ಮಂಗಳೂರು : ಬರಗೂರು ರಾಮಚಂದ್ರಪ್ಪ ಅವರ `ಯುದ್ಧ ಒಂದು ಉದ್ಯಮ’ ಲೇಖನ ಪದಚಿತ್ತಾರ ಪ್ರಸಕ್ತ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯ ಪ್ರಕಟಿಸಿರುವ ಪ್ರಥಮ ಬಿಸಿಎ ಕನ್ನಡ ಪಠ್ಯದಲ್ಲಿ ಗಡಿ ಕಾಯುವ ಸೈನಿಕರನ್ನು ಅತ್ಯಾಚಾರಿಗಳೆಂದು ಬಿಂಬಿಸಿರುವ ಕುರಿತು ತೀವ್ರವಾಗಿ ಖಂಡನೆ ವ್ಯಕ್ತವಾಗಿದೆ.
ಬರಗೂರು ಅವರು ತಮ್ಮ ಸೈನಿಕ ಸ್ನೇಹಿತನೊಬ್ಬನ ಅನುಭವವನ್ನು ಈ ಲೇಖನದಲ್ಲಿ ಕೆಳಗಿನಂತೆ ಉಲ್ಲೇಖಿಸಿದ್ದಾರೆ.
ಗಡಿ ಪ್ರದೇಶದಲ್ಲಿ ಪರಸ್ಪರ ಕೌರ್ಯ ಪ್ರದರ್ಶನ ಮಾಡುವ ಪರಾಕ್ರಮಿಗಳು ಇದ್ದೆ ಇರುತ್ತಾರೆಂಬುದು ನನ್ನ ಗೆಳೆಯನ ಅನುಭವದ ಅಭಿಪ್ರಾಯ. ಪರಸ್ಪರ ಮುತ್ತಿಗೆ ನಡೆದಾಗ ಗಡಿಯ ಗ್ರಾಮಗಳಲ್ಲಿ ಅತ್ಯಾಚಾರವೂ ನಡೆಯುತ್ತದೆಯೆಂದೂ ಎರಡು ರಾಷ್ಟ್ರಗಳ ಕೆಲವು ಸೈನಿಕರು ಇದರಲ್ಲಿ ಭಾಗಿಗಳೆಂದು ಈ ಗೆಳೆಯ ಘಟನೆಗಳ ಸಮೇತ ವಿವರಿಸುತ್ತಾನೆ. ನಾವು ಸಾಮಾನ್ಯವಾಗಿ ನಮ್ಮವರೆಲ್ಲ ಸಜ್ಜನರೂ ಸಂಭಾವಿತರೂ ಎಂದು ನಂಬಿರುತ್ತೇವೆ ಅಥವಾ ಹಾಗೆ ನಂಬಿಸಲಾಗಿರುತ್ತದೆ. ಹೀಗಾಗಿ ನಮ್ಮವರು ಎಂದೂ ಸಭ್ಯತೆಯ ಗಡಿ ದಾಟುವುದಿಲ್ಲವೆಂದು ನಾವು ಭಾವಿಸಿರುತ್ತೇವೆ. ಆದರೆ ಭೌಗೋಳಿಕ ಗಡಿ ದಾಟಿದ ಸೈನ್ಯ ಸಭ್ಯತೆಯ ಗಡಿಯನ್ನು ದಾಟುವ ಸಂಭವ ಇರುತ್ತದೆಯೆಂಬ ಸತ್ಯ ಸೈನ್ಯದಲ್ಲಿದ್ದು ಹೊರಬಂದು ಉಸಿರಾಡುತ್ತಿರುವವರ ಮಾತುಗಳಿಂದ ವ್ಯಕ್ತವಾಗುತ್ತದೆ.
ಈ ಲೇಖನ ಮತ್ತು ಇದನ್ನು ಮಂಗಳೂರು ವಿಶ್ವವಿದ್ಯಾನಿಲಯ ಪಠ್ಯದಲ್ಲಿ ಸೇರ್ಪಡೆ ಮಾಡಿರುವುದು ಕೆಲವರ ಕೆಂಗಣ್ಣಿಗೆ ಗುರಿಯಾಗಿದೆ.
ಯಾರೋ ಒಬ್ಬರ ವೈಯಕ್ತಿಕ ಅಭಿಪ್ರಾಯವನ್ನು ಸಾಮಾನ್ಯೀಕರಿಸಿರುವುದರಿಂದ ಯುವಜನತೆಗೆ ಸೈನಿಕರ ಬಗ್ಗೆ ತಪ್ಪು ಸಂದೇಶ ಹೋಗುತ್ತದೆ ಎಂಬುದು ಹಲವರ ವಾದವಾಗಿದೆ.
Click this button or press Ctrl+G to toggle between Kannada and English