ಮಂಗಳೂರು: ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪ, ಆಸ್ತಿ ಮುಟ್ಟುಗೋಲು

10:37 AM, Saturday, October 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

pravarthan nirdeshanalayಮಂಗಳೂರು: ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರ ಸಂಘಟನೆಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಮಂಗಳೂರಿನ ಪಂಜಿಮೊಗರಿನಲ್ಲಿ 5 ಲಕ್ಷ ರೂ. ಮೌಲ್ಯದ ಸೊತ್ತನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಇಲ್ಲಿನ ನಿವಾಸಿ ಧೀರಜ್ ಸಾಹು ಸೇರಿದಂತೆ ಹಲವರಿಗೆ ಸೇರಿದ 5 ಲಕ್ಷ ರೂ. ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ. ಧೀರಜ್ ಸಾಹು ಹಾಗೂ ಮತ್ತಿತರರು ಉಗ್ರರಿಗೆ ಆರ್ಥಿಕ ನೆರವು ಹಾಗೂ ಪಾಕಿಸ್ತಾನಿ ಪ್ರಜೆಯೊಬ್ಬನ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಎನ್ನಲಾಗಿದೆ. ಇದೇ ಆರೋಪದಡಿ ಇಡಿ ಅಧಿಕಾರಿಗಳು ಧೀರಜ್ ಸಾಹು ಸೇರಿದಂತೆ ಹಲವರ ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಉಗ್ರರ ಜೊತೆಗೆ ಹಣಕಾಸಿನ ವ್ಯವಹಾರ ನಡೆಸುತ್ತಿದ್ದರೆಂಬ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಆಯೆಷಾ ಬಾನು ಹಾಗೂ ಜುಬೇರ್ ಹುಸೇನ್ ಅವರನ್ನು ಈಗಾಗಲೇ ಬಂಧಿಸಿದ್ದರು. ಇತ್ತ ಧೀರಜ್ ಸಾಹುವಿನ ಬ್ಯಾಂಕ್ ಖಾತೆಗೆ ಕಮಿಷನ್ ರೂಪದಲ್ಲಿ ದೇಶದ ವಿವಿಧ ಭಾಗಗಳಿಂದ ಬರುತ್ತಿದ್ದ ಹಣದಲ್ಲಿ ತನ್ನ ಪಾಲನ್ನು ಇಟ್ಟುಕೊಂಡು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಜೊತೆಗೆ ಒಡನಾಟ ಹೊಂದಿದ್ದ ಜುಬೇರ್ ಹುಸೇನ್, ಆಯೆಷಾ ಬಾನು, ರಾಜು ಖಾನ್ ಸೇರಿದಂತೆ ಹಲವರ ಖಾತೆಗೆ ವರ್ಗಾಯಿಸುತ್ತಿದ್ದ ಎನ್ನಲಾಗಿದೆ.

ಈ ನಾಲ್ವರೂ ಪಾಕ್ ಪ್ರಜೆ ಖಾಲಿದ್ ಜೊತೆಗೆ ನಂಟು ಹೊಂದಿದ್ದರು. ಖಾಲಿದ್‌ನ ನಿರ್ದೇಶನದ ಮೇರೆಗೆ ಇವರು ಪ್ರತ್ಯೇಕ ಬ್ಯಾಂಕ್ ಖಾತೆ ತೆರೆದು ಕಮಿಷನ್‌ಗಾಗಿ ಉಗ್ರರ ಜೊತೆಗೆ ಸಂಪರ್ಕವಿರಿಸಿಕೊಂಡಿದ್ದರು ಎಂಬುದನ್ನು ತನಿಖಾಧಿಕಾರಿಗಳು ಪತ್ತೆ ಮಾಡಿದ್ದರು. ಈ ಬಗ್ಗೆ ಇದೀಗ ಅಧಿಕಾರಿಗಳು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English