ಕೇರಳದಲ್ಲಿ ಹುಟ್ಟಿಕೊಂಡ ಕೆಂಪು ರಾಕ್ಷಸರು ಇಡೀ ಹಿಂದೂ ಸಮಾಜವನ್ನು ನಾಶ ಮಾಡಲು ಹೊರಟಿದ್ದಾರೆ : ಸುದರ್ಶನ್ ಹೊಸಮೂಲೆ

9:09 PM, Tuesday, August 1st, 2017
Share
1 Star2 Stars3 Stars4 Stars5 Stars
(No Ratings Yet)
Loading...

bjp Malayali unitಮಂಗಳೂರು : ಕೇರಳದಲ್ಲಿ ನಡೆಯುತ್ತಿರುವ ಸಿಪಿಎಂ ಪ್ರೇರಿತ ಕೊಲೆ ಹಾಗೂ ದೌರ್ಜನ್ಯ ವಿರುದ್ಧ ಬಿಜೆಪಿ ಮಳೆಯಾಳಿ ಘಟಕ ಮಂಗಳೂರು ದಕ್ಷಿಣ ಇದರ ವತಿಯಿಂದ ಮಂಗಳವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಖ್ಯಾತ ಅಂಕಣಕಾರ ಸುದರ್ಶನ್ ಹೊಸಮೂಲೆ, ಕೇರಳದಲ್ಲಿ ಹುಟ್ಟಿಕೊಂಡ ಕೆಂಪು ರಾಕ್ಷಸರು ಇಡೀ ಹಿಂದೂ ಸಮಾಜವನ್ನು ನಾಶ ಮಾಡಲು ಹೊರಟಿದ್ದಾರೆ. ಕೇರಳದಲ್ಲಿ ನಡೆಯುತ್ತಿರುವ ಅತೀ ಬೀಭಸ್ಯ ಎನಿಸಿಕೊಂಡ ಹಿಂದೂಗಳ ಕೊಲೆಗಳು ಇನ್ನು ಪಕ್ಕದ ಕರ್ನಾಟಕಕ್ಕೆ ಕಾಲಿಡಲು ಹೆಚ್ಚು ದಿನಗಳು ಬೇಕಿಲ್ಲ, ಕೇರಳವನ್ನು ಆಳುತ್ತಿರುವ ಕೊಲೆಗಟುಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇಡೀ ಪೊಲೀಸ್ ವ್ಯವಸ್ಥೆಯನ್ನು ತನ್ನ ಕೈಯಲ್ಲಿಟ್ಟು ಕೊಂಡು ಹಿಂದೂಗಳನ್ನು ತನ್ನ ಇಷ್ಟ ಬಂದಂತೆ ಕೊಲೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

bjp Malayali unitಹಿಂದೂ ಯುವಕರನ್ನು ಕೊಲೆ ಮಾಡಿ ಸಮಾಜದಲ್ಲಿ ಭೀತಿ ಹುಟ್ಟಿಸುವಂತಹ ಕೆಲಸಗಳನ್ನು ಇಂದು ಕೇರಳದಲ್ಲಿರುವಂತಹ ಸಿಪಿಎಂ ಪಕ್ಷ ಮಾಡುತ್ತಿದೆ. ಹಿಂದೂ ಕಾರ್ಯತರು ಸಂಘಟಿತರಾಗಬಾರದು ಎಂದು ಈ ರೀತಿ ಕೊಲೆಗಳನ್ನು ಮಾಡಲಾಗುತ್ತಿದೆ, ಭಾರತೀಯ ಜನತಾ ಪಾರ್ಟಿ ಈ ಕೃತ್ಯವನ್ನು ಖಂಡಿಸುತ್ತದೆ ಎಂದು ಕ್ಯಾ. ಗಣೇಶ್ ಕಾರ್ಣಿಕ್ ಹೇಳಿದರು.

ರಾಮಣ್ಣ ಸ್ಲಂ ಮೋರ್ಚಾ ಅಧ್ಯಕ್ಷ, ವಿ.ರವೀಂದ್ರ ರಾಜ್ಯ ಸಂಚಾಲಕ ಬಿಜೆಪಿ ಮಳೆಯಾಳಿ ಘಟಕ, ಸಂತೋಷ್ ಕುಮಾರ್ ಶೆಣೈ ಬಿಜೆಪಿ ಮಳೆಯಾಳಿ ಘಟಕ ಮಂಗಳೂರು ದಕ್ಷಿಣ, ವೇದವ್ಯಾಸ ಕಾಮತ್ ಅಧ್ಯಕ್ಷರು ಬಿಜೆಪಿ ಮಂಗಳೂರು ದಕ್ಷಿಣ. ವಿಶ್ವ ಹಿಂದೂ ಪರಿಷತ್ ಮುಖಂಡರಾದ ಜಗದೀಶ ಶೇಣವ, ಎಂ.ಬಿ. ಪುರಾಣಿಕ್ ಮೊದಲಾದವರು ಉಪಸ್ಥಿತರಿದ್ದರು.

bjp Malayali unit

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English