ಮಂಗಳೂರು : ಪಾಂಡೇಶ್ವರ ಸಮೀಪದ ದೂಮಪ್ಪ ಕಾಂಪೌಂಡು ಗ್ರೀನ್ ಲ್ಯಾಂಡ್ ಕೊಲೋನಿಯ ಸಾಯಿ ಕಿರಣ್ ಅಪಾರ್ಟ್ ಮೆಂಟ್ ನಲ್ಲಿ ವೋಡೋ ಫೋನ್ ಕಂಪೆನಿಗೆ ಸಂಬಂಧಪಟ್ಟ ಮೊಬೈಲ್ ಟವರ್ ಅಳವಡಿಕೆಗೆ ಸ್ಥಳಿಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಮಹಾನಗರ ಪಾಲಿಕೆ ಬುಧವಾರ ಕೆಲಸ ನಿಲ್ಲಿಸುವಂತೆ ನೊಟೀಸು ಜಾರಿ ಮಾಡಿದೆ.
ಗ್ರೀನ್ ಲ್ಯಾಂಡ್ ಕೊಲೋನಿಯ ಜಯಕುಮಾರ್ ಎಂಬವರಿಗೆ ಸೇರಿದ ಸಾಯಿ ಕಿರಣ್ ಅಪಾರ್ಟ್ ಮೆಂಟ್ ನಲ್ಲಿ ಇಂಡೋಸ್ ಪ್ರೈವೇಟ್ ಲಿಮಿಟೆಡ್ ಕಂಪೆನಿ ವೋಡೋ ಫೋನ್ ಗಾಗಿ ಭಾರೀ ಗಾತ್ರದ ಮೊಬೈಲ್ ಟವರೊಂದನ್ನು ನಿರ್ಮಿಸಿ ಪೂರ್ತಿಗೊಳಿಸಿದೆ.
ಅಪಾರ್ಟ್ ಮೆಂಟ್ ನ ಸುತ್ತಮುತ್ತಲಿರುವ ಜನ ಕಟ್ಟಡದ ಮಾಲೀಕರನ್ನು ಜನ ವಸತಿ ಪ್ರದೇಶದಲ್ಲಿ ಟವರ್ ನಿರ್ಮಿಸಬೇಡಿ ಎಂದು ವಿನಂತಿಸಿಕೊಂಡರೂ, ಅವರಿಗೆ ನೀರಿನ ಟ್ಯಾಂಕ್ ಮಾಡುತ್ತಿದ್ದೇವೆ ಎಂದು ಸುಳ್ಳು ಹೇಳಿ ಸುಮಾರು 30 ಅಡಿ ಎತ್ತರದ ಟವರನ್ನು ಮೂರು ಅಂತಸ್ತಿನ ಕಟ್ಟಡದ ಮೇಲೆ ನಿರ್ಮಿಸಲಾಗಿದೆ ಎಂದು ಸ್ಥಳೀಯರು ಮೆಗಾ ಮೀಡಿಯಾ ನ್ಯೂಸ್ ಗೆ ವಿವರಿಸಿದ್ದಾರೆ.
ಪರಿಸರ ವಾಸಿಗಳು ಹೇಳುವ ಪ್ರಕಾರ ಈ ಕಟ್ಟಡಕ್ಕೆ ಕಳೆದ ಹನ್ನೊಂದು ತಿಂಗಳಿದ ಟವರ್ ಕೆಲಸಕ್ಕೆ ಸಾಮಾಗ್ರಿಗಳು ಬರುತ್ತಲೇ ಇದ್ದವು. ಮಂಗಳೂರು ಮಹಾ ನಗರ ಪಾಲಿಗೆ ಕಟ್ಟಡ ಪೂರ್ತಿ ಗೊಳಿಸಿದ್ದಕ್ಕೆ ಕಂಪ್ಲೀಸನ್ ಸರ್ಟಿಫಿಕೇಟ್ ನೀಡಿದೆ. ಆ ಬಳಿಕ ಟವರ್ ನಿರ್ಮಾಣಕ್ಕೆ ಬೇಕಾಗುವ ಪೌಂಡೇಶನ್ ಅನ್ನು ಕಟ್ಟಡದ ಮೂರನೆ ಮಹಡಿಯಲ್ಲಿ ಹಾಕಲಾಗಿದೆ. ಇದು ಕಾನೂನು ಉಲ್ಲಂಘನೆಯಾಗಿದೆ ಸರ್ಟಿಫಿಕೇಟ್ ಸಿಕ್ಕಿದ ಬಳಿಕ ಮತ್ತೆ ಅದೇ ಕಟ್ಟಡದಲ್ಲಿ ಕೆಲಸ ಮಾವುವಂತಿಲ್ಲ ಎಂದಿದ್ದಾರೆ.
ಸ್ಥಳಿಯರು ವಿರೋಧಿಸುತ್ತಿದ್ದಂತೆಯೇ ಟವರ್ ಕೆಲಸ ಮಂಗಳವಾರ ಪೂರ್ತಿಗೊಂಡಿದೆ. ಇನ್ನೇನು ಟವರ್ ಚಾರ್ಜ್ ಮಾಡಲು ಮಾತ್ರ ಬಾಕಿ ಉಳಿದಿದೆ.
ಮಂಗಳವಾರ ಗ್ರೀನ್ ಲ್ಯಾಂಡ್ ಕೊಲೋನಿಯ ನಿವಾಸಿಗಳು ಮಂಗಳೂರು ಮಹಾನಗರಪಾಲಿಕೆ ಮೇಯರ್ ಹಾಗೂ ಕಮಿಷ ನರ್ ಗೆ ದೂರು ನೀಡಿದ್ದಾರೆ. ಬುಧವಾರ ನಗರ ಯೋಜನಾ ಅಧಿಕಾರಿಗಳು ಕೆಲಸ ನಿಲ್ಲಿಸುವಂತೆ ನೊಟೀಸು ಜಾರಿ ಮಾಡಿದ್ದಾರೆ.
ಆದರೆ ಕಟ್ಟಡ ಮಾಲಿಕ ನನ್ನ ಬಳಿ ಟವರ್ ನಿರ್ಮಿಸಲು ಉಚ್ಚ ನ್ಯಾಯಾಲಯದ ಅದೇಶ ಇದೆ ಮೊಬೈಲ್ ಟವರ್ ನಿರ್ಮಿಸಲು ಯಾವುದೇ ಅಡೆ ತಡೆ ಇಲ್ಲ ಎಂದಿದ್ದಾರೆ.
Click this button or press Ctrl+G to toggle between Kannada and English