ಕುಂದಾಪುರ: ಸಿಪಿಎಂ ಪಕ್ಷವು ಬೆಂಗಳೂರಿಗೆ ಹಾಸನ-ಕುಣಿಗಲ್ ಮಾರ್ಗವಾಗಿ ಮತ್ತೊಂದು ರೈಲು ಆರಂಭಿಸುವಂತೆ ಆಗ್ರಹಿಸಿ ಕುಂದಾಪುರ ರೈಲ್ವೆ ನಿಲ್ದಾಣದಲ್ಲಿ ಕಾರವಾರ-ಬೆಂಗಳೂರು ರೈಲಿನಲ್ಲಿ ಕರಪತ್ರ ಹಂಚಿ ಪ್ರಚಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.
ಈ ಹಿಂದೆ ಜಿಲ್ಲೆಯಲ್ಲಿ ಸಾರ್ವಜನಿಕರಿಂದ 14,000 ಸಹಿ ಸಂಗ್ರಹ ಮಾಡಿ ಹುಬ್ಬಳ್ಳಿ ವಿಭಾಗೀಯ ಜನರಲ್ ಮೇನೇಜರ್ಗೆ ನೀಡಲಾಗಿತ್ತು. ಈ ಬಗ್ಗೆ ಯಾವುದೇ ಕ್ರಮ ವಹಿಸದಿರುವುದರಿಂದ ಪಕ್ಷವು ಅ.23ರಂದು ಬೆಳಗ್ಗೆ 11ಗಂಟೆಗೆ ಬೈಂದೂರು ಮತ್ತು ಸಂಜೆ 4 ಗಂಟೆಗೆ ಕುಂದಾಪುರ ರೈಲು ನಿಲ್ದಾಣದಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಪಕ್ಷದ ಮುಖಂಡರು ತಿಳಿಸಿದರು.
ಈ ಸಂದರ್ಭದಲ್ಲಿ ಸಿಪಿಎಂ ಮುಖಂಡರಾದ ಎಚ್.ನರಸಿಂಹ, ಸುರೇಶ್ ಕಲ್ಲಾಗರ, ಬಲ್ಕೀಸ್ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English