ಮಂಗಳೂರು: ರಾಷ್ಟ್ರ-ಅಂತರಾಷ್ಟ್ರೀಯ ಮಟ್ಟದ ಕ್ರೀಡಾತಾರೆಗಳು ಬೆಳಕಿಗೆ ಬರಲು ಬಂಟ ಕ್ರೀಡೋತ್ಸವದಂತಹ ಕ್ರೀಡಾಕೂಟಗಳು ಪ್ರೇರಣೆ ಸ್ಫೂರ್ತಿ ನೀಡಲು ಹಾಗೂ ಜಾತಿ ಮತದ ಭೇದವೆಣಿಸದೆ ವಿವಿಧ ಬಂಟರ ಸಂಘಗಳು ಇಂತಹ ಕ್ರೀಡಾಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಿ ಎಂದು ಬಂಟರ ಯಾನೆ ನಾಡವರ ಮಾತೃಸಂಘದ ಅಧ್ಯಕ್ಷ ಹಾಗು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಅಜಿತ್‌ಕುಮಾರ್ ರೈ ಮಾಲಾಡಿ ಅವರು ಹೇಳಿದರು.
ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಹಾಗೂ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ ಬಂಟ್ಸ್ ಹಾಸ್ಟೆಲ್‌ನ ಓಂಕಾರನಗರದಲ್ಲಿ ನಡೆಯಲಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ ಪ್ರಯುಕ್ತ ಆ.20 ರಂದು ಬಂಟ್ಸ್ ಹಾಸ್ಟೆಲ್‌ನ ಶ್ರೀ ರಾಮಕೃಷ್ಣ ಕಾಲೇಜು ಮೈದಾನದಲ್ಲಿ ಆಯೋಜಿಸಲಾದ ಅಂತರ್ ಜಿಲ್ಲಾ ಮಟ್ಟದ ಬಂಟಕ್ರೀಡೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಎಂ.ಸುಂದರ ಶೆಟ್ಟಿ, ಬಂಟರ ಮಾತೃ ಸಂಘದ ಪ್ರಧಾನ ಕಾರ್ಯದರ್ಶಿ ವಸಂತ ಶೆಟ್ಟಿ , ಕೋಶಾಧಿಕಾರಿ ರವೀಂದ್ರ ನಾಥ ಶೆಟ್ಟಿ , ಜಯಲಕ್ಷ್ಮೀ ಹೆಗ್ಡೆ, ಸಿದ್ಧಿವಿನಾಯಕ ಪ್ರತಿಷ್ಠಾನದ ಟ್ರಸ್ಟಿಗಳಾದ ಡಾ.ಆಶಾಜ್ಯೋತಿ ರೈ, ಶೆಡ್ಡೆ ಮಂಜುನಾಥ ಭಂಡಾರಿ, ಮಾತೃಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ಕೃಷ್ಣಪ್ರಸಾದ್ ರೈ, ಜಗನ್ನಾಥ್ ಶೆಟ್ಟಿ ಬಾಳ, ಆನಂದ ಶೆಟ್ಟಿ , ಡಾ.ಸಚ್ಚಿದಾನಂದ ರೈ, ಸಬಿತಾ ಶೆಟ್ಟಿ, ಉಮೇಶ್ ರೈ, ಜಿತೇಂದ್ರ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಗಣೇಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳಾರು ಗುತ್ತು ಸ್ವಾಗತಿಸಿದರು. ಬಂಟ ಕ್ರೀಡೋತ್ಸವದ ಸಂಚಾಲಕ ಕಿರಣ ಪಕ್ಕಳ ವಂದಿಸಿದರು. ಜೊತೆಕಾರ್ಯದರ್ಶಿ ಸುಕೇಶ್ ಚೌಟ ಕಾರ್ಯಕ್ರಮ ನಿರ್ವಹಿಸಿದರು.
Click this button or press Ctrl+G to toggle between Kannada and English