ಕದ್ರಿ ಶ್ರೀ ಮಂಜುನಾಥ ದೇವಳದಲ್ಲಿ ಕಂಡ ಕೃಷ್ಣ ವೈಭವ

7:40 PM, Monday, August 22nd, 2011
Share
1 Star2 Stars3 Stars4 Stars5 Stars
(No Ratings Yet)
Loading...

Kadri Krishan Vesha Spardhe/ಕೃಷ್ಣ ವೇಷ ಸ್ಪರ್ಧೆ

ಮಂಗಳೂರು : ಕಲ್ಕೂರ ಪ್ರತಿಷ್ಠಾನ ಶ್ರೀಕೃಷ್ಣ ಜನ್ಮಾಷ್ಟಮಿ ಅಂಗವಾಗಿ ರವಿವಾರ ಕದ್ರಿ ಶ್ರೀ ಮಂಜುನಾಥ ದೇವಳದ ಪ್ರಾಂಗಣದಲ್ಲಿ ಆಯೋಜಿಸಿದ ಕೃಷ್ಣ ವೇಷ ಸ್ಪರ್ಧೆ-ರಾಷ್ಟ್ರೀಯ ಮಕ್ಕಳ ಉತ್ಸವವನ್ನು ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಜಯರಾಮ ಭಟ್‌ ಹಾಗೂ ಹಿರಿಯ ಗಮಕ ವಿಧ್ವಾಂಸ ಹೊಸಬೆಟ್ಟು ವಾಗೀಶ್‌ ಆಚಾರ್‌ ಉದ್ಘಾಟಿಸಿದರು.

ಮಾತೆಯರು ಕಡೆಗೋಲಿನಿಂದ ಮೊಸರು ಕಡೆದು ಬೆಣ್ಣೆ ತೆಗೆಯುವ ಹಾಗೂ ಗೋ ಪೂಜೆ ನೆರವೇರಿಸುವ ಮೂಲಕ ಸಾಂಪ್ರದಾಯಿಕವಾಗಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಹಿನ್ನೆಲೆಯಲ್ಲಿ ವಿದ್ವಾನ್‌ ಸತ್ಯವತಿ ಮುಡಂಬಡಿತ್ತಾಯ ಅವರ ಬಳಗ ಹಾಗೂ ಶಾರದಾ ವಿದ್ಯಾಲಯದ ವಿದ್ಯಾರ್ಥಿನಿಯರು ಶ್ರೀಕೃಷ್ಣನ ಗೀತೆಗಳನ್ನು ಹಾಡಿದರು.

Kadri Krishan Vesha Spardhe/ಕೃಷ್ಣ ವೇಷ ಸ್ಪರ್ಧೆ

ಕಂದ ಕೃಷ್ಣ, ತುಂಟ ಕೃಷ್ಣ, ದೇವಕಿ ಕೃಷ್ಣ, ಯಶೋಧ ಕೃಷ್ಣ, ವಸುದೇವ ಕೃಷ್ಣ, ರಾಧಾ ಕೃಷ್ಣ, ಯಕ್ಷ ಕೃಷ್ಣ, ಬಾಲ ಕೃಷ್ಣ, ಕಿಶೋರ ಕೃಷ್ಣ, ಶ್ರೀ ಕೃಷ್ಣ, ಗೀತಾ ಕೃಷ್ಣ, ರಸ ಪ್ರಶ್ನೆ ಸ್ಪರ್ಧೆ, ಸಾಂಪ್ರದಾಯಿಕ ಉಡುಗೆಯೊಂದಿಗೆ ಶಂಖನಾದ ಸೇರಿದಂತೆ 16 ವಿಭಾಗಗಳ ಸ್ಪರ್ಧೆ ಏಕಕಾಲದಲ್ಲಿ 8 ವೇದಿಕೆಗಳಲ್ಲಿ ನಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌, ವಿಧಾನಸಭಾ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಐಒಬಿ ಅಧ್ಯಕ್ಷ ಎಂ. ನರೇಂದ್ರ, ಕಟೀಲಿನ ಲಕ್ಷ್ಮೀನಾರಾಯಣ ಅಸ್ರಣ್ಣ, ಎಸ್‌. ಪ್ರದೀಪ್‌ ಕುಮಾರ್‌ ಕಲ್ಕೂರ, ಹರಿಕೃಷ್ಣ ಪುನರೂರು, ಪ್ರೊ| ಎಂ. ಬಿ. ಪುರಾಣಿಕ್‌, ಎ.ಜೆ. ಶೆಟ್ಟಿ, ನಿಂಗಯ್ಯ, ದಿನೇಶ್‌ ದೇವಾಡಿಗ, ವಿಶ್ವನಾಥ ಆಚಾರ್‌, ಲೀಲಾಕ್ಷ ಕರ್ಕೇರ, ರಘುನಾಥ ಶೆಟ್ಟಿ, ಕೃಷ್ಣಪ್ಪ ಮೆಂಡನ್‌, ಸುಭಾಶ್‌, ವಿ. ಜಿ. ಪಾಲ್‌, ಜನಾರ್ದನ ಹಂದೆ, ಪ್ರಭಾಕರ ರಾವ್‌ ಪೇಜಾವರ, ಸುಧಾಕರ ರಾವ್‌ ಪೇಜಾವರ ಮುಂತಾದವರು ಉಪಸ್ಥಿತರಿದ್ದರು.

Kadri Krishan Vesha Spardhe/ಕೃಷ್ಣ ವೇಷ ಸ್ಪರ್ಧೆ

‘ವಸುದೇವ ಕೃಷ್ಣ ‘ ಈ ಬಾರಿ ಹೊಸ ವಿಶೇಷ ಸ್ಪರ್ಧೆಯಾಗಿತ್ತು. ಪುರುಷ ವಸುದೇವನಾಗಿ ಮಗುವನ್ನು ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಿ ಗಮನ ಸೆಳೆದರು. ಮಹಿಳೆಯರು ಹಾಗೂ ಪುರುಷರು ವಸುದೇವನಾಗಿ ಭಾಗವಹಿಸಿದ್ದರು. ‘ಯಶೋದ ಕೃಷ್ಣ ‘ ವಿಭಾಗದಲ್ಲಿ ಭಾಗವಹಿಸಿದ ಅಜ್ಜಿ ಹಾಗೂ ಮೊಮ್ಮಗುವಿನ ಅಭಿನಯ ವಿಶೇಷ ಗಮನ ಸೆಳೆಯಿತು. ಹಿಂದೆ ಕದ್ರಿ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರು ತಮ್ಮದೇ ಮಗುವಿನೊಂದಿಗೆ ತಾಯಿ ದೇವಕಿಯಾಗಿ ಹಾಗೂ ಮಗು ಕೃಷ್ಣನಾಗಿ ಭಾಗವಹಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಬಿಸಿ ಹಾಲು, ಪೇಡ, ಐಸ್‌ಕ್ರೀಮ್‌ ನೀಡಲಾಯಿತು. ಅಲ್ಲದ ಉಡುಪಿ ಕಡೆಗೋಲು ಕೃಷ್ಣನ ಪಂಚಲೋಹದ ವಿಗ್ರಹ, ಶ್ರೀ ಕೃಷ್ಣ ಚರಿತ್ರೆ ಪುಸ್ತಕ, ಕದ್ರಿ ಶ್ರೀ ಮಂಜುನಾಥ ದೇವರ ಭಾವಚಿತ್ರ, ಪ್ರಶಂಸನಾ ಪತ್ರ ಹಾಗೂ ಪ್ರೋತ್ಸಾಹಕರಿಂದ ನೀಡಲ್ಪಟ್ಟ ಇತರ ಉಡುಗೊರೆಗಳನ್ನು ಆಕರ್ಷಕ ಬಟ್ಟೆ ಚೀಲದೊಂದಿಗೆ ನೀಡಲಾಯಿತು. ಗೀತಾಕೃಷ್ಣ ವಿಭಾಗದ ಎಲ್ಲ ಸ್ಪರ್ಧಾಳುಗಳಿಗೆ ಶ್ರೀಮದ್‌ಭಗವದ್ಗೀತೆಯ ಪ್ರತಿ ವಿತರಿಸಲಾಯಿತು. ಜತೆಗೆ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English