ಬೆಂಗಳೂರು: ವನ್ಯಜೀವಿ ಸಪ್ತಾಹದ ಅಂಗವಾಗಿ ಲಾಲ್‍ಬಾಗ್‍ನಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಹುಲಿವೇಷ ಕುಣಿತ ಇತ್ತೀಚೆಗೆ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಹುಲಿ ವೇಷಧಾರಿಗಳು ಕುಣಿಯುತ್ತಿದ್ದರೆ ಅಲ್ಲಿದ್ದ ರಾಜ್ಯದ ಅರಣ್ಯ ಸಚಿವ ರಮಾನಾಥ ರೈ ಕೂಡ ಹುಲಿವೇಷದ ತಮಟೆಯ ನಾದಕ್ಕೆ ಹುಲಿಗಳೊಂದಿಗೆ ಹೆಜ್ಜೆ ಹಾಕಿದರು.
63ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಕಬ್ಬನ್‍ಪಾರ್ಕ್‍ನಿಂದ ಲಾಲ್‍ಬಾಗ್ ವರೆಗೆ ವಾಕಥಾನ್ ಆಯೋಜಿಸಲಾಗಿತ್ತು. ಮೊದಲೇ ಅಜಾನುಬಾಹು ಆಗಿರುವ ರಮಾನಾಥ ರೈ ಅವರು ಹುಲಿಯ ಮಾಡಿಕೊಂಡು ಮುಖವನ್ನು ಹುಲಿಯಂತೆ ಮಾಡಿಕೊಂಡು ಅರಚುತ್ತಾ ಹುಲಿವೇಷ ತಂಡದೊಂದಿಗೆ ಕುಣಿದು ಸಂತೋಷಪಟ್ಟರು.
ಈ ಮೊದಲು ವಾಕಥಾನ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಚಿವ ರಮಾನಾಥ ರೈ ಅವರು ವನ್ಯ ಜೀವಿಗಳನ್ನು ರಕ್ಷಣೆ ಮಾಡುವಲ್ಲಿ ನಮ್ಮ ಸರ್ಕಾರ ಹೆಚ್ಚಿನ ಕಾಳಜಿ ವಹಿಸುತ್ತಿದೆ ಎಂದು ಹೇಳಿದರು. ಆನೆಗಳ ಹಾವಳಿಯಿಂದ ಆದ ಹಾನಿಗೆ ಸೂಕ್ತ ಪರಿಹಾರ ನೀಡಲಾಗುತ್ತಿದೆ. ಹಾನಿ ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ವನ್ಯಜೀವಿಗಳ ಸಂರಕ್ಷಣೆಗೆ ಮತ್ತು ಅರಣ್ಯ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.
63ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಲಾಲ್‍ಬಾಗ್‍ವರೆಗೆ ವನ್ಯಜೀವಿ ಸಂರಕ್ಷಣೆ ಸಂಬಂಧ ಬಿತ್ತಿಫಲಕಗಳನ್ನು ಹಿಡಿದು ವಾಕಥಾನ್ ನಡೆಸಲಾಯಿತು. ವಾಕಥಾನ್‍ನಲ್ಲಿ ಚಿತ್ರನಟರಾದ ಪ್ರಕಾಶ್‍ರೈ, ಪುನೀತ್‍ರಾಜ್‍ಕುಮಾರ್ ಮುಂತಾದವರು ಪಾಲ್ಗೊಂಡಿದ್ದರು.
ಇತ್ತೀಚೆಗೆ ಗಣೇಶ ಚತುರ್ಥಿ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರು ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ ಅಧ್ಯಕ್ಷರಾಗಿರುವ ಕೆಳಾರ್ಕಳಬೆಟ್ಟು ವೀರಮಾರುತಿ ವ್ಯಾಯಾಮ ಶಾಲೆಯ ಸದಸ್ಯರು ಗಣೇಶೋತ್ಸವದ ಪ್ರಯುಕ್ತ ಹುಲಿವೇಷ ಹಾಕಿದ್ದ, ಈ ತಂಡ ಆಸ್ಕರ್ ಅವರಿಗೆ ಶುಭಾಶಯ ಕೋರಲು ಬಂದಾಗ ಆಸ್ಕರ್ ಅವರೂ ಕೂಡ ಹುಲವೇಷ ತಂಡದೊಂದಿಗೆ ಹೆಜ್ಜೆಹಾಕಿದ್ದರು.
Click this button or press Ctrl+G to toggle between Kannada and English