ಮಂಗಳೂರು : ಬೊಳ್ಳಿ ಮೂವೀಸ್ ಲಾಂಛನದಲ್ಲಿ ತಯಾರಾದ ‘ಅರೆ ಮರ್ಲೆರ್’ ತುಳು ಚಿತ್ರ ಆಗಸ್ಟ್ 11ರಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಾದ್ಯಂತ ಬಿಡುಗಡೆಗೊಳ್ಳಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಚಂಡಿಕೊರಿ ಹಾಗೂ ಬರ್ಸ ಚಿತ್ರದ ನಂತರ ಬೊಳ್ಳಿ ಮೂವೀಸ್ ಹಾಸ್ಯ ಭರಿತ ಮನೋರಂಜನಾತ್ಮಕ ಕುಟುಂಬದ ಸದಸ್ಯರೊಂದಿಗೆ ಇನ್ನೊಂದು ಚಲನ ಚಿತ್ರವನ್ನು ಸಿದ್ಧಪಡಿಸಿದೆ. ಚಿತ್ರದ ಸಹ ನಿರ್ದೇಶಕರಾಗಿ ಅರ್ಜುನ್ ಕಾಪಿಕಾಡ್ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸಚಿನ್ ಉಪ್ಪಿನಂಗಡಿ, ಸಹಾಯಕ ನಿರ್ದೇಶಕರಾಗಿ ಪ್ರಶಾಂತ್ ಕಲ್ಲಡ್ಕ, ಅರ್ಜುನ್ ಕಜೆ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದ್ದಾರೆ.
ಚಿತ್ರದ ಕಥೆ, ಸಾಹಿತ್ಯ, ಸಂಭಾಷಣೆ ಮತ್ತು ಸಂಗೀತ ನಿರ್ದೇಶನ ದೇವದಾಸ್ ಕಾಪಿಕಾಡ್ ಅವರದು.
ಉದಯ ಬಲ್ಲಾಳ್ ಛಾಯಾಗ್ರಹಣ, ಸಂಕಲನ ಸುಜಿತ್ ನಾಯಕ್ , ಕದ್ರಿ ಮಣಿಕಾಂತ್ರ ಹಿನ್ನೆಲೆ ಸಂಗೀತ ಗಿರಿಯವರ ನೃತ್ಯ ನಿರ್ದೇಶನ, ರಾಜೇಶ್ ಕುಡ್ಲಾರವರ ನಿರ್ಮಾಣ ನಿರ್ವಹಣೆಯೊಂದಿಗೆ ನಾಯಕನಾಗಿ ಅರ್ಜುನ್ ಕಾಪಿಕಾಡ್, ನಾಯಕಿಯಾಗಿ ನಿಶ್ಮಿತಾ ಬಿ ಹಾಗೂ ನಟರಾಗಿ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ ವಾಮಂಜೂರು, ಸಾಯಿಕೃಷ್ಣ ಕುಡ್ಲಾ, ಸತೀಶ್ ಬಂದಲೆ ಹಾಗೂ ಚಿತ್ರದಲ್ಲಿ ಚೇತನ್ ರೈ ಮಾಣಿ, ಅನುರಾಗ್ ಬಂಗೇರಾ, ಗೋಪಿನಾಥ್ ಭಟ್, ಸರೋಜಿನಿ ಶೆಟ್ಟಿ, ಸುಜಾತ ಶಕ್ತಿನಗರ, ಸಂದೀಪ್ ಶೆಟ್ಟಿ, ಸುನಿಲ್ ನೆಲ್ಲಿ ಗುಡ್ಡೆ, ಪ್ರಸನ್ನ ಶೆಟ್ಟಿ, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಮಂಗೇಶ್ ಭಟ್ ಮತ್ತು ಖಳನಟನಾಗಿ ಅರ್ಜುನ್ ಕಜೆ ಅಭಿನಯಿಸಲಿದ್ದಾರೆ.
ಆನಂದ್ ಸಂಸ್ಥೆ ಆಡಿಯೋ ಹಕ್ಕು ಪಡೆದಿದೆ. ಗಲ್ಫ್ ರಾಷ್ಟ್ರಗಳಲ್ಲೂ ಸೆಪ್ಟೆಂಬರ್ ತಿಂಗಳ ಮೊದಲವಾರ ಚಿತ್ರ ಬಿಡುಗಡೆಯಾಗಲಿದೆ ಎಂದು ದೇವದಾಸ ಕಾಪಿಕಾಡ್ ತಿಳಿಸಿದ್ದಾರೆ. ಚಿತ್ರ ತಂಡದ ಸದಸ್ಯರು ಸುದ್ದಿಗೊಷ್ಟಿಯಲ್ಲಿ ತಿಳಿಸಿದ್ದಾರೆ.
Click this button or press Ctrl+G to toggle between Kannada and English