ಗುಲ್ಬರ್ಗಾ : ಸೋಮವಾರ ಕಡೂರು ಮತ್ತು ಗುಲ್ಬರ್ಗಾ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಮರು ಮತದಾನದ ಮತಎಣಿಕೆ ಮುಕ್ತಾಯವಾಗಿದ್ದು ಆಡಳಿತ ಪಕ್ಷ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದೆ. , ಪ್ರತಿಷ್ಠೆಯಮಾರ್ಪಟ್ಟಿದ್ದ ,
ಮೂರೂ ಪಕ್ಷಗಳಿಗೆ ಅಗ್ನಿಪರೀಕ್ಷೆಯ ಕಣವಾಗಿದ್ದ ಕಡೂರಿನಲ್ಲಿ ಬಿಜೆಪಿಯ ಡಾ. ವೈ.ಸಿ. ವಿಶ್ವನಾಥ್ ಗೆಲುವು ದಾಖಲಿಸಿದ್ದರೆ, ಜೆಡಿಎಸ್ನ ವೈ.ಎಸ್.ವಿ. ದತ್ತಾ ಅವರು ಸೋಲು ಅನುಭವಿಸಿದ್ದಾರೆ. ಕಾಂಗ್ರೆಸ್ನ ಕೆಂಪರಾಜು ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ.
ಜೆಡಿಎಸ್ನ ಅರುಣಾ ಪಾಟೀಲ್ ರೇವೂರ ಅವರು ಗುಲ್ಬರ್ಗಾ ದಕ್ಷಿಣ ಕ್ಷೇತ್ರದಲ್ಲಿ ಜಯಭೇರಿ ಬಾರಿಸಿದ್ದಾರೆ. ಸಂಸದ ಧರಂ ಸಿಂಗ್ ಪುತ್ರ ಕಾಂಗ್ರೆಸ್ನ ಅಜಯ್ ಸಿಂಗ್ ಮತ್ತು ವಿಧಾನಪರಿಷತ್ ಸದಸ್ಯ ಬಿಜೆಪಿಯ ಶಶೀಲ್ ನಮೋಶಿ ಪರಾಭವಗಳಿಸಿದ್ದಾರೆ.
Click this button or press Ctrl+G to toggle between Kannada and English