ಮಂಗಳೂರು: ಶ್ರೀನಿವಾಸ ತಾಂತ್ರಿಕ ಮಹಾವಿದ್ಯಾಲಯದ ಎಂ.ಬಿ.ಎ ವಿದ್ಯಾರ್ಥಿ ಸಂಘ ಉದ್ಘಾಟನಾ ಸಮಾರಂಭವು ಅಕ್ಟೋಬರ್ 12 ರಂದು ಸಂಸ್ಥೆಯ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಮುಖ್ಯ ಅತಿಥಿಯಾಗಿ, ಮಂಗಳೂರಿನ, ಪದ್ವ ಕಾಲೇಜು ನಂತೂರು, ಇಲ್ಲಿಯ ಪ್ರಾಂಶುಪಾಲರಾದ ಫಾ| ಆಲ್ವಿನ್ ಸೆರಾವೊ, ರವರು ಆಗಮಿಸಿದ್ದರು.ಇವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತಾನಾಡಿದರು. ಸಮತೋಲನವಾದ ಜೀವನವನ್ನು ನಡೆಸಲು, ಇಂತಹ ವಿದ್ಯಾರ್ಥಿ ಸಂಘಗಳ ಪ್ರಾಮುಖ್ಯತೆಯನ್ನು ತಿಳಿಸಿದರು.
ವಿದ್ಯಾರ್ಥಿ ಸಂಘದ ಅದ್ಯಕ್ಷನಾದ ವಿಜೇತ್ ಕುಮಾರ್ ರೈ ನೆರೆದವರನ್ನು ಸ್ವಾಗತಿಸಿದರು. ದೀಪ ಬೆಳಗುವುದರ ಮೂಲಕ ಆರಂಭವಾದ ಕಾರ್ಯಕ್ರಮವು ಸಂಘದ ಶಿಕ್ಷಕ ಸಲಹೆಗಾರರಾದ ಪ್ರೊ. ಪ್ರವೀಣ.ಡಿ ರವರು ಸಂಘದ ಕಾರ್ಯಕರ್ತರನ್ನು ಪರಿಚಯಿಸುವುದರೊಂದಿಗೆ ಮುಂದುವರೆಯಿತು. ಸಂಘದ ಕಾರ್ಯದರ್ಶಿಯಾದ ದೇವಿಕಾ.ಕೆ ರವರು ಸಂಘದ ಆಕ್ಷನ್ ಪ್ಲಾನ್ ನನ್ನು ಓದಿದರು. ನಂತರ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಮಾರಂಭದ ಅಧ್ಯಕ್ಷರಾದ ಡಾ. ಶ್ರೀನಿವಾಸ ಮಯ್ಯ ಡಿ ರವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರಿಸ್ಥಿತಿಗೆ ತಕ್ಕಂತೆ ಹೇಗೆ ತಮ್ಮನ್ನು ತಾವು ಅಳವಡಿಸಿಕೊಂಡು ಯಶಸ್ವಿಯಾಗಿ ಮುನ್ನಡೆಯಬೇಕು ಎಂದು ತಿಳಿ ಹೇಳಿದರು.
ಎಂ.ಬಿ.ಎ ವಿಭಾಗದ ಮುಖ್ಯಸ್ಥರಾದ ಪ್ರೊ. ಹರಿಪ್ರಕಾಶ್ ಯು.ಪಿ. ರವರು ಉಪಸ್ಥಿತರಿದ್ದರು. ಕಡೆಗೆ ಸಂಘದ ಸದಸ್ಯನಾದ ಆರ‍್ವಿನ್ ಡಿ.ಸೋಜ ನೆರೆದವರನ್ನು ವಂದಿಸಿದರು. ಎಂ.ಬಿ.ಎ ವಿದ್ಯಾರ್ಥಿನಿಯರಾದ ಕು. ಪೂಜಾ.ವಿ ಮತ್ತು ನಿಧಾ ಆರೋರ ಕಾರ್ಯಕ್ರಮವನ್ನು ನಿರೂಪಿಸಿದರು.
Click this button or press Ctrl+G to toggle between Kannada and English