ಮಂಗಳೂರು: ಈ ಬಾರಿ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ಸಪ್ಟೆಂಬರ್ ತಿಂಗಳಲ್ಲಿ ನಡೆಯಲಿದೆ. ಆಗಸ್ಟ್ 14 ಆಷಾಡ ಮತ್ತು ಭರಣಿ ನಕ್ಷತ್ರ ಬಂದಿರುವುದರಿಂದ ಕೃಷ್ಣ ಜನ್ಮಾಷ್ಟಮಿ ಶಾಸ್ತ್ರೋಕ್ತವಾಗಿ ಸಪ್ಟೆಂಬರ್ 13 ರಂದು ಶ್ರೀ ಕೃಷ್ಣ ಜನಿಸಿದ ರೋಹಿಣಿ ನಕ್ಷತ್ರದಲ್ಲಿ ಆಚರಿಸಲಾಗುವುದು ಎಂದು ತೀರ್ಮಾನಿಸಲಾಗಿದೆ.
ಆದರೆ ಮಂಗಳೂರಿನಲ್ಲಿ ಕೃಷ್ಣ ಜನ್ಮಾಷ್ಟಮಿಯನ್ನು ಎರಡೆರಡು ಭಾರಿ ಆಚರಿಸಲಾಗುತ್ತಿದೆ. ಆಗಸ್ಟ್ 14 ಶ್ರೀ ಕೃಷ್ಣ ಜನ್ಮಾಷ್ಠಮಿ ಆಚರಿಸಲು ಭಾನುವಾರ ಎಲ್ಲೆಡೆ ಜನರು ಹಬ್ಬಕ್ಕೆ ಬೇಕಾದ ಸಾಮಗ್ರಿ ಖರೀದಿಯಲ್ಲಿ ತೊಡಗಿಕೊಂಡಿದ್ದಾರೆ.
ಅದರಲ್ಲಿಯೂ ಮಂಗಳೂರಿನಲ್ಲಿ ಹೂವಿನ ವ್ಯಾಪಾರ ಮತ್ತು ಮೂಡೆ ಜೋರಾಗಿದೆ. ಮಾರುಕಟ್ಟೆಯಲ್ಲದೆ ಮಂಗಳೂರಿನ ನಗರದ ರಸ್ತೆಯ ಬದಿಯಲ್ಲಿ ರಾಶಿ ರಾಶಿ ಹೂವುಗಳು ಮಾರಾಟಕ್ಕೆ ಬಂದಿವೆ. ಆರು ಮೂಡೆಗೆ 100 ರೂ. ಆದರೆ, ಹೂವಿನ ಬೆಲೆ ಒಂದು ಮಾರಿಗೆ 30 ರೂಪಾಯಿ
ಹಾಸನ ಹಾಗೂ ಉತ್ತರ ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ಹೂವಿನ ಮಾರಾಟಗಾರರು ಶ್ರೀಕೃಷ್ಣ ಜನ್ಮಾಷ್ಠಮಿಯ ಸಂದರ್ಭದಲ್ಲಿ ಮಂಗಳೂರಿಗೆ ಬಂದು ಮಾರಾಟದಲ್ಲಿ ತೊಡಗಿಸಿಕೊಂಡಿರುತ್ತಾರೆ. ಅದರಂತೆ ಇಂದು ಕೂಡ ನೂರಾರು ಸಂಖ್ಯೆಯ ಹೂವಿನ ಮಾರಾಟಗಾರರು ಹಲವು ಬಗೆಯ ಹೂವುಗಳನ್ನು ಮಾರಾಟಕ್ಕೆ ಇಟ್ಟಿದ್ದು ಗ್ರಾಹಕರು ಖರೀದಿಯಲ್ಲಿ ತೊಡಗಿದ್ದಾರೆ.
Click this button or press Ctrl+G to toggle between Kannada and English