ದೆಹಲಿ ಕರ್ನಾಟಕ ಸಂಘದಲ್ಲಿ ಜನಕಪುರಿ ಮಹಿಳಾ ಮಂಡಳಿಯ ಸಂಭ್ರಮದ ಬೆಳ್ಳಿ ಹಬ್ಬದ ಆಚರಣೆ

6:28 PM, Tuesday, October 10th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

new delhiನವ ದೆಹಲಿ: ನಮ್ಮ ಮಹಿಳೆಯರ, ಮಹಿಳೆಯರಿಗೋಸ್ಕರ ಮಹಿಳೆಯರ ಕಾರ್ಯಕ್ರಮ, ಮೊದಲುಅವರಿಗೆ ಅಭಿನಂದನೆಗಳು. ಕರ್ನಾಟಕ ಸಂಘ ನನಗೆ ತವರು ಮನೆಯ ಹಾಗೆ ಏಕೆಂದರೆ ನಾನು ಮೊದಲು ಐ.ಎ.ಎಸ್.  ಮಾಡುತ್ತಿರುವಾಗ ನಾನು ಇಲ್ಲಿಯೇ ಉಳಿದುಕೊಂಡು ಐ.ಎ.ಎಸ್. ಉತ್ತೀರ್ಣಳಾಗಿದ್ದು. ಆದ್ದರಿಂದ ದೆಹಲಿ ಕರ್ನಾಟಕ ಸಂಘದಿಂದ ಯಾವಾಗ ಕರೆ ಬಂದರೂ ನಾನು ಎಷ್ಟೇ ಕಾರ್ಯನಿರತಳಾಗಿದ್ದರೂ ಕೂಡ ಬಂದೇ ಬರುತ್ತೇನೆ ಎಂದು ತಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಕನ್ನಡದವರೇ ಆದ ಶ್ರೀಮತಿ ಧನಕ್ಷ್ಮೀ, ಐ.ಎ.ಎಸ್. ನಿವಾಸೀ ಆಯುಕ್ತರು, ಉತ್ತರ ಪ್ರದೇಶ ಭವನ, ನವದೆಹಲಿ, ಅವರು ದೆಹಲಿ ಕರ್ನಾಟಕ ಸಂಘದ ಸಹಯೋಗದೊಡನೆ ಅಕ್ಟೋಬರ್ ೮ರಂದು ಜನಕಪುರಿ ಮಹಿಳಾ ಮಂಡಳಿಯ ಬೆಳ್ಳಿ ಹಬ್ಬದ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಜನಕಪುರಿ ಮಹಿಳಾ ಮಂಡಳಿ ಬೆಳ್ಳಿ ಹಬ್ಬ ಆಚರಿಸುತ್ತಿರುವ ಸಂದರ್ಭದಲ್ಲಿ ಅಂದಿನಿಂದ ಇಂದಿನವರೆಗೆ ಬೆಳೆಸಿಕೊಂಡು ಬಂದಿರುವುದಕ್ಕಾಗಿ ಅದರ ಎಲ್ಲ ಕಾರಣಕರ್ತರನ್ನು ಶ್ಲಾಘಿಸಿದರು.

new delhiಕಾರ್ಯಕ್ರಮದ ಇನ್ನೋರ್ವ ಮುಖ್ಯ ಅತಿಥಿ ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಧರ್ಮಪತ್ನಿ ಶ್ರೀಮತಿ ಸಬೀನಾ, ಅವರು ಮಾತನಾಡುತ್ತಾ ಇಂದು ಮಹಿಳೆಯರು ಎಲ್ಲರಂಗದಲ್ಲೂ ಸಕ್ರಿಯವಾಗಿ ಭಾಗವಹಿಸುತ್ತಿದ್ದು ಪುರುಷರಿಗೆ ಸರಿಸಮಾನರಾಗಿ ನಿಂತಿದ್ದಾರೆ. ಮಹಿಳಾ ಸಬಲೀಕರಣಕ್ಕೆ ಜನಕಪುರಿ ಕನ್ನಡಕೂಟದಂತಹ ಮಹಿಳಾ ಮಂಡಳಿಗಳು ತೊಡಗಿಕೊಂಡಿರುವುದೇ ಸಾಕ್ಷಿಯಾಗಿದೆಎಂದು ನುಡಿದರು.

ಮಹಿಳೆಯರ ಸಬಲೀಕರಣದಲ್ಲಿ ಸದಾತನ್ನನ್ನು ತೊಡಗಿಸಿಕೊಂಡಿರುವ ಕರಕುಶಲತೆ, ಅಡುಗೆ ಹಾಗೂ ಇನ್ನಿತರ ಕನ್ನಡ ನಾಡಿನ ಸಾಂಸ್ಕೃತಿಕ ಆಚರಣೆಗಳನ್ನು ಬೆಂಬಲಿಸುತ್ತಾ ಬಂದಿರುವ ಮಹಿಳಾ ಮಂಡಳಿಯ ಹುಟ್ಟು ಮತ್ತು ಬೆಳದು ಬಂದ ಕುರಿತಾಗಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಜಯಶ್ರೀ ಬಸವರಾಜು ಅವರು ವಿಸ್ತಾರವಾಗಿ ತಿಳಿಸಿದರು. ಮಹಿಳಾ ಮಂಡಳಿಯ ಕಾರ್ಯದರ್ಶಿ ಶ್ರೀಮತಿ ಸವಿತಾ ನೆಲ್ಲಿ ಮಾತನಾಡಿ ಜನಕಪುರಿ ಮಹಿಳಾ ಮಂಡಳಿಯ ಅಭಿವೃದ್ಧಿಗಾಗಿ ಅನೇಕರು ಶ್ರಮಿಸಿದ್ದಾರೆ ಎಂದು ತಿಳಿಸುತ್ತ ಎಲ್ಲರಿಗೂ ಈ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ಕೃತಜ್ಞತೆಯನ್ನು ಸಲ್ಲಿಸಿದರು. ಬೆಳ್ಳಿ ಹಬ್ಬವನ್ನು ಸಂಘದ ಜೊತೆಗೂಡಿ ಆಚರಿಸಲು ನೀಡಿದಸಂಘದ ಸಹಕಾರವನ್ನು ತುಂಬು ಹೃದಯದಿಂದ ಸ್ಮರಿಸಿದರು.

new delhiದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಮಾತನಾಡಿ ದೆಹಲಿ ಕರ್ನಾಟಕ ಸಂಘಕ್ಕೆ ಎರಡು ಸಾಂಸ್ಕೃತಿಕ ಕಣ್ಣುಗಳು, ಒಂದು ದೆಹಲಿ ಸ್ನೇಹಾಕನ್ನಡ ಲೇಡೀಸ್‌ ಅಸೋಯೇಷನ್‌ ಇನ್ನೊಂದು ಜನಕಪುರಿ ಮಹಿಳಾ ಮಂಡಳಿ. ಇಂದು ಜನಕಪುರಿಯ ಮಹಿಳಾ ರತ್ನಗಳು ಕೂಡಿ ಬೆಳ್ಳಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಸಂಘ ಇಂದು ಆರ್ಥಿಕವಾಗಿ ಸದೃಢವಾಗಿದೆ. ದೆಹಲಿಯ ಇತರ ಕನ್ನಡ ಸಂಘ ಸಂಸ್ಥೆಗಳಿಗೂ ಕೂಡಾ ಸಹಕಾರವನ್ನು ನೀಡಿ ಸ್ಪಂದಿಸುತ್ತಿದೆಎಂದು ಈ ಸಂದರ್ಭದಲ್ಲಿ ಹೇಳಿದರು.

ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಲ್ನಾಡ್ ಸಹೋದರಿಯರಾದ ಕನ್ನಡ ಚಿತ್ರರಂಗದ ಪ್ರಖ್ಯಾತ ಹಿನ್ನೆಲೆ ಗಾಯಕಿರಾದ ಮಾನಸ ಹೊಳ್ಳ ಮತ್ತು ಪ್ರಾರ್ಥನಕಿರಣ್‌ ಅವರಿಂದ ಕನ್ನಡದ ವೈವಿಧ್ಯಮಯ ಗೀತೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಡಾ.ಎಸ್.ಎಲ್.ಭಂಡಾರ್‌ಕರ್ ನಿರ್ದೇಶನದ ದಿ.ಹೆಚ್.ಎಸ್‌ ಕುಲಕರ್ಣಿ ರಚಿತ ದೇವರು ಎದ್ದು ಬಂದಾಗ ನಾಟಕವನ್ನು ಪ್ರದರ್ಶಿಸಲಾಯಿತು. ಜನಕಪುರಿ ಮಹಿಳಾ ಮಂಡಳಿಯ ಸದಸ್ಯರು ಮತ್ತು ಮಕ್ಕಳು ವೈವಿಧ್ಯಮಯ ಹಾಡು ಮತ್ತು ನೃತ್ಯಗಳನ್ನು ಪ್ರದರ್ಶಿಸಿದರು.

ದೆಹಲಿ ಕರ್ನಾಟಕ ಸಂಘದ ಉಪಾಧ್ಯಕ್ಷೆ  ಶ್ರೀಮತಿ ಆಶಾಲತ ಎಂ. ಅವರುಕಾರ್ಯಕ್ರಮ ನಿರೂಪಿಸಿದರು ಹಾಗೂ ಜಂಟೀ ಕಾರ್ಯದರ್ಶಿ ಶ್ರೀಮತಿ ಜಮುನಾ ಸಿ. ಮಠದ ಅವರು ಧನ್ಯವಾದಗಳನ್ನು ಅರ್ಪಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English