿ ಅಹಿತಕರ ಘಟನೆ ಬೆನ್ನಲ್ಲೇ ಬಿಜೆಪಿ, ಎಸ್‌‌‌ಡಿಪಿಐಯಿಂದ ಅನಗತ್ಯ ಹೇಳಿಕೆಗಳು ಬರುತ್ತಿವೆ ಎಂದು ಆಹಾರ ಖಾತೆ ಸಚಿವ ಯು.ಟಿ. ಖಾದರ್ ಆರೋಪಿಸಿದ್ದಾರೆ.

ಆರ್‌‌ಎಸ್ಎಸ್ ಕಾರ್ಯಕರ್ತ ಶರತ್ ಮೇಲೆ ದಾಳಿಯಾದಾಗ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದ ರವೂಫ್ ಕೂಡಾ ಒಬ್ಬ ಮುಸ್ಲಿಂ. ಇದು ಬಿಜೆಪಿಯವರಿಗೆ ಗೊತ್ತಾಗಲಿಲ್ಲ ಎಂದರು.

ಕಾನೂನು ಮುರಿದು ಪ್ರತಿಭಟನೆ ಮಾಡಿದ್ದು ಬಿಜೆಪಿಯವರು. ಆದರೆ, ಅವರೇ ಮಾಧ್ಯಮದೆದುರು ಕೂತು ಸರ್ಕಾರದ ಮೇಲೆ ಆರೋಪ ಮಾಡುತ್ತಾರೆ. ಅಶಾಂತಿ ಸೃಷ್ಟಿಸಿದ್ದು ಕಾಂಗ್ರೆಸ್ ಎಂದು ಆರೋಪಿಸುತ್ತಾರೆ. ಚುನಾವಣೆ ಬಂದಾಗ ಬಿಜೆಪಿ, ಎಸ್‌‌‌ಡಿಪಿಐ ಒಗ್ಗಟ್ಟಾಗುತ್ತವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜೀನಾಮೆ ನೀಡಲಿ

ಇದಕ್ಕೆ ಪ್ರತಿಕ್ರಿಯಿಸಿದ ಶೋಭಾ,  ಜಿಲ್ಲೆಯ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದಲ್ಲಿ ರೈ ಮೊದಲು ರಾಜೀನಾಮೆ ನೀಡಲಿ.  ಆಮೇಲೆ ಚುನಾವಣೆಗೆ ಹೋಗೋಣ. ಸೋಲು ಗೆಲುವನ್ನು ತೀರ್ಮಾನಿಸುವವರು ಜನರು. ಕೊಲೆಗಡುಕರನ್ನು ಹಿಡಿಯುವ ಬದಲು ರೈ ಚುನಾವಣೆಗೆ ವಿಚಾರ ಮಾತನಾಡಿ  ರಾಜಕೀಯ ಮಾಡುತ್ತಿದ್ದಾರೆ ಎಂದಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English