ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನ ಪಡುಮಲೆಯಲ್ಲಿ ಕೋಟಿ-ಚೆನ್ನಯರ ತಾಯಿ ದೇಯಿ ಬೈದೇದಿ ಔಷಧೀಯ ವನದಲ್ಲಿ ದೇಯಿ ಬೈದೇದಿಯವರ ವಿಗೃಹದ ಎದೆಯ ಭಾಗವನ್ನು ಮುಟ್ಟುವ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿ ಪ್ರಕರಣ ಈಗ ಭಾರಿ ವಿರೋಧ ವ್ಯಕ್ತವಾಗಿದೆ.
ಈಶ್ವರಮಂಗಲದ ನಿವಾಸಿ ಹನೀಫ್ ಎನ್ನುವ ಯುವಕ ಅರಣ್ಯ ಇಲಾಖೆಯು ನಿರ್ಮಿಸಿರುವ ಔಷಧೀಯ ವನದಲ್ಲಿ ನಿರ್ಮಿಸಿರುವ ದೇಯಿ ಬೈದೇದಿಯ ವಿಗೃಹದ ಪಕ್ಕದಲ್ಲಿ ಕೂತು ಎದೆಯ ಭಾಗವನ್ನು ಮುಟ್ಟುವ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎಂದು ಹೇಳಲಾಗಿದೆ .
ಕೋಟಿ-ಚೆನ್ನಯ್ಯ ಅವರ ಜನ್ಮಸ್ಥಳವಾದ ಪಡುಮಲೆಯನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಸುಮಾರು 5 ಕೋಟಿ ರೂಪಾಯಿಗಳನ್ನು 4 ವರ್ಷಗಳ ಹಿಂದೆಯೇ ಬಿಡುಗಡೆ ಮಾಡಿದೆ. ಇದರ ಜೊತೆಗೆ ಅರಣ್ಯ ಇಲಾಖೆಯ ತನ್ನ ಸ್ವ ಇಚ್ಛೆಯಿಂದ ಪಡುಮಲೆಯಲ್ಲಿ ದೇಯಿ ಬೈದೇದಿ ಔಷಧೀಯ ವನಗಳ ಪಾರ್ಕನ್ನು ನಿರ್ಮಾಣ ಮಾಡಿದೆ.
ದೇಯಿ ಬೈದೇದಿ ಆಗಿನ ಕಾಲದ ಪ್ರಸಿದ್ಧ ನಾಟಿ ವೈದ್ಯೆಯಾಗಿದ್ದ ಹಿನ್ನಲೆಯಲ್ಲಿ ಈ ಪಾರ್ಕನ್ನು ಪಡುಮಲೆಯಲ್ಲಿ ಅಭೀವೃಧ್ದಿ ಮಾಡಲಾಗಿದೆ. ಆದರೆ ಸಮರ್ಪಕವಾದ ನಿರ್ವಹಣೆ ಹಾಗೂ ಸೆಕ್ಯುರಿಟಿ ವ್ಯವಸ್ಥೆಯಿಲ್ಲದ ಕಾರಣ ಕೆಲ ಪುಂಡ ಪೋಕರಿ, ಕಿಡಿಗೇಡಿಗಳು ಈ ಪಾರ್ಕನ್ನು ತಮ್ಮ ಕುಚೇಷ್ಟೆಗಳ ತಾಣವನ್ನಾಗಿ ಮಾಡುತ್ತಿದ್ದಾರೆ.
ಯುವಕ ತೆಗೆಸಿಕೊಂಡಿರುವ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಯುವಕನ ಅನಾಗರಿಕ ವರ್ತನೆಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ ಬಿಲ್ಲವ ಸಂಘಟನೆಗಳ ಈತನ ವಿರುದ್ಧ ಕ್ರಮ ಜರುಗಿಸಲು ಆಗ್ರಹಿಸುತ್ತಿವೆ.
ಪುತ್ತೂರು ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಕಾರ್ಯದರ್ಶಿ ಕೇಶವ ಎಂಬವರು ನೀಡಿದ ದೂರಿನ ಮೇರೆಗೆ, ಚಾಲಕ ವೃತ್ತಿಯ ಹನೀಫನನ್ನು ಸಂಪ್ಯ ಪೊಲೀಸರು ಭಾನುವಾರ ಬಂಧಿಸಿ ವಿಚಾರಣೆ ನಡೆಸಿದರು.
Click this button or press Ctrl+G to toggle between Kannada and English