ಎಲ್ಲಾ ಹಿಂದೂ ಕಾರ್ಯಕರ್ತರ ಕೊಲೆಯಲ್ಲಿ ಪಿ.ಎಫ್.ಐ ಸಂಘಟನೆಯ ಕೈವಾಡವಿದೆ : ಜಗದೀಶ ಶೇಣವ

9:23 PM, Wednesday, August 16th, 2017
Share
1 Star2 Stars3 Stars4 Stars5 Stars
(No Ratings Yet)
Loading...

Jagadesh Shenavaಮಂಗಳೂರು : ಶರತ್ ಮಡಿವಾಳ ಹತ್ಯೆಯಲ್ಲಿ  ದ. ಕ. ಜಿಲ್ಲೆಯ ಎಸ್‌ಡಿಪಿಐ ಮತ್ತು ಪಿ.ಎಫ್.ಐ. ನಾಯಕರ ಕೈವಾಡವಿದ್ದು, ಅವರನ್ನು ಬಂಧಿಸಬೇಕು ಮತ್ತು ಈ ಕೊಲೆಗೆ ಸಹಕಾರ ನೀಡಿದ ಎಲ್ಲ ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದು ಪರಿಷತ್ ದ. ಕ. ಜಿಲ್ಲಾಧ್ಯಕ್ಷ ಜಗದೀಶ ಶೇಣವ ಹೇಳಿದ್ದಾರೆ.

ಪಿಎಫ್ಐ ಸಂಘಟನೆಯನ್ನು ಭಯೋತ್ಪಾದಕ ಸಂಘಟನೆಯ ಪಟ್ಟಿಯಲ್ಲಿ ಸೇರಿಸಿ ಕ್ರಮ ತೆಗೆದುಕೊಳ್ಳಬೇಕು, ಕಳೆದ ಎರಡು ವರ್ಷಗಳಿಂದ ನಡೆದ ಹಿಂದು ಕಾರ್ಯಕರ್ತರ ಕೊಲೆಯಲ್ಲಿ ಪಿ.ಎಫ್.ಐ ಸಂಘಟನೆಯ ಕೈವಾಡವಿದ್ದು, ಮೂಡುಬಿದಿರೆಯ ಪ್ರಶಾಂತ್ ಪೂಜಾರಿ, ಬೆಂಗಳೂರಿನ ರುದ್ರೇಶ್, ಮೈಸೂರಿನ ರಾಜು, ಬಂಟ್ವಾಳದ ಶರತ್ ಮಡಿವಾಳ, ವಾಮಂಜೂರಿನ ಚರಣ್ ಕೊಲೆಯಲ್ಲಿ ಪಿ.ಎಫ್.ಐ. ಕಾರ್ಯಕರ್ತರ ಬಂಧನದೊಂದಿಗೆ ದೇಶದ್ರೋಹಿ ಸಂಘಟನೆಯ ಕಾರ್ಯಕರ್ತರ ಕೃತ್ಯ ಬಯಲಾಗಿದೆ.

ಈ ಮೊದಲೇ ಕೇಂದ್ರ ಗುಪ್ತಚರ ಇಲಾಖೆ ಈ ಸಂಘಟನೆಯ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಸೂಚಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶರತ್ ಮಡಿವಾಳ ಹತ್ಯೆಯಲ್ಲಿ ಪಿ.ಎಫ್.ಐ. ಚಾಮರಾಜನಗರ ಜಿಲ್ಲಾಧ್ಯಕ್ಷನ ಬಂಧನವಾಗುವುದರ ಮೂಲಕ ಹಿಂದೂಗಳ ಹತ್ಯೆ ನಡೆಸಿ ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಿ ಕೋಮುಗಲಭೆಗೆ ಹುನ್ನಾರ ನಡೆಸುವ ಸಂಚು ಬಯಲಾಗಿದೆ.

ಶರತ್ ಹಂತಕರ ಸುಳಿವು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಲು ಯಶಸ್ವಿಯಾದ ದ. ಕ. ಜಿಲ್ಲಾ ಪೊಲೀಸರು. ಈ ಕೊಲೆ ಪ್ರಕರಣದಲ್ಲಿ ನೇರ ಆರೋಪಿಗಳ ಬಂಧನ ಮಾಡಿಲ್ಲ ಎಂದರು.

ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ಗೋಪಾಲ್ ಕುತ್ತಾರ್. ಬಜರಂಗ ದಳದ ಸಂಚಾಲಕ ಭುಜಂಗ ಕುಲಾಲ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English