ಮರಳು ಮಾಫಿಯಾಗೆ ಸಿಲುಕಿ ಜಿಲ್ಲಾಡಳಿತ ಪರವಾನಗಿ ನೀಡುವುದನ್ನೇ ನಿಲ್ಲಿಸಿದೆ : ಸಂಜೀವ ಮಠಂದೂರು

9:40 PM, Thursday, September 21st, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Matandoorಮಂಗಳೂರು : ಗಣಿ ಮತ್ತು ಭೂವಿಜ್ಞಾನ ಸಚಿವ ವಿನಯ ಕುಲಕರ್ಣಿ ಅವರ ಭಾವಚಿತ್ರವನ್ನು ಗಣಿ ಮಾಲೀಕರು ಪ್ರಚಾರ ಮಾಡುತ್ತಿದ್ದಾರೆ. ದ.ಕ. ಜಿಲ್ಲೆಯಲ್ಲಿ 6-7 ತಿಂಗಳಿಂದ ಮರಳುಗಾರಿಕೆಗೆ ಜಿಲ್ಲಾಡಳಿತ ಅನುಮತಿ ನೀಡದ ಪರಿಣಾಮ ಜಿಲ್ಲೆಯಲ್ಲಿ ಮರಳಿನ ಕೃತಕ ಅಭಾವ ಸೃಷ್ಟಿಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ದೂರಿದ್ದಾರೆ.

ಮರಳಿಗೆ ಪರವಾನಿಗೆ ಕೋರಿ  ಕೋರಿ 1,364 ಅರ್ಜಿಗಳು ಸಲ್ಲಿಕೆಯಾಗಿದ್ದು, 406 ಅರ್ಜಿಗಳಿಗೆ ಪರವಾನಗಿ ನೀಡಬಹುದು ಎಂದು ಜಿಲ್ಲಾಡಳಿತ ತಿಳಿಸಿದೆ. ಆದರೆ ಈವರೆಗೆ ಮರಳುಗಾರಿಕೆಗೆ ಅನುಮತಿ ನೀಡುವ ಪ್ರಕ್ರಿಯೆಯೇ ನಡೆಯುತ್ತಿಲ್ಲ ಎಂದು ಹೇಳಿದರು.

ಜಿಲ್ಲೆಯಲ್ಲಿ ಮರಳುಗಾರಿಕೆಗೆ ಅವಕಾಶ ನೀಡದೆ ಕಟ್ಟಡ ನಿರ್ಮಾಣ ಕಾಮಗಾರಿಗೆ ತೊಂದರೆಯಾಗುತ್ತಿದೆ. ಕಾರ್ಮಿಕರಿಗೂ ಕೆಲಸವಿಲ್ಲದಂತಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಡಳಿತ ಕಾರಣ. ಒಂದು ಲೋಡ್‌‌ ಮರಳಿಗೆ 18 ಸಾವಿರ ರೂ.ವರೆಗೆ ತಲುಪಿದೆ. ಆ. 15ರಿಂದ ಮರಳುಗಾರಿಕೆಗೆ ಪರವಾನಗಿ ನೀಡಬೇಕಿತ್ತು. ಆದರೆ ಮರಳು ಮಾಫಿಯಾಗೆ ಸಿಲುಕಿ ಜಿಲ್ಲಾಡಳಿತ ಪರವಾನಗಿ ನೀಡುವುದನ್ನೇ ಮುಂದೂಡುತ್ತಿದೆ ಎಂದು ಆರೋಪಿಸಿದರು.

Matandoorದ.ಕ. ಜಿಲ್ಲೆಯಲ್ಲಿ ಎಂ-ಸ್ಯಾಂಡ್ ಲಾಬಿ ಇದೆ. ಕರಾವಳಿಯಲ್ಲಿ ಪಶ್ಚಿಮ ಘಟ್ಟದಿಂದ ಮೆಕ್ಕಲು ಮಣ್ಣಿನ ಜೊತೆಗೆ ಮರಳಿನ ಅಂಶ ಕೂಡ ಸಮುದ್ರವನ್ನು ಸೇರುತ್ತಿದೆ. ಹೀಗಿರುವಾಗ ಇಲ್ಲಿ ಮರಳಿನ ಅಭಾವ ಸೃಷ್ಟಿಯಾಗದು. ಆದರೆ ಸಚಿವ ಕುಲಕರ್ಣಿ ಬರ್ಮಾ, ಮಲೇಷಿಯಾದಿಂದ ಮರಳು ಆಮದು ಬಗ್ಗೆ ಮಾತನಾಡುತ್ತಿದ್ದಾರೆ. ಅನಧಿಕೃತ ಮರಳುಗಾರಿಕೆಯನ್ನು ತಡೆಗಟ್ಟಲು ಕ್ರಮ ಕೈಗೊಳ್ಳುತ್ತಿಲ್ಲ. ಗಣಿ ಇಲಾಖೆ ಅಧಿಕಾರಿಗಳ ಬದಲು ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಒತ್ತಡವನ್ನು ಹಾಕಲಾಗುತ್ತಿದೆ. ಕಾನೂನು ಸುವ್ಯವಸ್ಥೆಯನ್ನು ಸರಿಯಾಗಿ ಕಾಪಾಡಲು ಸಾಧ್ಯವಾಗದ ಪೊಲೀಸರನ್ನು ಗಣಿಗಾರಿಕೆ ವಿರುದ್ಧದ ಕಾರ್ಯಾಚರಣೆಗೆ ಅವಕಾಶ ನೀಡಿರುವುದು ಸರಿಯಲ್ಲ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English