ಮಂಗಳೂರು : ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಇದರ ಕೇರಳ ಘಟಕದ ವತಿಯಿಂದ ನಡೆದ ಓಣಂ ಕನ್ನಡ ಜಾನಪದ ಉತ್ಸವದಲ್ಲಿ ಕ್ರೀಡಾ ಅಂಕಣಕಾರ ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರನ್ನು ಸಮ್ಮಾನಿಸಲಾಯಿತು.
ಶನಿವಾರ ಕುಡಾಲು ಮೇರ್ಕಳದ ಅನುದಾನಿತ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಓಣಂ ಕನ್ನಡ ಜಾನಪದ ಉತ್ಸವದಲ್ಲಿ ಕರ್ನಾಟಕ ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಡಿ.ಎಚ್. ಶಂಕರ ಮೂರ್ತಿ ಇವರು ಎಸ್.ಜಗದೀಶ್ಚಂದ್ರ ಅಂಚನ್ ಅವರನ್ನು ಸನ್ಮಾನಿಸಿದರು . ಕಳೆದ 26 ವರ್ಷಗಳಿಂದ ಕ್ರೀಡಾ ಬರವಣಿಗೆ ಮೂಲಕ ವಿವಿಧ ಪತ್ರಿಕೆಗಳ ಗುರುತಿಸಿಕೊಂಡ ಜಗದೀಶ್ಚಂದ್ರ 2016ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಪಾತ್ರರಾಗಿರುವ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು .
ಈ ಸಮಾರಂಭದಲ್ಲಿ ಪೈವಳಿಕೆ ಗ್ರಾಮ ಪಂಚಾಯಿತ್ ಅಧ್ಯಕ್ಷೆ ಶ್ರೀಮತಿ ಭಾರತಿ ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರುಗಳಾದ ಶ್ರೀ ಕೆ.ಆರ್.ಜಯಾನಂದ , ಶ್ರೀ ಪ್ರಸಾದ್ ರೈ ಕಯ್ಯಾರು , ಮಂಜೇಶ್ವರ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರಾದ ಶ್ರೀ ಸೋಮಶೇಖರ ಜೆ.ಎಸ್. ವೈದ್ಯರಾದ ಶ್ರೀ ಎ.ಎ.ಮಾತುಕುಟ್ಟಿ ವೈದರ್ , ಹಿರಿಯ ಜಾನಪದ ಕಲಾವಿದ ಶ್ರೀ ಮನು ಪಣಿಕ್ಕರ್ , ಪತ್ರಕರ್ತ ಶ್ರೀ ಅಚ್ಚುತ ಚೇವಾರು , ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕದ ಅಧ್ಯಕ್ಷ ಕೇಶವಪ್ರಸಾದ್ ನಾಣಿತ್ತಿಲು, ಪ್ರಧಾನ ಕಾರ್ಯದರ್ಶಿ ಎ.ಆರ್.ಸುಬ್ಬಯ್ಯಕಟ್ಟೆ , ಕೋಶಾಧಿಕಾರಿ ಶ್ರೀ ರವಿ ನಾಯ್ಯಾಪು ಮುಖ್ಯ ಅತಿಥಿಗಳಾಗಿದ್ದರು .
ಈ ಕಾರ್ಯಕ್ರಮ ಕನ್ನಡ ಸಂಸ್ಕೃತಿ ಇಲಾಖೆ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ , ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕೇರಳ ಜಾನಪದ ಅಕಾಡೆಮಿ ಹಾಗೂ ಎಸ್ ಕೆ. ಕನ್ನಡ ಸಂಘ ( ರಿ) ಇದರ ಸಹಯೋಗದಲ್ಲಿ ನಡೆಯಿತು .
Click this button or press Ctrl+G to toggle between Kannada and English