ಮೈಸೂರು: ಚಾಮುಂಡಿ ತಾಯಿಗೆ ಭಕ್ತರು ಅರ್ಪಿಸುವ ಸೀರೆಯಿಂದಲೇ ಕೋಟಿ ಆದಾಯ

5:37 PM, Friday, October 6th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

mysuruಮೈಸೂರು:  ಭಕ್ತರು ಕಾಣಿಕೆಯಾಗಿ ಅರ್ಪಿಸುವ ಸೀರೆ ಮತ್ತು ಕುಪ್ಪಸದಿಂದಲೇ ನಾಡ ಅಧಿದೇವತೆ ಚಾಮುಂಡಿ ತಾಯಿಗೆ  ಈ ವರ್ಷ 1.49 ಕೋಟಿ ಆದಾಯ ಬಂದಿದ್ದು, ಈವರೆಗಿನ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ನಿರ್ಮಿಸಿದೆ.

ಶಕ್ತಿ ದೇವತೆ ಹಾಗೂ ನಾಡ ಅಧಿದೇವತೆ ಚಾಮುಂಡಿ ತಾಯಿಯ ದರ್ಶನ ಪಡೆಯಲು ದೇಶದ ಹಾಗೂ ರಾಜ್ಯದ ಮೂಲೆ ಮೂಲೆಗಳಿಂದ ಭಕ್ತರು ಚಾಮುಂಡಿ ಬೆಟ್ಟಕ್ಕೆ ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ತಾಯಿಯಲ್ಲಿ ಹರಕೆ ಕಟ್ಟಿಕೊಳ್ಳುವ ಭಕ್ತರು, ಇಷ್ಟಾರ್ಥಗಳು ಈಡೇರಿದ ಬಳಿಕ ತಾಯಿಗೆ ಸೀರೆ, ಚಿನ್ನ, ಬೆಳ್ಳಿ ಅಥವಾ ಹಣವನ್ನ ಕಾಣಿಕೆಯಾಗಿ ದೇವಾಲಯಕ್ಕೆ ನೀಡುವ ಮೂಲಕ ವಿವಿಧ ಸೇವೆಗಳನ್ನು ಮಾಡುತ್ತಾ ಬಂದಿದ್ದಾರೆ.

mysuruಹೀಗೆ ಭಕ್ತರು ಕಾಣಿಕೆಯಾಗಿ ನೀಡಿದ ಸೀರೆ, ಕುಪ್ಪಸಕ್ಕೆ ಭಕ್ತರಿಂದ ಭಾರಿ ಬೇಡಿಕೆ ಬರುತ್ತಿದ್ದು, ಈ ಸೀರೆ ಮತ್ತು ಕುಪ್ಪಸಗಳನ್ನು ಮಾರಾಟ ಮಾಡಲಾಗಿದೆ. ಇದರಿಂದ ದೇಗುಲಕ್ಕೆ ಈ ವರ್ಷ 1.49 ಕೋಟೆ ಆದಾಯ ಬಂದಿದ್ದು, ದಿನದಿಂದ ದಿನಕ್ಕೆ ಚಾಮುಂಡಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿರುವುದು ಹೆಚ್ಚಿನ ಆದಾಯಕ್ಕೆ ಕಾರಣವಾಗಿದೆ.  ಈ ಹಿಂದೆ ಸೀರೆಗಳನ್ನು ಹರಾಜು ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ದೇಗುಲದ ಆವರಣದಲ್ಲೇ ಸೀರೆಗಳನ್ನು ನಿತ್ಯ ಮಾರಾಟಕ್ಕೆ ಇಡಲಾಗುತ್ತಿದೆ. ದೇವಸ್ಥಾನದ ಆಡಳಿತ ಮಂಡಳಿ ಸೀರೆಗಳ ಬೆಲೆ ನಿಗದಿ ಮಾಡುತ್ತದೆ. ಹಿಂದೆಲ್ಲಾ ಭಕ್ತರು ನೀಡಿದ ಸೀರೆಗಳಿಂದ ವರ್ಷಕ್ಕೆ ಕೇವಲ 40 ರಿಂದ 50 ಲಕ್ಷ ಆದಾಯ ಬರುತ್ತಿತ್ತು. ಆದರೆ ಈ ಬಾರಿ 2016-17 ಸಾಲಿನಲ್ಲಿ 1.49 ಕೋಟಿ ಆದಾಯ ಬಂದಿದೆ ಎನ್ನುತ್ತಾರೆ ದೇವಾಸ್ಥಾನದ ಕಾರ್ಯನಿರ್ವಹಣಾಧಿಕಾರಿ ಪ್ರಸಾದ್.

2011-12 ಸಾಲಿನಲ್ಲಿ 85.69 ಲಕ್ಷ, 5.69 ಲಕ್ಷ, 2012-13 ಸಾಲಿನಲ್ಲಿ 55.42 ಲಕ್ಷ, 2013-14 ಸಾಲಿನಲ್ಲಿ 51.94 ಲಕ್ಷ, 2014-15 ಸಾಲಿನಲ್ಲಿ 47.53 ಲಕ್ಷ, 2015-16 ಸಾಲಿನಲ್ಲಿ 1 ಕೋಟಿ ಆದಾಯ ಬಂದರೆ 2016-17 ಸಾಲಿನಲ್ಲಿ 1.49 ಕೋಟೆ ಆದಾಯ ಬಂದಿದೆ.

2016-17ನೇ ಸಾಲಿನಲ್ಲಿ ಚಾಮುಂಡಿ ಬೆಟ್ಟಕ್ಕೆ ವಿವಿಧ ಮೂಲಗಳಿಂದ 24.09 ಕೋಟಿ ಆದಾಯ ಬಂದಿದ್ದು, ಕಳೆದ ಬಾರಿಗಿಂತ 2 ಕೋಟಿ ಹೆಚ್ಚಳವಾಗಿದೆ. ಪ್ರವೇಶ ಶುಲ್ಕ, ವಿದೇಶಗಳಿಂದ ಬರುವ ಕಾಣಿಕೆ, ಡಿಡಿ, ಮನಿ ಆರ್ಡರ್, ದೇಗುಲದ ವಿವಿಧ ಗುತ್ತಿಗೆ ಹಣ, ಲಡ್ಡು ಪ್ರಸಾದ ಮಾರಾಟ, ಸೇವಾರ್ಥ, ವಿಶೇಷ ಪೂಜೆ, ದೇವತೆಗಳ ಮೆರವಣಿಗೆ ಸೇವೆ, ಅತಿಥಿ ಗೃಹ ಬಾಡಿಗೆ, ದಾಸೋಹ ಭವನ, ಇ-ಸೇವೆಗಳಿಂದ ಆದಾಯ ಸಂಗ್ರವಾಗುತ್ತಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English