ಪದವೀಧರ ಕ್ಷೇತ್ರದ ಚುನಾವಣೆ ನಡೆಸುವಾಗಲೂ ಹೊಸದಾಗಿ ಮತದಾರರ ನೋಂದಣಿ ನಡೆಸಬೇಕು :ಭೋಜೇಗೌಡ

11:39 AM, Friday, October 13th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

JDSಮಂಗಳೂರು: ಜೆಡಿಎಸ್ ರಾಜ್ಯ ವಕ್ತಾರ ಭೋಜೇಗೌಡ ಮುಂದಿನ ಜೂನ್‌ನಲ್ಲಿ ನಡೆಯಲಿರುವ ನೈಋತ್ಯ ಶಿಕ್ಷಕರ ಹಾಗೂ ಪದವೀಧರರ ಕ್ಷೇತ್ರದ ಚುನಾವಣೆಗೆ ಶಿಕ್ಷಕ, ಪದವೀಧರ ಮತದಾರರ ನೋಂದಣಿಗೆ ಚುನಾವಣಾ ಆಯೋಗ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು  ಆಗ್ರಹಿಸಿದ್ದಾರೆ.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ, ಪ್ರತಿ ಬಾರಿ ಶಿಕ್ಷಕರ ಪದವೀಧರ ಕ್ಷೇತ್ರದ ಚುನಾವಣೆ ನಡೆಸುವಾಗಲೂ ಹೊಸದಾಗಿ ಮತದಾರರ ನೋಂದಣಿ ನಡೆಸಬೇಕು. ಕಳೆದ ಅವಧಿಯಲ್ಲಿ ತಾನು ಸ್ಪರ್ಧಿಸಿದಾಗ ಒಂದೂವರೆ ಲಕ್ಷದಷ್ಟು ಶಿಕ್ಷಕ ಪದವೀಧರರ ಪೈಕಿ ಮತದಾರರಾಗಿ ನೋಂದಣಿಯಾದವರ ಸಂಖ್ಯೆ ಕೇವಲ 18ರಿಂದ 20 ಸಾವಿರ. ಉಳಿದಂತೆ ಈ ಕ್ಷೇತ್ರದಲ್ಲಿ ಮತದಾರರ ನೋಂದಣಿಗೆ ಚುನಾವಣಾ ಆಯೋಗವೇ ಮುಂದಾಳತ್ವ ವಹಿಸಬೇಕು ಎಂದರು.

ಇಲ್ಲವೆ ಶಿಕ್ಷಕರೇ ಸ್ವಯಂ ಆಗಿ ನೋಂದಣಿ ಮಾಡಿಸಲು ಅವಕಾಶವನ್ನು ನೀಡಬೇಕು. ಪ್ರಸಕ್ತ ಶಿಕ್ಷಕರೇ ತಾಲೂಕು ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕಾಗಿದ್ದು, ಇದು ಶಿಕ್ಷಕರಿಗೆ ಕಷ್ಟಕರವಾಗುತ್ತಿದೆ. ಹಾಗಾಗಿ ಇತರೆ ಚುನಾವಣೆಯಂತೆ ಇಲ್ಲಿಯೂ ಆಯೋಗವೇ ಮತದಾರರ ನೋಂದಣಿಗೆ ಮುಂದಾದರೆ ಉತ್ತಮವಾಗುತ್ತದೆ ಎಂದು ಹೇಳಿದರು. ಗ್ರಾಮೀಣ ಪ್ರದೇಶದ ಸರ್ಕರಿ ಶಾಲೆಗಳಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿಯ ಹಿಂದುಳಿದ ಮಕ್ಕಳ ಉನ್ನತೀಕರಣಕ್ಕೆ ರಾಜ್ಯ ಸರ್ಕಾರ ಜಾರಿಗೆ ತಂದ `ವಿಶ್ವಾಸ ಕಿರಣ’ ಕಾರ್ಯಕ್ರಮವನ್ನು ಕೈಬಿಡುವಂತೆ ಭೋಜೇಗೌಡ ಒತ್ತಾಯಿಸಿದರು.

ರಜಾ ದಿನಗಳಲ್ಲಿ ಶಿಕ್ಷಕರು ಗ್ರಾಮೀಣ ಶಾಲೆಗಳಿಂದ ಹಿಂದುಳಿದ ವರ್ಗ ಹಾಗೂ ಎಸ್ಸಿ ಎಸ್ಟಿ ಮಕ್ಕಳನ್ನು ತಾಲೂಕಿನ ಶಾಲೆಗೆ ಕರೆದುಕೊಂಡು ಬರಬೇಕು. ಈ ಮಕ್ಕಳಿಗೆ ಮಧ್ಯಾಹ್ನವರೆಗೆ ತರಗತಿಯನ್ನು ನಡೆಸಲಾಗುತ್ತದೆ. ಸಂಜೆ ಮಕ್ಕಳನ್ನು ಮರಳಿ ಕಳುಹಿಸಲಾಗುತ್ತದೆ. ಐಎಎಸ್ ಅಧಿಕಾರಿಗಳ ಮಾತು ಕೇಳಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗೆ ಪ್ರಯೋಜನವಾಗದು. ಇದರ ಬದಲು ಶಾಲಾ ದಿನಗಳಲ್ಲಿ ಬೆಳಗ್ಗೆ 9 ಗಂಟೆ ಬದಲು 8 ಗಂಟೆಗೆ ವಿಶೇಷ ತರಗತಿಯನ್ನು ಆರಂಭಿಸಬಹುದು. ರಜಾ ದಿನಗಳಲ್ಲಿ ತರಗತಿ ನಡೆಸಿದರೆ ಮಕ್ಕಳಿಗೆ ಮಾತ್ರವಲ್ಲ ಶಿಕ್ಷಕರಿಗೂ ಪ್ರಯೋಜನವಾಗದು ಎಂದು ಭೋಜೇಗೌಡ ತಿಳಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English