ಮಂಗಳೂರು: ಬೆದ್ರ 9 ಕ್ರಿಯೇಷನ್ಸ್ ಲಾಂಛನದಲ್ಲಿ ರಘು ಶೆಟ್ಟಿ ನಿರ್ದೇಶನದಲ್ಲಿ ನಿರ್ಮಾಣ ಗೊಂಡ ಬಹುನಿರೀಕ್ಷಿತ ತುಳು ಚಿತ್ರ ‘ಅರ್ಜುನ್ ವೆಡ್ಸ್ ಅಮೃತ’ ಇದೇ 21 ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ.
ಪತ್ರಿಕಾಘೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ರಘು ಶೆಟ್ಟಿ, ಈ ಚಿತ್ರ ಪಕ್ಕಾ ಲವ್ ಸ್ಟೋರಿ ಕಥೆಯನ್ನೊಳಗೊಂಡಿದೆ. ಅನೂಪ್ ಸಾಗರ ಈ ಚಿತ್ರದ ನಾಯಕನ ಪಾತ್ರ ನಿರ್ವಹಿಸಿದ್ದಾರೆ. ಅನೂಪ್ ಜತೆಯಾಗಿ ಆರಾಧ್ಯ ಶೆಟ್ಟಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಇನ್ನುಳಿದಂತೆ ತುಳು ರಂಗಭೂಮಿಯ ಹಲವು ಕಲಾವಿದರ ಬಳಗವನ್ನು ಈ ಚಿತ್ರ ಹೊಂದಿದೆ ಎಂದು ಹೇಳಿದ್ದಾರೆ.
ನವೀನ್ ಡಿ ಪಡಿಲ್, ಭೋಜರಾಜ್ ವಾಮಂಜೂರ್ ಮತ್ತು ಅರವಿಂದ ಬೋಲಾರರ ಮೂವರ ಹಾಸ್ಯ ಈ ಚಿತ್ರದಲ್ಲಿ ಪ್ರಮುಖವಾಗಿದೆ . ಈ ಕಥೆಯು ಪಡೀಲ್ ಪಾತ್ರದ ಸುತ್ತ ಸುತ್ತುತ್ತದೆ. ಉಮೇಶ್ ಮಿಜಾರ್ ಮತ್ತು ಸುಂದರ್ ರೈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಎಂದು ರಘು ಹೇಳಿದರು.
ಜು 21 ರಂದು ಮಂಗಳೂರಿನ ಜ್ಯೋತಿ, ಸಿನಿಪೊಲಿಸ್, ಪಿವಿಆರ್, ಬಿಗ್ ಸಿನೆಮಾಸ್, ಕಾರ್ಕಳದಲ್ಲಿ ರಾಧಿಕಾ, ಪ್ಲಾನೆಟ್, ಬೆಳ್ತಂಗಡಿಯಲ್ಲಿ ಭಾರತ್, ಮೂಡಬಿದ್ರೆಯಲ್ಲಿ ಅಮರಶ್ರೀ, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್, ಸುರತ್ಕಲ್‌ನಲ್ಲಿ ನಟರಾಜ್ ಹಾಗೂ ಉಡುಪಿಯ ಕೆಲ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
Click this button or press Ctrl+G to toggle between Kannada and English