ಮಂಗಳೂರು : ಶರತ್ ಮಡಿವಾಳ ಅವರ ಮನೆಗೆ ಒಂಬತ್ತು ದಿನಗಳ ಬಳಿಕ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿದರು.
ಸಜಿಪ ಗ್ರಾಮದಲ್ಲಿರುವ ಶರತ್ ಅವರ ಮನೆಗೆ ಭೇಟಿ ಬುಧವಾರ ಬೆಳಗ್ಗೆ ನೀಡಿದ ಸಚಿವರು ಶರತ್ ತಂದೆ ತನಿಯಪ್ಪರಿಗೆ ಸಾಂತ್ವಾನ ಹೇಳಿದರು.
ಮಾಧ್ಯಮದವರನ್ನು ಹೊರಗಿಟ್ಟು ಶರತ್ ಅವರ ಮನೆಗೆ ತೆರಳಿದ ಸಚಿವರು ಕೊಲೆ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ್ದರೆನ್ನಲಾಗಿದೆ.
ಸಚಿವರು ಭೇಟಿ ನೀಡದಿರುವ ಬಗ್ಗೆ ತನಿಯಪ್ಪ ಅವರು ನಿನ್ನೆ ಮಾಧ್ಯಮದೆದುರು ಬೇಸರ ವ್ಯಕ್ತಪಡಿಸಿದ್ದರು.
Click this button or press Ctrl+G to toggle between Kannada and English