ಧಾರ್ಮಿಕ ಒಗ್ಗಟ್ಟಿನಿಂದ ಶಾಂತಿನೆಲೆಸಲು ಸಾಧೄ :ವೀರೇಂದ್ರ ಹೆಗ್ಗಡೆ

7:45 PM, Monday, August 22nd, 2011
Share
1 Star2 Stars3 Stars4 Stars5 Stars
(No Ratings Yet)
Loading...

Krishna Janmashtami/ಶ್ರೀಕೃಷ್ಣ ಜನ್ಮಾಷ್ಟಮಿ

ಉಡುಪಿ : ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿಯ ಸ್ಪರ್ಧಾ ಮಹೋತ್ಸವವನ್ನು ರವಿವಾರ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಉದ್ಘಾಟಿಸಿದರು. ನಮ್ಮ ದೇಶ ಧರ್ಮದ ಆಧಾರದಲ್ಲಿ ಬೆಳೆದು ನಿಂತಿದೆ. ಧಾರ್ಮಿಕ ಒಗ್ಗಟ್ಟಿನಿಂದ ಶಾಂತಿನೆಲೆಸಲು ಸಾಧೄ ಅಲ್ಲದೆ ವಿರೋಧಿಗಳ ಮನಸ್ಸನ್ನು ಕರಗಿಸುವ ಶಕ್ತಿ ನಮ್ಮ ಧರ್ಮಕ್ಕೆ ಇದೆ ಎಂದು ಅವರು ಹೇಳಿದರು.

ಉಡುಪಿ ಕ್ಷೇತ್ರ ಪರಿಚಯ’ ಪುಸ್ತಕವನ್ನು ಡಾ| ವೀರೇಂದ್ರ ಹೆಗ್ಗಡೆ ಅವರು ಅನಾವರಣಗೊಳಿಸಿ. ಕೃಷ್ಣ ಪುಟಾಣಿಯಾಗಿದ್ದಾಗಲೇ ಬಹಳ ತುಂಟನಾಗಿದ್ದ. ಅಮ್ಮನಿಗೆ ಬಹಳ ಕಷ್ಟ ಕೊಡುತ್ತಿದ್ದ. ಆದರೂ ಆಕೆ ಅದನ್ನೆಲ್ಲಾ ಸಹಿಸಿಕೊಂಡು ತನ್ನೆಲ್ಲಾ ಪ್ರೀತಿಯನ್ನು ಕೃಷ್ಣನಿಗೆ ಧಾರೆಯೆರೆದಳು. ಹಾಗೆಯೇ ಪ್ರತಿಯೊಬ್ಬ ತಾಯಿಯೂ ತನ್ನ ಮಕ್ಕಳಿಗೆ ಪ್ರೀತಿಯ ಅಮೃತವನ್ನು ಎರೆಯಬೇಕು. ಭಗವಂತ ಯಾವತ್ತೂ ಸಂಪ್ರೀತ. ಆತನನ್ನು ಮನಸ್ಸಿನ ಒಳಗೆ ನಿಷ್ಕಲ್ಮಶವಾಗಿ ಪ್ರೀತಿಸಿ, ಆರಾಧಿಸಿದಲ್ಲಿ ಯಶಸ್ಸು ಲಭಿಸುತ್ತದೆ ಎಂದು ಅವರು ಹೇಳಿದರು.

Krishna Janmashtami/ಶ್ರೀಕೃಷ್ಣ ಜನ್ಮಾಷ್ಟಮಿ

ಪರ್ಯಾಯ ಶ್ರೀ ಶೀರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರು ಆಶೀರ್ವಚನವಿತ್ತರು. ಮಂತ್ರಾಲಯ ಕ್ಷೇತ್ರದ ಹೆಚ್ಚುವರಿ ಆಪ್ತ ಕಾರ್ಯದರ್ಶಿ ಸುಯಮೀಂದ್ರ ಆಚಾರ್ಯ, ಸಾಯಿರಾಧ ಡೆವಲಪರ್ಸ್‌ನ ಮನೋಹರ್‌ ಶೆಟ್ಟಿ, ಮುಂಬಾಯಿ ಎಸ್‌. ಕುಮಾರ್‌ ಸಂಸ್ಥೆಯ ವಿ. ಮೋಹನ್‌, ವೊಡಾಫೋನ್‌ ಸಂಸ್ಥೆಯ ಸಿಇಒ ಬಿ.ಪಿ. ಸಿಂಗ್‌, ಬೆಂಗಳೂರು ಜ್ಯೋತಿ ಗ್ರೂಪ್‌ ಆಫ್ ಇನ್‌ಸ್ಟಿಟ್ಯೂಟ್‌ನ ಬಿ.ಎನ್‌.ವಿ. ಸುಬ್ರಹ್ಮಣ್ಯ, ಇ ಟಿವಿಯ ಸುಬ್ಬಯ್ಯ ನಾಯ್ಡು, ಜಯಶ್ರೀಕೃಷ್ಣ ಪರಿಸರಪ್ರೇಮಿ ಸಮಿತಿಯ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ, ಕಾರ್ಪೋರೇಶನ್‌ ಬ್ಯಾಂಕಿನ ಜಿಎಂ ಸಿ.ಕೆ. ಗೋಪಾಲ್‌, ಯುವ ಬ್ರಾಹ್ಮಣ ಪರಿಷತ್‌ ಅಧ್ಯಕ್ಷ ರಂಜನ್‌ ಕಲ್ಕೂರ, ವಿದ್ವಾಂಸ ಹರಿದಾಸ ಉಪಾಧ್ಯಾಯ ಉಪಸ್ಥಿತರಿದ್ದರು.

ರಾಮ್‌ಪ್ರಸಾದ್‌ ಭಟ್‌ ಅವರಿಗೆ ಪರ್ಯಾಯ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ‘ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಶಸ್ತಿ’ ನೀಡಿ ಗೌರವಿಸಿದರು. ನಿ, ಚೆನ್ನೈನ ಉಡುಪಿ ಹೋಂನ ಮಾಲಕ ರಾಮ್‌ಪ್ರಸಾದ್‌ ಭಟ್‌ ಅವರಿಗೆ ಪರ್ಯಾಯ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ‘ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಶಸ್ತಿ’ ನೀಡಿ ಗೌರವಿಸಿದರು. ಗೋವಿನ ಪಾವಿತ್ರ್ಯತೆ ಆಧಾರಿತವಾಗಿ ಆಂಗ್ಲ ಭಾಷೆಯಲ್ಲಿ ವಸಂತ ರಾವ್‌ ಅವರಿಂದ ರಚಿತವಾದ ‘ಇಂಡಿಯಾ ಇನ್‌ ಕವ್‌’ ಸಾಕ್ಷ್ಯಚಿತ್ರ, ಶ್ಯಾನುಭಾಗ್‌ ಅವರ ‘ಶ್ರೀಕೃಷ್ಣ ಭಜನಾಮೃತ’, ಲಾತವ್ಯ ಆಚಾರ್ಯ ಅವರು ಇಂಗ್ಲೀಷಿನಲ್ಲಿ ಬರೆದ ‘ಉಡುಪಿ ಕ್ಷೇತ್ರ ಪರಿಚಯ’ ಪುಸ್ತಕವನ್ನು ಡಾ| ವೀರೇಂದ್ರ ಹೆಗ್ಗಡೆ ಅವರು ಅನಾವರಣಗೊಳಿಸಿದರು. ಐವರು ಪಾಕತಜ್ಞರಿಗೆ ‘ಅನ್ನವಿಠಲ’ ಪ್ರಶಸ್ತಿಯನ್ನೂ ನೀಡಲಾಯಿತು.

ಮಠದ ದಿವಾಣ ಲಾತವ್ಯ ಆಚಾರ್ಯ ಸ್ವಾಗತಿಸಿದರು. ಉಪನ್ಯಾಸಕ ಶ್ರೀಕಾಂತ್‌ ಸಿದ್ಧಾಪುರ ಕಾರ್ಯಕ್ರಮ ನಿರೂಪಿಸಿದರು. ಭಾಸ್ಕರ್‌ ರಾವ್‌ ಕಿದಿಯೂರು ವಂದಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English