ಮಂಗಳೂರು : ಯುವಕರು ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಂಘಟಿತರಾಗಿ ಸಾಮಾಜಿಕ ಬದಲಾವಣೆಗೆ ಶ್ರಮಿಸಬೇಕು . ದೇಶದ ಸಂಸ್ಕೃತಿಯನ್ನು ಉಳಿಸುವ ಕಾರ್ಯ ಯುವಶಕ್ತಿಯಿಂದ ಆಗಬೇಕು.’ ಯಾರು ಇತಿಹಾಸವನ್ನು ಅರಿತುಕೊಳ್ಳುತ್ತಾರೆ , ಅವರು ಇತಿಹಾಸ ನಿರ್ಮಿಸುತ್ತಾರೆ ‘ ಎಂದು ಕರ್ನಾಟಕ ರಾಜ್ಯ ಸರ್ಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವರಾದ ಶ್ರೀ ಯು.ಟಿ.ಖಾದರ್ ಹೇಳಿದ್ದಾರೆ.
ಅವರು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೊದಲ ಬಾರಿಗೆ ಪ್ರಜ್ವಲ್ ಯುವಕ ಮಂಡಲ (ರಿ) ಸೂಟರ್ ಪೇಟೆ ಇದರ ನೇತೃತ್ವದಲ್ಲಿ ಹಾಗೂ ಲಯನ್ಸ್ ಕ್ಲಬ್ – ಚೋಟಾ ಮಂಗಳೂರು ಮತ್ತು ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರ ಸಹಭಾಗಿತ್ವದಲ್ಲಿ ನಡೆದ ‘ಕೆಸರ್ ಡೊಂಜಿ ದಿನ ‘ ಕೆಸರುಗದ್ದೆ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು .
ಮುಖ್ಯ ಅತಿಥಿಗಳಾಗಿ ಶ್ರೀ ಆಧಿಶಕ್ತಿ ಭುವನೇಶ್ವರಿ ಸಿದ್ದಪೀಠದ ಧರ್ಮದರ್ಶಿ ಶ್ರೀ ಪ್ರವೀಣ್ ಮಚ್ಚೇಂದ್ರನಾಥ ಬಾಬಾ , ಶ್ರೀ ಕೋರ್ದಬ್ಬು ದೈವಸ್ಥಾನದ ಗುರಿಕಾರರುಗಳಾದ ಶ್ರೀ ಎಸ್. ರಾಘವೇಂದ್ರ . ಪೂವಪ್ಪ ಸಾಲ್ಯಾನ್ , ಕನಕರಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ದೈವದ ಪಾತ್ರಿ ಶ್ರೀ ಅಂತ ಪೂಜಾರಿ , ಜನನಿ ಕನ್ ಸ್ಟ್ರಕ್ಷನ್ ಮಾಲಕರಾದ ಶ್ರೀ ಸುಧಾಕರ್ ಪೂಂಜ , ವೆಲೆನ್ಸಿಯಾ ಚರ್ಚ್ ನ ಧರ್ಮಗುರುಗಳಾದ ಫಾ. ಜೇಮ್ಸ್ ಡಿ ಸೋಜಾ , ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಶ್ರೀ ಎ.ಸಿ.ಭಂಡಾರಿ , ಎಕ್ಕೂರು ಕೃಷಿ ವಿಜ್ಞಾನ ಕೇಂದ್ರ- ಫಿಶರೀಸ್ ಕಾಲೇಜು ಮುಖ್ಯಸ್ಥ ಶ್ರೀ ಶಿವಕುಮಾರ್ ಮಾಗದ , ಉದ್ಯಮಿ ಜನಾರ್ದನ ಅರ್ಕುಳ , ಶ್ರೀ ಕೋರ್ದಬ್ಬು ದೈವಸ್ಥಾನದ ಗೌರವ ಸಲಹೆಗಾರ ಶ್ರೀ ಕೆ.ಪಾಂಡುರಂಗ , ಲಯನ್ಸ್ ಕ್ಲಬ್ ಅಧ್ಯಕ್ಷ ಕುಡ್ಪಿ ಅರವಿಂದ ಶೆಣೈ , ಶ್ರೀ ಶಿವಕುಮಾರ್ ಮಾಗದ ಜಿಲ್ಲಾ ಪಂಚಾಯತ್ ಸದಸ್ಯೆ ಕಸ್ತೂರಿ ಪಂಜ , ಬಿಜೆಪಿ ಮುಖಂಡ ವೇದವ್ಯಾಸ ಕಾಮತ್ , ನಿವೃತ್ತ ಐಟಿಐ ಪ್ರಾಂಶುಪಾಲರಾದ ಶ್ರೀ ಸದಾನಂದ, ಚೈತನ್ಯ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಕೃಷ್ಣ, ವೆಲೆನ್ಸಿಯಾ ಹೋಲಿ ಕ್ರಾಸ್ ವಾರ್ಡ್ ಅಧ್ಯಕ್ಷೆ ಜೋಸ್ ಪಿನ್ ಕೊರೆಯಾ , ಟೈಗರ್ ಕ್ಯಾಂಪ್ ನ ಶ್ರೀ ರಾಜ, ಬಜರಂಗದಳದ ನಗರ ಸಂಚಾಲಕ ಶ್ರೀ ಜಯರಾಮ್ ಆಚಾರ್ಯ , ದರ್ಶನ ಪಾತ್ರಿಗಳಾದ ಶ್ರೀ ಎಸ್.ವೆಂಕಪ್ಪ , ಶ್ರೀ ಎಸ್ . ಗಣೇಶ ಭಾಗವಹಿಸಿದರು
ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕರಾದ ಶ್ರೀ ಜೆ .ಆರ್ .ಲೋಬೋ ಮಾತನಾಡಿ , ನಶಿಸುತ್ತಿರುವ ಜಾನಪದ ಸಂಸ್ಕೃತಿ ಯನ್ನು ಇಂದಿನ ಯುವಜನತೆಗೆ ತೋರಿಸುವಂತಹ ಈ ಕಾರ್ಯಕ್ರಮ ಸರ್ವವಿಧದಲ್ಲೂ ಶ್ಲಾಘನೀಯ. ಕ್ರೀಡೆ ಸಮಾಜದಲ್ಲಿ ಸಾಮರಸ್ಯವನ್ನು ಮೂಡಿಸುವ ಸಾಧನವಾಗಬೇಕೆಂದರು .
ಮಾಜಿ ಸಚಿವರುಗಳಾದ ಶ್ರೀ ಕೃಷ್ಣ ಪಾಲೇಮಾರ್ , ಶ್ರೀ ನಾಗರಾಜ್ ಶೆಟ್ಟಿ, ಕರ್ನಾಟಕ ರಾಜ್ಯ ಸಹಕಾರಿ ವಸತಿ ಮಹಾಮಂಡಲದ ನಿರ್ದೇಶಕ ಶ್ರೀ ವಸಂತ ನಾಯ್ಕ್ , ಚಲನಚಿತ್ರ ನಿರ್ಮಾಪಕ ಶ್ರೀ ತೋನ್ಸೆ ವಿಜಯ ಕುಮಾರ್ ಶೆಟ್ಟಿ , ಉಪಮೇಯರ್ ಶ್ರೀ ರಜನೀಶ್ ಕಾಪಿಕಾಡ್ , ಸಿನಿಮಾ ನಟರಾದ ಶ್ರೀ ಅರವಿಂದ್ ಬೋಳಾರ್ , ಶ್ರೀ ವಿಸ್ಮಯ ವಿನಾಯಕ, ಮೈಮ್ ರಾಮದಾಸ್, ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ಸುನಿಲ್ ಕುಮಾರ್ ಬಜಾಲ್ ,
ಉದ್ಯಮಿಗಳಾದ ಶ್ರೀ ಶುಭಕರ್ ಎಕ್ಕೂರ್, ಶ್ರೀ ಚಿತ್ತರಂಜನ್ ಎಕ್ಕೂರ್ , ಶ್ರೀ ಭರತ್ ಎಕ್ಕೂರ್ , ಮುಂಡಾಲ ಸಮಾಜದ ಅಧ್ಯಕ್ಷ ಶ್ರೀ ರಮೇಶ್ ಕೋಟ್ಯಾನ್ , ಮಂಜಣ್ಣ ಬ್ರಿಗೇಡ್ ಅಧ್ಯಕ್ಷ ಮನೋಜ್ ಕೋಡಿಕೆರೆ ಮುಖ್ಯ ಅತಿಥಿಗಳಾಗಿದ್ದರು .
ಸಮಾರಂಭದಲ್ಲಿ ಪ್ರಜ್ವಲ್ ಯುವಕ ಮಂಡಲದ ಅಧ್ಯಕ್ಷ ಅನಿಲ್ ಪೆರಿಸ್ , ಪ್ರಧಾನ ಕಾರ್ಯದರ್ಶಿ ಶ್ರೀ ಮಹೇಶ್ ಕುಮಾರ್ ಗೌರವ ಸಲಹೆಗಾರರಾದ ಶ್ರೀ ಕೆ.ಕೆ.ಪೇಜಾವರ, ಶ್ರೀ ಎಸ್. ಜಗದೀಶ್ಚಂದ್ರ ಅಂಚನ್ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು .
ಕ್ರೀಡಾಕೂಟದಲ್ಲಿ ಆಯೋಜಿಸಲಾದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು . ಶ್ರೀ ಕೆ.ಕೆ.ಪೇಜಾವರ ಸ್ವಾಗತಿಸಿ , ಕಾರ್ಯಕ್ರಮ ನಿರೂಪಿಸಿದರು . ಸೃಜನ್ ಪೇಜಾವರ ವಂದಿಸಿದರು .
Click this button or press Ctrl+G to toggle between Kannada and English