ಮಂಗಳೂರು: ಜಿಲ್ಲಾಡಳಿತ ಹಾಗೂ ಭಾರತ ಸೇವಾದಳ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಇಂದು ಪುರಭವನ ಮುಂಭಾಗದ ಗಾಂಧಿ ಪ್ರತಿಮೆ ಬಳಿ ನಡೆಯಿತು.
ಶಾಸಕ ಜೆ.ಆರ್. ಲೋಬೋ, ಅಪರ ಜಿಲ್ಲಾಧಿಕಾರಿ ಕುಮಾರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ, ಭಾರತ ಸೇವಾದಳ ಜಿಲ್ಲಾಧ್ಯಕ್ಷ ಬಶೀರ್ ಬೈಕಂಪಾಡಿ, ತಹಶಿಲ್ದಾರ್ ಗುರುಪ್ರಸಾದ್, ಸೇವಾದಳದ ಫ್ರಾನ್ಸಿಸ್, ಮಂಜೇಗೌಡ ಮತ್ತಿತರರು ಈ ಕ್ಷಣಕ್ಕೆ ಸಾಕ್ಷಿಯಾದರು.
ಇದೇ ಸಂದರ್ಭದಲ್ಲಿ ಪೌರಕಾಮಿ೯ಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ರುದ್ರಪ್ಪರನ್ನು ಗೌರವಿಸಲಾಯಿತು. ಜೊತೆಗೆ ಗಾಂಧಿ ಜಯಂತಿ ಪ್ರಯುಕ್ತ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರತಂದ ಜನಪದ ವಿಶೇಷಾಂಕವನ್ನು ಶಾಸಕರು ಬಿಡುಗಡೆಗೊಳಿಸಿದರು.
Click this button or press Ctrl+G to toggle between Kannada and English