ಮೇಯರ್ ಕವಿತಾ ಸನಿಲ್, ಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ರಿಂದ ಪುಟ್ ಪಾತ್ ನಲ್ಲಿ ಪಾದಯಾತ್ರೆ

7:21 PM, Thursday, July 27th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

padayatreಮಂಗಳೂರು: ಮಹಾನಗರಪಾಲಿಕೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಮೇಯರ್ ನೇತೃತ್ವದಲ್ಲಿ  ಪಿವಿಎಸ್‌ ಸರ್ಕಲ್ ನಿಂದ ಸ್ಟೇಟ್ ಬ್ಯಾಂಕ್‌ವರೆಗೆ ಬುಧವಾರ ಸಂಚಾರ ಸುಧಾರಣೆ ಪಾದಯಾತ್ರೆ ನಡೆಸಿದರು.

ಈ ಪಾದಯಾತ್ರೆ ಸಂದರ್ಭದಲ್ಲಿ ರಸ್ತೆಯಲ್ಲಿ ಕಂಡು ಬಂದ ಅನಧಿಕೃತ ಪಾರ್ಕಿಂಗ್, ರಸ್ತೆ-ಫುಟ್ ಪಾತ್ ಒತ್ತುವರಿ ತೆರವು ಹಾಗೂ ಸಂಚಾರಕ್ಕೆ ಅಡ್ಡಿಯಾಗಿರುವ ಗೂಡಂಗಡಿಗಳನ್ನು ತೆರವುಗೊಳಿಸಿ  ಎಚ್ಚರಿಕೆ ನೀಡಲಾಯಿತು.

ಕಾರ್ಪೊರೇಟರ್‌ ಎ.ಸಿ. ವಿನಯ ರಾಜ್‌ ನಗರದ ಮಿಲಾಗ್ರಿಸ್‌ನ ಆಟೋ ನಿಲ್ದಾಣದಲ್ಲಿ ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಅವರ ಪ್ರದೇಶಾಭಿವೃದ್ಧಿ ನಿಧಿಯಲ್ಲಿ ಕಮಾನು ನಿರ್ಮಿಸಲು  ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಬಳಿಕ ಕಮಾನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಮೇಯರ್‌ ಅವರು ಪಾಲಿಕೆಯ ಆಯುಕ್ತರಿಗೆ ಸೂಚಿಸಿದರು.

ಸ್ಟೇಟ್‌ಬ್ಯಾಂಕ್‌ನಲ್ಲಿ ಬಳಿ ಕೆಲವೊಂದು ವ್ಯಾಪಾರಿಗಳು ಕಾರ್ಯಾ ಚರಣೆಗೆ ವಿರೋಧ ವ್ಯಕ್ತಪಡಿಸಿ ಮೇಯರ್ ವಿರುದ್ಧ ಘೋಷಣೆ ಕೂಗಿದರು.

padayatreಅವರ ಪ್ರಶ್ನೆಗೆ ಉತ್ತರಿಸಿದ ಮೇಯರ್ ನಿಮಗೆ ಬೀದಿ ಬದಿ ವ್ಯಾಪಾರಿ ವಲಯ ಮಾಡಿಕೊಡಲಾಗಿದೆ. ಆದರೆ ನೀವು ಅಲ್ಲಿಗೆ ತೆರಳಿ ವ್ಯಾಪಾರ ಮಾಡುವ ಬದಲು ರಸ್ತೆ ಬದಿಯಲ್ಲಿ ತೊಂದರೆ ನೀಡುತ್ತಿದ್ದೀರಿ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು.

ಸಂಚಾರ ಸುಧಾರಣೆ ಪಾದಯಾತ್ರೆ ಯಲ್ಲಿ ಉಪಮೇಯರ್‌ ರಜನೀಶ್‌, ಮುಖ್ಯ ಸಚೇತಕ ಎಂ. ಶಶಿಧರ ಹೆಗ್ಡೆ, ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಸಬಿತಾ ಮಿಸ್ಕಿತ್‌, ಅಬ್ದುಲ್‌ ರವೂಫ್‌, ಕಾರ್ಪೊರೇಟರ್‌ಗಳಾದ ರಾಧಾಕೃಷ್ಣ, ರತಿಕಲಾ, ಅಪ್ಪಿ, ಕವಿತಾ, ಡಿಸಿಪಿ ಹನುಮಂತರಾಯ, ಎಸಿಪಿ ತಿಲಕ್‌ಚಂದ್ರ, ಸಂಚಾರಿ ಪೊಲೀಸ್‌ ಅಧಿಕಾರಿಗಳು ಭಾಗವಹಿಸಿದ್ದರು.

padayatre

padayatre

padayatre

 

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English