ಕಾವ್ಯಳ ಅನುಮಾನಾಷ್ಪದ ಸಾವಿನ ನಿಷ್ಪಕ್ಷಪಾತ ತನಿಖೆಗೆ ಅ.ಭಾ.ವಿ.ಪ ಒತ್ತಾಯ

6:06 PM, Saturday, July 29th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

abvp ಮಂಗಳೂರು : ಪ್ರತಿಭಾವಂತ ಕ್ರೀಡಾಪಟು, ಆಳ್ವಾಸ್ ಶಿಕ್ಷಣ ಸಂಸ್ಥೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯಾ ಸಾವು ಹಲವು ಅನುಮಾನಗಳನ್ನು ಹುಟ್ಟಿಸಿದ್ದು. ಈ ಘಟನೆಯ ಹಿಂದಿರುವ ನಿಗೂಢತೆಯನ್ನು ಬಯಲಿಗೆಳೆದು ನಿಷ್ಪಕ್ಷಪಾತ ತನಿಖೆ ನಡೆಸಲು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ದ.ಕ. ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ ನಡೆಸಿತು.

ಜುಲೈ 20 ಗುರುವಾರ ಬೆಳಗ್ಗೆ ಬ್ಯಾಡ್ಮಿಂಟನ್ ಪ್ರಾಕ್ಟಿಸ್ ಗೆ ಹೋಗುವಾಗಲು, ಶಾಲೆಗೆ ಹಾಜರಾದಗಲೂ ಲವಲವಿಕೆಯಿಂದ ಇದ್ದ ಕಾವ್ಯಾ, ತರಗತಿಯಿಂದ ಹಿಂತಿರುಗುವಾಗ ತೀವ್ರ ಖಿನ್ನತೆಗೆ ಒಳಗಾಗಿದ್ದು, ಅನುಮಾನಗಳನ್ನು ತಂದಿದೆ. ಆಕೆ ತರಗತಿಯಲ್ಲಿ ಶಿಕ್ಷಕರಿಂದ ಅಥವಾ ಸಹಪಾಠಿಗಳಿಂದ ತೊಂದರೆಗೆ ಒಳಗಾದಲೇ ಎಂದು ತನಿಖೆ ನಡೆಸಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದರು.

ಕಾವ್ಯಾ ಹಾಸ್ಟೆಲ್ ನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದು ಹಲವು ಅನುಮಾನಕ್ಕೆ ಎಡೆಮಾಡಿದೆ. ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪ್ರತಿಭೆಯ ಈ ನಿಗೂಢ ಸಾವಿನ ಬಗ್ಗೆ ಸಾರ್ವಜನಿಕ ವಲಯ ಮತ್ತು ವಿದ್ಯಾರ್ಥಿನಿಯ ಪೋಷಕರು ಶಂಕೆ ವ್ಯಕ್ತಪಡಿಸಿದ್ದಾರೆ.ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯಾಗಿದ್ದ 15 ವರ್ಷದ ಕಾವ್ಯಾ ಕಾಲೇಜಿನ ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೋಷಕರಿಗೆ ತಿಳಿಸಲಾಗಿತ್ತು. ಆದರೆ, ಹೆತ್ತವರು ಹಾಸ್ಟೆಲ್ ತಲುಪುವಷ್ಟರಲ್ಲಿ ವಿದ್ಯಾರ್ಥಿನಿಯ ಶವವನ್ನು ಆಳ್ವಾಸ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿತ್ತು. ಇದೀಗ ಹೆತ್ತವರು ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ್ದಾರೆ.

abvp “ತಮ್ಮ ಹುಡುಗಿ ಕ್ರೀಡಾಪಟುವಾಗಿದ್ದು, ಆತ್ಮಹತ್ಯೆ ಮಾಡಿಕೊಳ್ಳುವಂಥವಳಲ್ಲ. ಆಕೆಯನ್ನು ಶಾಲೆಯವರೇ ಕಿರುಕುಳ ಕೊಟ್ಟು ಕೊಲೆಗೈದಿರುವ ಸಂಶಯ ಇದೆ,” ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವ ಮನಸ್ಥಿತಿಯ ಹುಡುಗಿ ಅಲ್ಲ. ಆಕೆ ಕ್ರೀಡಾಪಟು. ಧೈರ್ಯವಂತೆ. ಹೀಗಾಗಿ ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಆಕೆಯನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಕಾವ್ಯ ತಂದೆ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಕಾವ್ಯಾ ನಿಗೂಢ ಸಾವು ಪ್ರಕರಣವನ್ನು ಸಮಗ್ರವಾಗಿ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸಬೇಕು ಎಂದು ಪ್ರತಿಭಟನನಿರತರು ಈ ಸಂದರ್ಭದಲ್ಲಿ ಒತ್ತಾಯಿಸಿದರು.

ಪ್ರತಿಭಟನೆಯ ಕೊನೆಯಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಸದಸ್ಯರು ಉಪ ಜಿಲ್ಲಾಧಿಕಾರಿ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English