ಮಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರಾದ ಸುಂದರ ಪೂಜಾರಿಯವರು ಆಸನದಲ್ಲಿ ಕುಳಿತಿದ್ದಲ್ಲಿಂದಲೇ ಕುಸಿದು ಅಸ್ವಸ್ಥರಾದ ಘಟನೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಗ್ರಪ್ಪ ನೇತೃತ್ವದಲ್ಲಿ ಅಧಿಕಾರಿಗಳ ಸಭೆ ಮತ್ತೆ ನಡೆದಿದೆ.
ತಕ್ಷಣ ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್, ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್, ಪೊಲೀಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿ, ಡಿಸಿಪಿ ಶಾಂತರಾಜು ಮೊದಲಾದವರು ಅಸ್ವಸ್ಥರಾದ ಸುಂದರ ಪೂಜಾರಿಯವರನ್ನು ಆಸ್ಪತ್ರೆಗೆ ಕರೆದೊಯ್ಯಲು ಸಹಕರಿಸಿದರು.
2016ರ ಜನವರಿ 23ರಂದು ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಇದೇ ಸಮಿತಿ ಸಭೆಯ ಸಂದರ್ಭ ತಮ್ಮ ಇಲಾಖೆಯ ವರದಿ ನೀಡುವ ವೇಳೆ ಉಗ್ರಪ್ಪರಮಾತುಗಳಿಂದ ಸುಂದರ ಪೂಜಾರಿಯವರು ನಿಂತಲ್ಲಿಯೇ ಕುಸಿದು ಬಿದ್ದಿದ್ದರು.
ಸಭೆಯ ಆರಂಭದಲ್ಲಿ ಸ್ವಾಗತ ಮಾಡಿದ ಬಳಿಕ ತಮ್ಮ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಅವರು ನೀಡಿದ್ದರು. ಆದರೆ ಬಳಿಕ ಕುಳಿತಲ್ಲಿಯೇ ಹಠಾತ್ತಾಗಿ ಕುಸಿದರು. ತಮ್ಮ ಜತೆ ಮಧ್ಯಾಹ್ನ ಊಟ ಮಾಡುವಾಗಲೂ ಸಂತೋಷವಾಗಿದ್ದರು ಎಂದು ಉಗ್ರಪ್ಪ ಪ್ರತಿಕ್ರಿಯಿಸಿದರು.
Click this button or press Ctrl+G to toggle between Kannada and English