ಮಂಗಳೂರು : ನಗರದ ಸರಕಾರಿ ಆಸ್ಪತ್ರೆಯಾಗಿರುವ ವೆನ್ಲಾಕ್ ಬಳಿ ಕಳೆದ ಕೆಲವು ದಿನಗಳಿಂದ ಪೈಪ್‌ಲೈನ್ ಒಡೆದು ಆಸ್ಪತ್ಯೆ ತ್ಯಾಜ್ಯಗಳು ಹೊರಬರುತ್ತಿದ್ದರೂ ಅದನ್ನು ದುರಸ್ತಿ ಮಾಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ನಿರ್ಲಕ್ಷ ತೋರಿದೆ.
ನಗರದ ಹಂಪನಕಟ್ಟೆ ಸಿಗ್ನಲ್‌ನಿಂದ ವೆನ್ಲಾಕ್ ಆಸ್ಪತ್ರೆಯ ಹಿಂಬದಿಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಈ ರಸ್ತೆಯ ಬದಿ ತೆರೆದ ಚರಂಡಿ ಇದ್ದು, ಈ ಚರಂಡಿಯ ಒಳಗಿನಿಂದ ಆಸ್ಪತ್ರೆ ತಾಜ್ಯಗಳು ಹಾದುಹೋಗಲು ಪೈಪ್‌ಲೈನ್‌ನನ್ನು ಅಳವಡಿಸಲಾಗಿದೆ. ಆದರೆ, ಈ ಪೈಪ್‌ಲೈನ್ ಒಡೆದಿರುವುದರಿಂದ ಆಸ್ಪತ್ರೆಯ ತ್ಯಾಜ್ಯಗಳು ಚರಂಡಿಯನ್ನು ಸೇರುತ್ತಿವೆ.
ಇದರಿಂದಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುವ ಸೊಳ್ಳೆಗಳ ಉತ್ಪತ್ತಿಗೆ ಈ ಚರಂಡಿ ಎಡೆ ಮಾಡಿಕೊಡುತ್ತಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೂ ಇದು ಮಾರಕವಾಗಿ ಪರಿಣಮಿಸುತ್ತಿದ್ದು, ರೋಗ ಹರಡುವ ಭೀತಿಯನ್ನು ಮೂಡಿಸಿದೆ. ಆಸ್ಪತ್ರೆಯು ಹೊರಸೂಸುವ ತಾಜ್ಯಗಳಿಂದಾಗಿ ಆಸ್ಪತ್ರೆಯ ಸುತ್ತಮುತ್ತ ನೈಮರ್ಲದ್ಯ ಕೊರತೆ ಎದ್ದು ಕಾಣುತ್ತಿದೆ.
ಸಾರ್ವಜನಿಕರು ನಡೆದಾಡುವ ಈ ರಸ್ತೆಯಲ್ಲಿ ಮಳೆಗಾಲದಲ್ಲಿ ಚರಂಡಿಯಲ್ಲಿ ನೀರು ತುಂಬಿ ರಸ್ತೆಗೆ ಹರಿಯುತ್ತದೆ. ಆಸ್ಪತ್ರೆಗೆ ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವ ರೋಗಿಗಳ ಹಾಗೂ ನಡೆದಾಡುವ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಈ ಪೈಪ್‌ಲೈನ್‌ನ್ನು ಕೂಡಲೇ ದುರಸ್ತಿಗೊಳಿಸಬೇಕು, ಅಲ್ಲದೆ ತೆರೆದ ಚರಂಡಿಯನ್ನು ಮುಚ್ಚಲು ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
Click this button or press Ctrl+G to toggle between Kannada and English