ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ವಿಗ್ರಹಕ್ಕೆ ನಡೆಸಿದ ಅವಮಾನ ಪ್ರಕರಣ, ರಾಜಕೀಯ ಬಣ್ಣ

4:30 PM, Tuesday, October 10th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

jathaಮಂಗಳೂರು:ರಾಜಕೀಯ ಬಣ್ಣ ಪಡೆದುಕೊಂಡ ತುಳುನಾಡಿನ ವೀರ ಪುರುಷರಾದ ಕೋಟಿ ಚೆನ್ನಯರ ತಾಯಿ ದೇಯಿ ಬೈದೇತಿ ವಿಗ್ರಹಕ್ಕೆ ನಡೆಸಿದ ಅವಮಾನ ಪ್ರಕರಣ.

ದೇಯಿ ಬೈದೇತಿ ವಿಗ್ರಹಕ್ಕೆ ಅವಮಾನ ಪ್ರಕರಣವನ್ನು ಖಂಡಿಸಿರುವ ಬಿಜೆಪಿ, ತನ್ನ ಪಕ್ಷದ ವತಿಯಿಂದ ಇವತ್ತು ಪುತ್ತೂರಿನಿಂದ ಪಡುಮಲೆಗೆ ಬೃಹತ್ ಕಾಲ್ನಡಿಗೆ ಜಾಥಾ ಆಯೋಜಿಸಿದೆ. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಇಂದು ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದಿಂದ ಜಾಥಾ ಆರಂಭಗೊಂಡಿದೆ. ಪಡುಮಲೆಯಲ್ಲಿರುವ ದೇಯಿ ಬೈದೇತಿ ವನದ ತನಕ ಈ ಜಾಥಾ ನಡೆಯಲಿದೆ.

jathaಜಾಥಾದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಬಿಜೆಪಿ ಕಾರ್ಯಕರ್ತರು ಸುಮಾರು 13 ಕಿಲೋಮೀಟರ್ ದೂರವನ್ನು ಕಾಲ್ನಡಿಗೆ ಮೂಲಕ ಕ್ರಮಿಸಲಿದ್ದಾರೆ. ಜಾಥಾದಲ್ಲಿ ಸುಮಾರು ಎರಡು ಸಾವಿರಕ್ಕಿಂತ ಹೆಚ್ಚು ಬಿಜೆಪಿ ಕಾರ್ಯಕರ್ತರು‌ ಭಾಗಿಯಾಗಿದ್ದಾರೆ. ಜಾಥಾದಲ್ಲಿ ಅನೇಕ ಸಂಘ ಸಂಸ್ಥೆಗಳ ಪ್ರಮುಖರು, ರಾಜಕೀಯ ಮುಖಂಡರು ಪಾಲ್ಗೊಂಡಿದ್ದಾರೆ.

jathaಕೆಲವು ದಿನಗಳ ಹಿಂದೆ ಪುತ್ತೂರಿನ ಪಡುಮಲೆಯಲ್ಲಿರುವ ದೇಯಿ ಬೈದೇತಿ ಔಷಧವನದಲ್ಲಿನ ದೇಯಿ ಬೈದೇತಿ ಮೂರ್ತಿಯ ಜೊತೆ ಅಶ್ಲೀಲವಾಗಿ ಪೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವ ಹರಿಬಿಟ್ಟಿದ್ದ. ದೇಯಿ ಬೈದೇತಿ ವಿಗ್ರಹಕ್ಕೆ ಅವಮಾನ ಮಾಡಿದ ಆರೋಪಿಯನ್ನು ಪೊಲೀಸರು ನಂತರ ಬಂಧಿಸಿದ್ದರು. ಆದರೆ, ಈ ಷಡ್ಯಂತ್ರಗಳ ಹಿಂದೆ ಇರುವ ಆರೋಪಿಗಳನ್ನು ಬಂಧಿಸಬೇಕೆಂಬ ನೆಪ ಮುಂದಿಟ್ಟು ಬಿಜೆಪಿ ಈ ಜಾಥಾವನ್ನು ಏರ್ಪಡಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English