ಯು.ಟಿ.ಖಾದರ್ ಅವರ ಜನ್ಮ ದಿನ, ದರ್ಗಾದಲ್ಲಿ ಸಕ್ಕರೆ ತುಲಾಭಾರ

5:40 PM, Thursday, October 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

khaderಮಂಗಳೂರು:  ಮಂಗಳೂರು ಶಾಸಕರೂ ಆದ ಯು.ಟಿ.ಖಾದರ್ ಅವರ ಜನ್ಮ ದಿನವಾದ ಗುರುವಾರ ಅವರ ಹಿತೈಶಿ, ಸ್ನೇಹಿತ ರಶೀದ್ ವಿಟ್ಲ ಅವರು ಉಳ್ಳಾಲ ಸೈಯದ್ ಮದನಿ ದರ್ಗಾದಲ್ಲಿ ಸಕ್ಕರೆ ತುಲಾಭಾರ ನಡೆಸಿ 87 ಕಿಲೋ ಗ್ರಾಂ ಸಕ್ಕರೆಯನ್ನು ದರ್ಗಾದ ಸಮಾಜ ಕಲ್ಯಾಣ ಕಾರ್ಯಕ್ಕಾಗಿ ದಾನ ಮಾಡಿದರು.

ಈ ಸಂದರ್ಭ ಸಚಿವರು ದರ್ಗಾಕ್ಕೆ ಚಾದರ್ ಸಮರ್ಪಿಸಿ ನಾಡಿನಲ್ಲಿ ಶಾಂತಿ ಸ್ಥಾಪನೆಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ರಶೀದ್ ವಿಟ್ಲ, ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು, ಉಳ್ಳಾಲ ನಗರಸಭೆ ಸದಸ್ಯ ಉಸ್ಮಾನ್ ಕಲ್ಲಾಪು, ಮಹಮ್ಮದ್ ಲಿಬ್ಝತ್, ಇಸ್ಮಾಯಿಲ್ ಅಕ್ಷರ ಮ್ಯಾಗಸಿನ್ ಮೊದಲಾದವರು ಉಪಸ್ಥಿತರಿದ್ದರು. ದರ್ಗಾ ಸಂದರ್ಶನ ಬಳಿಕ ಯು.ಟಿ.ಖಾದರ್ ಅವರು ತನ್ನ ಹೆತ್ತವರಾದ ಮರ್ಹೂಂ ಯು.ಟಿ.ಫರೀದ್ ಹಾಗೂ ಯು.ಟಿ. ನಸೀಮಾ ಅವರ ಸಮಾಧಿಯನ್ನು ಸಂದರ್ಶಿಸಿ ಪ್ರಾರ್ಥನೆಗೈದರು.

khaderಹೆತ್ತವರ ಸಮಾಧಿಯ ಸುತ್ತ ಬೆಳೆದಿದ್ದ ಹುಲ್ಲು, ಕಸಕಡ್ಡಿಗಳನ್ನು ಸ್ವತಃ ಯು.ಟಿ.ಖಾದರ್ ಅವರೇ ತನ್ನ ಕೈಯ್ಯಾರೆ ಶುಚಿಗೊಳಿಸಿದರು. ಹುಟ್ಟುಹಬ್ಬದ ಒಂದೇ ದಿನದಲ್ಲಿ ಅಭಿಮಾನಿಗಳು ವಿವಿಧೆಡೆ ಆಯೋಜಿಸಿರುವ ಸುಮಾರು ಇಪ್ಪತ್ತಕ್ಕೂ ಹೆಚ್ಚಿನ ಸೇವಾ ಕಾರ್ಯಕ್ರಮಗಳಲ್ಲಿ ಆಹಾರ ಸಚಿವರು ಭಾಗವಹಿಸಿದರು. ಎಲ್ಲೂ ತನ್ನ ಸ್ವಂತ ಹಸ್ತದಲ್ಲಿ ಹುಟ್ಟುಹಬ್ಬದ ಕೇಕ್ ಕತ್ತರಿಸದೆ ಅಲ್ಲಿ ನೆರೆದಿದ್ದವರ ಮೂಲಕ ಕತ್ತರಿಸಿ ಗಮನ ಸೆಳೆದರು. ದೇರಳಕಟ್ಟೆಯಲ್ಲಿ ಮಂಗಳೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಆಹಾರ ಸಚಿವರು ರಕ್ತದಾನ ಮಾಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English