ಮಂಗಳೂರು: ಹಿಂದೂ ಧರ್ಮಕ್ಕೆ ಮರಳಿದ ಕ್ರಿಶ್ಟಿಯನ್ ಕುಟುಂಬ

12:01 PM, Tuesday, July 25th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Convert ಮಂಗಳೂರು: ಹಿಂದೂ ಧರ್ಮದಿಂದ ಕ್ರಿಶ್ಟಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬವೊಂದು ಸ್ವ ಇಚ್ಛೆಯಿಂದ ಮಾತೃ ಧರ್ಮಕ್ಕೆ ಮರಳಿದೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸಿದ್ದಾರೆ.

40 ವರ್ಷಗಳ ಹಿಂದೆ ಮಂಗಳೂರಿನ ಪದವಿನಂಗಡಿಯ ಅರುಣ್ ಮೊಂತೆರೊ (46) ಹಾಗೂ ಕುಟುಂಬ ಹಿಂದೂ ಧರ್ಮಕ್ಕೆ ಮರಳಿದವರು. ಅವರ ಕುಟುಂಬ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮೇಲೂ ಹಿಂದೂ ಧರ್ಮದ ಬಗ್ಗೆಯೇ ಆಸಕ್ತಿ ವಹಿಸಿದ್ದರು.

ಆ ಧರ್ಮದಲ್ಲಿದ್ದಾಗಲೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದರಂತೆ. ಆದರೆ, ಕಳೆದ ಮೂರು ತಿಂಗಳ ಹಿಂದೆ ತಾನು ಹಾಗೂ ತನ್ನ ಕುಟುಂಬ ಹಿಂದೂ ಧರ್ಮಕ್ಕೆ ಮರಳುವ ನಿರ್ಧಾರ ಬಲವಾಯಿತು. ಅದರಂತೆ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಭೇಟಿಯಾಗಿ ತಮ್ಮ ಅಭಿಲಾಶೆಯನ್ನು ವ್ಯಕ್ತಪಡಿಸಿದ್ದೆವು ಎಂದು ಅರುಣ್ ಮೊಂತೆರೊ ತಿಳಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English