ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಗಣೇಶೋತ್ಸವಕ್ಕೆ ಸಿದ್ದಿವಿನಾಯಕ ವಿಗ್ರಹ ಪ್ರತಿಷ್ಠಾಪನೆ

10:47 AM, Friday, August 25th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Bunts Ganeshaಮಂಗಳೂರು : ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಸಾರ್ವಜನಿಕ ಶ್ರೀ ಗಣೇಶೋತ್ಸವಕ್ಕೆ ಶ್ರೀ ಸಿದ್ಧಿ ವಿನಾಯಕ ವಿಗ್ರಹವನ್ನು  ಶರವು ದೇವಸ್ಥಾನದ ಬಳಿಯಿರುವ ಶ್ರೀ ರಾಧಾಕೃಷ್ಣ ದೇವಾಸ್ಥಾನದಿಂದ  ಭವ್ಯ ಮೆರವಣಿಗೆಯೊಂದಿಗೆ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರಕ್ಕೆ ತರಲಾಯಿತು .

ಬಂಟರ ಯಾನೆ ನಾಡವರ ಸಂಘ ಹಾಗೂ ಅದರ ಮಂಗಳೂರು ತಾಲೂಕು ಸಮಿತಿ, ತಾಲೂಕು ಬಂಟರ ಸಂಘ ಮಂಗಳೂರು, ಉಡುಪಿ, ದ.ಕ, ಕಾಸರಗೋಡು ಜಿಲ್ಲೆಯ ಬಂಟರ ಸಂಘಗಳ, ಇತರ ಸಂಘ-ಸಂಸ್ಥೆಗಳ, ಎಲ್ಲಾ ಜಾತಿ ಮತ ಬಾಂಧವರ, ಸಹಕಾರ, ಸಹಬಾಗಿತ್ವದಿಂದ ಬಂಟ್ಸ್ ಹಾಸ್ಟೆಲ್‌ನ ಓಂಕಾರ ನಗರದಲ್ಲಿ ಆಗಸ್ಟ್ 25ರಿಂದ 27ರ ಗಣೇಶೋತ್ಸವ ನಡೆಯಲಿದೆ.

ಮೆರವಣಿಯಲ್ಲಿ ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಟ್ರಷ್ಟಿ ಡಾ. ಆಶಾಜ್ಯೋತಿ ರೈ, ರವಿರಾಜ್ ಶೆಟ್ಟಿ ನಿಟ್ಟೆಗುತ್ತು, ಕೃಷ್ಣಪ್ರಸಾದ್ ರೈ ಬೆಳ್ಳಿಪಾಡಿ, ಬಾಲಕೃಷ್ಣ ಶೆಟ್ಟಿ ಬೆಳ್ಳಿಪಾಡಿಗುತ್ತು,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಸುಂದರ ಶೆಟ್ಟಿ, ಉಪಾಧ್ಯಕ್ಷ ವಸಂತ ಶೆಟ್ಟಿ, ಕಾರ್ಯದರ್ಶಿ ದಿವಾಕರ ಸಾಮಾನಿ ಚೇಳ್ಯಾರು, ಶ್ರೀ ಕೆ. ಉಮೇಶ ರೈ ಪದವು ಮೇಗಿನ ಮನೆ ಮುಂತಾದವರು ಉಪಸ್ಥಿತರಿದ್ದರು.

Bunts Ganesha

ಕಾರ್ಯಕ್ರಮಗಳು:

ಆ. 25 ರಂದು ಬೆಳಗ್ಗೆ 8.45 ಕ್ಕೆ ಸಾಮೂಹಿಕ ಪ್ರಾರ್ಥನೆ, 9.15 ಕ್ಕೆ ಧ್ವಜಾರೋಹಣ, 9.30 ಕ್ಕೆ ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

ಬೆಳಗ್ಗೆ 9.40 ಕ್ಕೆ ತೆನೆಹಬ್ಬ, 9.45 ಕ್ಕೆ ಮೂರ್ತಿ ಪ್ರತಿಷ್ಠೆ, ಗಣಹೋಮ, 10.30 ರಿಂದ ಭಜನಾ ಸೇವೆ ನಡೆಯಲಿದೆ. ಮಧ್ಯಾಹ್ನ 12 ಗಂಟೆಗೆ ಮಹಾಪೂಜೆ, ಅಪರಾಹ್ನ 3 ರಿಂದ “ಶಿವಭಕ್ತ ಮಾರ್ಕಂಡೇಯ” ಹರಿಕಥಾ ಭಾಗವತವು ಹರಿದಾಸ್ ಶರತ್ ಶೆಟ್ಟಿ ಪಡುಪಳ್ಳಿ ಇವರಿಂದ ನಡೆಯಲಿದೆ. ಸಾಯಂಕಾಲ 5 ರಿಂದ 7 ರತನಕ ಧಾರ್ಮಿಕ ಸಭೆ, 7.30 ರಿಂದ ರಂಗಪೂಜೆ , ಹೂವಿನ ಪೂಜೆ, ಪ್ರಸಾದ ವಿತರಣೆ, ನಂತರ ಮೂಡಬಿದ್ರೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ.

ಆ. 26 ರಂದು ಬೆಳಗ್ಗೆ 9ಕ್ಕೆ ದುರ್ಗಾದಾಸ್ ಶೆಟ್ಟಿ ತಂಡದಿಂದ ಭಕ್ತಿಗಾನ ಸುಧೆ, ನಂತರ ಭಜನೆ 11 ಗಂಟೆಗೆ ದೇವರಿಗೆ ಮೂಡಪ್ಪ ಸೇವೆ ನಡೆಯಲಿದೆ. 12 ಗಂಟೆಗೆ ಮಹಾಪೂಜೆ ನಡೆದು ಪ್ರಸಾದ ವಿತರಣೆ 3 ಗಂಟೆಡಗೆ ರಾಮಕೃಷ್ಣ ವಿದ್ಯಾಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಸಂಜೆ 4 ಗಂಟೆಗೆ ಸಹಸ್ರ ನಾರಿಕೇಲ ಮಹಾಗಣಯಾಗದ ಅಂಗವಾಗಿ ಋತ್ವಿಜರಿಂದ ಯಾಗಶಾಲ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಭೂಶುದ್ದಿ, ವಾಸ್ತುರಕ್ಷೋಘ್ನ ಹವನ, ಕಲಶ ಸ್ಥಾಪನೆ, ಅರಣಿ ಮಥನ ನಡೆಯಲಿದೆ . 7.30 ರಿಂದ ರಂಗ ಪೂಜೆ ನಡೆದು ಅಜಯ್ ವಾರಿಯರ್ ತಂಡದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಲಿದೆ.

ಆ. 27 ರಂದು 8.30 ರಿಂದ ಅಷ್ಟೋತ್ತರ ಸಹಸ್ರ ನಾರಿಕೇಲ ಮಹಾಗಣಯಾಗ 12. 30ಕ್ಕೆ ಅನ್ನ ಸಂತರ್ಪಣೆ, 1 ಗಂಟೆಗೆ ಬಂಟರ ಯಾನೆ ನಾಡವರ ಮಾತೃ ಸಂಘದ ಮಹಿಳಾ ಭಜನಾ ಮಂಡಳಿಯ ವತಿಯಿಂದ ಭಜನಾಸೇವೆ ನಡೆಯಲಿದೆ.

ಅಪರಾಹ್ನ 3.30ಕ್ಕೆ ವಿಸರ್ಜ ಪೂರ್ವ ಪೂಜೆ ನಡೆದು, ಬಳಿಕ ದೀಪ ಪ್ರಜ್ವಲನೆಯೊಂದಿಗೆ ಶೋಭಾ ಯಾತ್ರೆಗೆ ಚಾಲನೆ ನೀಡಲಾಗುವುದು. ಬಳಿಕ ಭಜನಾ ತಂಡಗಳ ಸಂಕೀರ್ತನೆಯೊಂದಿಗೆ ಶೋಭಯಾತ್ರೆಯು ಓಂಕಾರನಗರದಿಂದ ಆರಂಭಗೊಂಡು ಬಂಟ್ಸ್ ಹಾಸ್ಟೆಲ್ ವೃತ್ತ, ಪಿ ವಿ ಎಸ್, ಡೊಂಗರಕೇರಿ, ನ್ಯೂಚಿತ್ರ ಟಾಕೀಸ್, ರಥಬೀದಿ, ಶ್ರೀ ವೆಂಕಟರಮಣ ದೇವಸ್ಥಾನವಾಗಿ ಮೂಲಕ ಸಾಗಲಿದ್ದು, ಮಹಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ಶ್ರೀ ಸಿದ್ಧಿವಿನಾಯಕ ದೇವರ ವಿಗ್ರಹವನ್ನು ವಿಸರ್ಜಿಸಲಾಗುವುದು.

Bunts Ganesha

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English