ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರಕ್ಕೆ ಒತ್ತಾಯ -ಕೆ.ಜೆ ಭೋಪಾಯ್ಯ

12:12 PM, Tuesday, September 5th, 2017
Share
1 Star2 Stars3 Stars4 Stars5 Stars
(No Ratings Yet)
Loading...

Vanyadhama ಸುಬ್ರಹ್ಮಣ್ಯ: ಡಾ, ಕಸ್ತೂರಿರಂಗನ್ ವರದಿ ಜಾರಿ ತಂದು ಪರಿಸರ ಸೂಕ್ಷ್ಮ ವಲಯ ಸೃಷ್ಟಿಸುವ ವಿಚಾರದಲ್ಲಿ ರಾಜ್ಯ ಸರಕಾರ ಕೇಂದ್ರದ ಮುಂದೆ ಸಮರ್ಥ ವಾದ ಮಂಡಿಸುವಲ್ಲಿ ವಿಫಲವಾಗಿದೆ. ಕೇಂದ್ರವು ಪ್ರತಿ ಭಾರಿ ಡಾ. ಕಸ್ತೂರಿ ರಂಗನ್ ಪಟ್ಟಿಯಲ್ಲಿರುವ ರಾಜ್ಯಗಳ ಅಭಿಪ್ರಾಯ ಕೇಳಿದ್ದು ಅವಾಗೆಲ್ಲ ನಮ್ಮ ರಾಜ್ಯ ಸರಕಾರ ಸರಿಯಾದ ಆಕ್ಷೇಪ ಸಲ್ಲಿಸಿಲ್ಲಲ್ಲಿ ಇದರ ಪರಿಣಾಮ ಹಲವು ಹಳ್ಳಿಗಳ ಜನತೆಯ ಆತಂಕ ಇನ್ನೂ ಬಗೆಹರಿದಿಲ್ಲ. ಭಾಧಿತ ಭಾಗದ ಜನತೆಯಲ್ಲಿ ಆತಂಕ ಗಟ್ಟಿಯಾಗಿ ಬೇರೂರಿದೆ. ಇದರಿಂದ ಸಂಘರ್ಷ ಹೆಚ್ಚಾಗಿದೆ. ಇತ್ತೀಚೆಗೆ ರಾಜ್ಯದ ಸಂಸದರ ನಿಯೋಗ ಕೇಂದ್ರ ಪರಿಸರ ಖಾತೆ ಸಚಿವರನ್ನು ದೆಹಲಿಯಲ್ಲಿ ಭೇಟಿಯಾಗಿ ಈಗಿನ ಅಧಿಸೂಚನೆ ರದ್ದುಪಡಿಸಿ ಮತ್ತೋಮ್ಮೆ ಪರಿಷ್ಕೃತ ವರದಿಗೆ ಒತ್ತಾಯಿಸಿದ್ದೇವೆ. ಜೊತೆಗೆ ಅರಣ್ಯ ಕಾಯ್ದೆಗೆ ತಿದ್ದುಪಡಿ ತರಲು ಒತ್ತಾಯಿಸುವುದಾಗಿ ಮಡಿಕೇರಿಯ ವಿರಾಜೆಪೇಟೆ ಶಾಸಕ ಮಾಜಿ ಸ್ಪೀಕರ್ ಕೆ.ಜೆ ಭೋಪಾಯ್ಯ ಭರವಸೆ ನೀಡಿದ್ದಾರೆ.

ಪುಷ್ಪಗಿರಿ ಪರಿಸರ ಸೂಕ್ಷ್ಮ ವಲಯ ವಿಸ್ತರಿಸಿ ಸುಳ್ಯ ತಾಲೂಕಿನ ಗ್ರಾಮಗಳ ಮತ್ತು ರಕ್ಷಿತಾರಣ್ಯ ಸೇರಿಸುವುದಕ್ಕೆ ಸಂಬಂದಿಸಿ ಸೋಮವಾರ ಹರಿಹರ ಪಳ್ಳತ್ತಡ್ಕದ ಸಭಾಭವನದಲ್ಲಿ ನಡೆದ ಐದು ಗ್ರಾಮಗಳ ಸಂತೃಸ್ಥರ ಸಮಾಲೋಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

vanyadhamaಅರಣ್ಯದಂಚಿನ ಜನತೆ ಇಂದು ಭಯಭೀತಿಯಿಂದ ಬದುಕುವ ವಾತಾವರಣವಿದೆ. ಸಂಘರ್ಷದ ಹಾದಿ ತಪ್ಪದಂತೆ ಅಧಿಕಾರಿಗಳು ಎಚ್ಚರವಹಿಸಿ ಮುಂದುವರೆಯಬೇಕು. ಅಧಿಸೂಚನೆ ಹೊರಬಿದ್ದ ಬಳಿಕ ಆಕ್ಷೇಪಣೆ ಸಲ್ಲಿಕೆಯಾಗಿ ಮರುಪರಿಶೀಲನೆಗೊಂಡು ವರದಿ ಮಂಡನೆಗೊಂಡು ಅದು ಕಾರ‍್ಯರೂಪಕ್ಕೆ ಬರಲು ಎರಡು ವರ್ಷ ಅವಧಿ ಹಿಡಿಯುತ್ತದೆ.ಅಷ್ಟರ ಒಳಗೆ ಅಧಿಕಾರಿಗಳು ಈ ವಿಚಾರದಲ್ಲಿ ಭಾಧಿತ ಭಾಗದ ಜನತೆಗೆ ತೊಂದರೆ ನೀಡಬಾರದು. ಗೊಂದಲ ಸೃಷ್ಟಿಸಬಾರದು ಎಂದು ಹೇಳಿದರು.

ಸಭೆಯಲ್ಲಿ ಮಡಿಕೇರಿ ವನ್ಯಜೀವಿ ವಿಭಾಗದ ಡಿ.ಎಪ್‌ಒ ಜಯ ಅವರು ಮಾತನಾಡಿ ಪುಷ್ಪಗಿರಿ ವನ್ಯಧಾಮ ವಿಸ್ತರಣೆ ವೇಳೆ ಕಂದಾಯ ಗ್ರಾಮಗಳಿಗೆ ಹಾನಿಯಾಗುವುದಿಲ್ಲ. ಕೊಡಗಿನ ಆರು ಮತ್ತು ಸುಳ್ಯ ತಾಲೂಕಿನ ಕಲ್ಮಕಾರು ಒಂದು ಗ್ರಾಮದ ಪಕ್ಕದಲ್ಲಷ್ಟೆ ವಲಯ ಹಾದುಹೋಗುತ್ತದೆ. ಆದರೆ ಇದರಿಂದ ಈ ಗ್ರಾಮಗಳ ವ್ಯಾಪ್ತಿಯ ಜನವಸತಿ ಪ್ರದೇಶಗಳ ಮೂಲಭೂತ ಸೌಕರ‍್ಯಗಳಿಗೆ ಯಾವುದೇ ಅಡ್ಡಿ ಆಗುವುದಿಲ್ಲ. ಈ ಬಗ್ಗೆ ಆತಂಕ ಬೇಡ. ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಂದ 1. ಕಿ ಮೀ ವ್ಯಾಪ್ತಿಗೆ ಇದು ಅನ್ವಯಿಸುತ್ತದೆ ಎಂದು ಮಾಹಿತಿ ನೀಡಿದರು. ಅಧಿಕಾರಿಯ ಮಾಹಿತಿಗೆ ತೃಪ್ತರಾಗದ ಸಭೆಯಲ್ಲಿದ್ದ ಸಂತೃಸ್ಥರು ಅತೃಪ್ತಿ ವ್ಯಕತಪಡಿಸಿ ಸುಳ್ಳು ಮಾಹಿತಿ ನೀಡಬೇಡಿ ಎಂದು ಅಧಿಕಾರಿಯ ತರಾಟೆಗೆತ್ತಿಕೊಂಡರು. ಅಸಮಧಾನ ಮುಂದುವರೆಯುತ್ತಿರುವುದನ್ನು ಗಮನಿಸಿದ ಅಧಿಕಾರಿ ಮಾಹಿತಿ ಮೊಟಕುಗೊಳಿಸಿದರು.

ಶಾಸಕ ಎಸ್ ಅಂಗಾರ ಮಾತನಾಡಿ ಅಧಿಕಾರಿಗಳು ಅವರ ಅಧಿಕಾರದ ವ್ಯಾಪ್ತಿಯೊಳಗೆ ಮಾಹಿತಿ ನೀಡಿದ್ದಾರೆ. ಸುರಕ್ಷಿತ ಕಾಡು ಮತ್ತು ಡೀಮ್ಡ್ ಫಾರಸ್ಟ್ ಎರಡೂ ಸುರಕ್ಷಿತ ಅರಣ್ಯವೇ ಆಗಿದೆ. ಯೋಜನೆಗೆ ಸಂಬಂದಿಸಿ ಕಾನೂನಿನ ಅದೇಶದಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಯಾವ್ಯಾವ ಹಂತದಲ್ಲಿ ಕೆಲಸಗಳು ಆಗಿವೆ ಎಂದರಿತು ಮುಂದೆ ಆಗಬೇಕಾದ ಕೆಲಸಗಳ ಬಗ್ಗೆ ಕ್ರೀಯೆಗಳು ಆಗಬೇಕು. ಜನತೆ ಸದ್ಯ ಗೊಂದಲದಲ್ಲಿ ಇದ್ದಾರೆ. ಯಾವುದನ್ನೂ ನಂಬದ ಸ್ಥಿತಿ ಇದೆ. ಇದರ ನಿವಾರಣೆಗೆ ಮಾಹಿತಿ ಆಧಾರದಲ್ಲಿ ಅವರಿಗೆ ಸೂಕ್ತ ಮಾಹಿತಿ ನೀಡಬೇಕು ಈ ವಿಚಾರದಲ್ಲಿ ಗಡಿಗುರತಿಸುವ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯ ಪಟ್ಟರು.

ಹರಿಹರ ಪಳ್ಳತ್ತಡ್ಕ ಗ್ರಾ.ಪಂ ಅಧ್ಯಕ್ಷ ಹಿಮ್ಮತ್ ಕೆ.ಸಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಾ.ಪಂ ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ ಸದಸ್ಯೆ ಆಶಾ ತಿಮ್ಮಪ್ಪ ಕೊಲ್ಲಮೊಗ್ರು ಗ್ರಾ.ಪಂ ಅಧ್ಯಕ್ಷೆ ವೀಣಾನಂದ, ಕೊಲ್ಲಮೊಗ್ರು-ಹರಿಹರ ಸಿ.ಎ ಬ್ಯಾಂಕ್ ಅಧ್ಯಕ್ಷ ಹರ್ಷಕುಮಾರ ದೇವಜನ, ಉಪಸ್ಥಿತರಿದ್ದರು.

ಪ್ರಾಸ್ತಾವಿಕವಾಗಿ ತಾ.ಪಂ ಸದಸ್ಯ, ಸಂಘಟಕ ಉದಯ ಕೊಪ್ಪಡ್ಕ ಮಾತನಾಡಿ ಸೂಕ್ಷ್ಮ ವಲಯಕ್ಕೆ ಸಂಬಂದಿಸಿ ಪ್ರತಿಭಟನೆ ಹೋರಾಟಗಳು ನಿರಂತವಾಗಿ ನಡೆಯುತ್ತಿದೆ. ಜನಸಾಮಾನ್ಯರ ವಿರೋಧಗಳ ಲೆಕ್ಕಿಸದೆ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕೆಲಸ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮಸ್ಥ ಮಹೇಶ್ ಕೆ.ಪಿ ಸ್ವಾಗತಿಸಿ ವಂದಿಸಿದರು. ಸಮಾಲೋಚನಾ ಸಭೆಯಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರು ಶಿರಾಡಿ, ದಾಮೋದರ ಗುಂಡ್ಯ, ರೈತ ಹಿತ ರಕ್ಷಣಾ ವೇದಿಕೆ ಅಧ್ಯಕ್ಷ ಹಮೀದ್ ಇಡ್ನೂರು, ಮಲೆನಾಡು ಜಂಟಿ ಕ್ರೀಯಾ ಸಮಿತಿಯ ಪ್ರದೀಪ್ ಕುಮಾರ್, ಭಾದಿತ ಐದು ಗ್ರಾಮಗಳ ಪುರುಷ ಹಾಗೂ ಮಹಿಳೆಯರು ಹಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಶಾಲಾ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಸಭೆಯಲ್ಲಿ ಪಾಲ್ಗೊಂಡರು. ಸಭೆ ಹಿನ್ನಲೆಯಲ್ಲಿ ಕೊಲ್ಲಮೊಗ್ರು, ಕಲ್ಮಕಾರು ಪೇಟೆ ಅಘೋಷಿತ ಬಂದ್ ಆಗಿ ಮಾರ್ಪಾಟ್ಟಿತು, ಈ ಭಾಗದ ಸರ್ವಿಸ್ ವ್ಯಾನು ಹಾಗೂ ಇತರೆ ಬಾಡಿಗೆ ವಾಹನಗಳ ಮಾಲಕರು ವಾಹನ ಸ್ತಗಿತ ಗೊಳಿಸಿ ಸಭೆಯಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ರೌಡಿಗಳಲ್ಲ ಭಯೋತ್ಪಾದಕರೂ ಅಲ್ಲ
ಸೂಕ್ಷ್ಮ ವಲಯ ಜಾರಿಯಿಂದ ಆತಂಕಗೊಂಡು ಯುವಕರು ಹೋರಾಟಕ್ಕೆ ಇಳಿದರೆ ಅಂತವರಿಗೆ ರೌಡಿ ಪಟ್ಟ ಕಟ್ಟಲು ಇಲ್ಲಿಯ ಕೆಲ ಪೊಲೀಸರು ಯತ್ನ ನಡೆಸುತ್ತಿದ್ದಾರೆ. ದಯವಿಟ್ಟು ಕೈ ಮುಗಿದು ಕೇಳುತ್ತೇನೆ ನಿಮ್ಮ ಹೆಂಡತಿ ಮಕ್ಕಳಿಗೆ ಈ ಗತಿ ಬಂದರೆ ನೀವೂ ಏನೂ ಮಾಡುತ್ತೀರಿ. ಎಂದು ಖಾರವಾಗಿ ಅಳಲು ತೋಡಿಕೊಂಡರು. ದಯವಿಟ್ಟು ಆ ರೀತಿ ತಪ್ಪು ಮಾಡಬೇಡಿ ನಮ್ಮದು ಬದುಕಿಗಾಗಿ ಹೋರಾಟ ನಾವು ಭಯೋತ್ಪಾದಕರಲ್ಲ
-ಹಿಮ್ಮತ್ ಕೆ.ಸಿ

ಗ್ರಾಮದ ಜನತೆಗೆ ತೊಂದರೆ ನೀಡುವ ಅರಣ್ಯ ಇಲಾಖೆ ಸಿಬ್ಬಂಧಿಗಳಿಗೆ ಗ್ರಾಮಸ್ಥರ ಸಹಕಾರವಿಲ್ಲ. ಅದಕ್ಕಾಗಿ ಭಾಧಿತ ಗ್ರಾಮದಿಂದ ವೈಲ್ಡ್‌ಲೈಪ್ ಸಿಬ್ಬಂಧಿಗಳನ್ನು ಓಡಿಸಿ ಅವರಿಗೆ ದಿಗ್ಭಂಧನ ಹಾಕಿದ್ದೇವೆ. ವೈಲ್ಡ್‌ಲೈಪ್ ಇಲಾಖೆ ವಿರುದ್ಧ ಅಸಹಕಾರ ಚಳುವಳಿ ಹಮ್ಮಿಕೊಂಡಿದ್ದೇವೆ. ದಿಗ್ಭಂಧನ ತೆರವು ಬಗ್ಗೆ ಗ್ರಾಮದ ಹಿರಿಯರ ಜೊತೆ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು.
– ಉದಯ ಕೊಪ್ಪಡ್ಕ ತಾ.ಪಂ ಸದಸ್ಯ

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English