ಉಡುಪಿ: ಕಟ್ಟಡ ಕಾರ್ಮಿಕರಿಂದ ಜಿಲ್ಲಾಧಿಕಾರಿ ಕಛೇರಿ ರಜತಾದ್ರಿ ಎದುರು ಧರಣಿ

5:53 PM, Thursday, October 12th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Udupiಉಡುಪಿ:  ಕಾರ್ಮಿಕರ ಇಲಾಖೆ ಗಳಲ್ಲಿ ಸಿಬ್ಬಂದಿ ನೇಮಕ ಮಾಡುವಂತೆ, ಕಟ್ಟಡ ಕಾರ್ಮಿಕರ ಸೆಸ್‌ಹಣ ಜಿಎಸ್‌ಟಿಗೆ ಒಳಪಡಿಸಿ ಸೌಲಭ್ಯ ಕಡಿತಗೊಳಿಸುವುದನ್ನು ವಿರೋಧಿಸಿ ಹಾಗೂ ಮರಳು ಕೊರತೆ ಬಗೆಹರಿಸಿ ಕಡಿಮೆ ದರದಲ್ಲಿ ಮರಳು ವಿತರಣೆ ಆಗ್ರಹಿಸಿ ಉಡುಪಿ ಜಿಲ್ಲಾ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಕಟ್ಟಡ ಕಾರ್ಮಿಕರು ಗುರುವಾರ ಮಣಿಪಾಲ ಜಿಲ್ಲಾಧಿಕಾರಿ ಕಛೇರಿ ರಜತಾದ್ರಿ ಎದುರು ಧರಣಿ ನಡೆಸಿದರು.

ಧರಣಿಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲೆಯಲ್ಲಿ ಯುನಿಟ್‌ಗೆ 2000ರೂ.ಗಿಂತ ಜಾಸ್ತಿ ಆಗದಂತೆ ಸಮರ್ಪಕವಾಗಿ ಮರಳು ಪೂರೈಸುವ ಕೆಲಸ ಮಾಡಬೇಕು ಮತ್ತು ಜಿಲ್ಲೆಯಲ್ಲಿ ರುವ ಬೇರೆ ಬೇರೆಯ ದರವನ್ನು ಕೂಡಲೇ ಸರಿಪಡಿಸಬೇಕು. ಜಿಲ್ಲೆಯ ಕಾರ್ಮಿಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಹಾಗೂ ಮೂಲಭೂತ ಸೌಕರ್ಯ ಕೊರತೆ ಯಿಂದಾಗಿ ಹಳೆಯ ಕೆಲವು ಅರ್ಜಿಗಳು ಬಾಕಿ ಉಳಿದಿದ್ದು, ಅವುಗಳನ್ನು ಕೂಡಲೇ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.

ಕಾರ್ಮಿಕ ಮಂಡಳಿಯಿಂದ ಸೌಲಭ್ಯಗಳನ್ನು ಪಡೆಯಲು ಪ್ರತಿವರ್ಷ ಮಾಲಕರಿಂದ ಒಪ್ಪಿಗೆ ಪತ್ರ, ವೇತನ ಚೀಟಿ, ಹಾಜರಾತಿ ಪಟ್ಟಿಯನ್ನು ಕಡ್ಡಾಯ ವಾಗಿ ಹಾಜರು ಪಡಿಸಬೇಕೆಂಬ ಸುತ್ತೋಲೆಯನ್ನು ಕೈಬಿಟ್ಟು ಹಿಂದಿನಂತೆ ಮುಂದುವರೆಸಲು ಹೊಸದಾದ ಸುತ್ತೋಲೆ ಹೊರಡಿಸಬೇಕು. ನರೇಗಾ ಯೋಜನೆ ಜಾರಿಗಾಗಿ ಕೇಂದ್ರ ಸರಕಾರ ಬಿಡುಗಡೆ ಮಾಡುವ ಹಣವನ್ನು ಯೋಜನೆಯಡಿಯಲ್ಲಿ ನೋಂದಣಿ ಮಾಡಿಸುವ ಕಾರ್ಮಿಕರ ಕಲ್ಯಾಣಕ್ಕೆ ಪಡೆದುಕೊಳ್ಳಬೇಕು ಎಂದರು.

ರಾಜ್ಯದಲ್ಲಿ ಸಿಐಟಿಯು ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಗಳನ್ನು ಒಳ ಗೊಂಡ ಸ್ಟೇಟ್ ಅಡ್ವೈಸರಿ ಬೋರ್ಡ್‌ನ್ನು ಕೂಡಲೇ ರಚಿಸಬೇಕು. ಪಿಂಚಣಿ ಯನ್ನು 3000ರೂ.ಗೆ ಹೆಚ್ಚಿಸಬೇಕು. ಕಲ್ಯಾಣ ಮಂಡಳಿ ನಿಧಿಯನ್ನು ಕಾರ್ಮಿಕರ ಅಭಿವೃದ್ಧಿಗೆ ಮಾತ್ರ ಬಳಸಬೇಕು. ಜಿಎಸ್‌ಟಿ ಮತ್ತು ನೋಟು ರದ್ಧತಿಯಿಂದ ಕಟ್ಟಡ ಕಾರ್ಮಿಕರಿಗೆ ಆಗಿರುವ ನಷ್ಟಕ್ಕೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದರು. ಬಳಿಕ ಈ ಕುರಿತ ಮನವಿಯಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಕಾರ್ಮಿಕ ಸಚಿವರಿಗೆ ಸಲ್ಲಿಸಲಾಯಿತು. ಧರಣಿಯಲ್ಲಿ ಸಮಿತಿಯ ಜಿಲ್ಲಾ ಸಂಚಾಲಕರಾದ ಶೇಖರ ಬಂಗೇರ, ಸುರೇಶ್ ಕಲ್ಲಾಗರ, ಮುಖಂಡರಾದ ದಾಸ ಭಂಡಾರಿ, ದಯಾನಂದ ಕೋಟ್ಯಾನ್, ಎಚ್.ನರಸಿಂಹ, ಕವಿರಾಜ್ ಮೊದಲಾವರು ಉಪಸ್ಥಿತರಿದ್ದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English