ಜೆಸಿಬಿ ಯಂತ್ರ ಚಲಾಯಿಸಿ ಕಾಮಗಾರಿಗೆ ಚಾಲನೆ ನೀಡಿದ ಸಚಿವ ಖಾದರ್

8:50 PM, Monday, August 14th, 2017
Share
1 Star2 Stars3 Stars4 Stars5 Stars
(No Ratings Yet)
Loading...

jcbಮಂಗಳೂರು : ಮಂಗಳೂರು ಶಾಸಕ  ಯು.ಟಿ. ಖಾದರ್ ತನ್ನ  ಕ್ಷೇತ್ರದ ಮುಡಿಪು ರಸ್ತೆಯ ಕಾಮಗಾರಿಗೆ ಸೋಮವಾರ ಸಚಿವರೇ ಜೆಸಿಬಿ ಯಂತ್ರ ಹತ್ತಿ ಸ್ವತಃ ತಾವೇ ಜೆ.ಸಿ.ಬಿ ವಾಹನ ಚಲಾಯಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದ  ಯು.ಟಿ. ಖಾದರ್ ಜೆಸಿಬಿ ಯಂತ್ರ ಚಲಾಯಿಸುವುದನ್ನು ಕಂಡ ನೆರೆದಿದ್ದ ಜನರು ಅಚ್ಚರಿ ಗೊಂಡರು.

ಖಾದರ್ ದೂರದಿಂದ ಸಚಿವರ ಮುಖ ಪರಿಚಯ ಸ್ಪಷ್ಟವಾಗಿ ತಿಳಿಯದ ವ್ಯಕ್ತಿಯೊಬ್ಬರು, “ಇದೇನು? ಜೆ.ಸಿ.ಬಿ ವಾಹನ ಡ್ರೈವರ್ ಇಷ್ಟು ಟಿಪ್ ಟಾಪ್ ಆಗಿದ್ದಾರೆ ಅಲ್ವಾ?” ಎಂದು ಹೇಳಿದ್ದನ್ನು ಕಂಡು ಮತ್ತೊಬ್ಬರು ಹೇಳಿದರು: “ಅದು ಜೆ.ಸಿ.ಬಿ ಡ್ರೈವರ್ ಅಲ್ಲ, ನಮ್ಮ ಮಿನಿಸ್ಟರ್ ಖಾದರ್ ಸಾಹೇಬ್ರು”. ಯು.ಟಿ‌. ಖಾದರ್ ಅವರ ಸರಳತೆ ಇದೇ ಮೊದಲೇನಲ್ಲ. ಹಿಂದೆಯೂ ಹಲವು ಈ ರೀತಿಯ ಘಟನೆಗಳಿಗೆ ಸಚಿವರು ಉದಾಹರಣೆಯಾಗಿದ್ದರು. ರಾಜ್ಯದ ಸಚಿವರೊಬ್ಬರು ಜೆಸಿಬಿ ಯಂತ್ರ ವಾಹನ ಹತ್ತಿ ಕಾಮಗಾರಿಗೆ ಚಾಲನೆ ನೀಡಿದ್ದು ಅಚ್ಚರಿಗೆ ಕಾರಣವಾಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English