ನಾಪತ್ತೆಯಾಗಿದ್ದ ಬಾಲಕ ಜಾಲತಾಣ ಫೇಸ್‌ಬುಕ್ ಮೂಲಕ ಮುಂಬೈಯಲ್ಲಿ ಪತ್ತೆ

5:52 PM, Saturday, October 14th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Manipalaಉಡುಪಿ:  ಸಾಮಾಜಿಕ ಜಾಲತಾಣ ಫೇಸ್‌ಬುಕ್ ಮೂಲಕ ಮಣಿಪಾಲದಿಂದ ಮೂರು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕನನ್ನ್ನುಮುಂಬೈಯಲ್ಲಿ ಪತ್ತೆ ಹಚ್ಚುವಲ್ಲಿ ಉಡುಪಿ ಪೊಲೀಸರು ಇದೀಗ ಯಶಸ್ವಿಯಾಗಿದ್ದಾರೆ.

ಪತ್ತೆಯಾದ ಬಾಲಕನನ್ನು ಮಣಿಪಾಲ ಅನಂತನಗರದ ಹುಡ್ಕೋ ಕಾಲನಿಯ ಶ್ರೀಧರ್ ಕೆ.ಅಮೀನ್ ಎಂಬವರ ದತ್ತು ಪುತ್ರ ಪ್ರೇಮ್ ಕಿರಣ್(13) ಎಂದು ಗುರುತಿಸಲಾಗಿದೆ. ಈತ 2015ರ ಜ.20ರಂದು ಸಂಜೆ 4 ಗಂಟೆ ಸುಮಾರಿಗೆ ಮನೆಯಿಂದ ಮಣಿಪಾಲ ಎಂಐಟಿ ಮೈದಾನಕ್ಕೆ ಆಡಿ ಬರುವುದಾಗಿ ಹೇಳಿ ಹೋದವನು ವಾಪಸ್ ಬಾರದೆ ನಾಪತ್ತೆಯಾಗಿದ್ದನು. ಪ್ರೇಮ್ ಕಿರಣ್‌ಗಾಗಿ ಹುಡುಕಾಡಿದ ಶ್ರೀಧರ್ ಅಮೀನ್ ಜ.31ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ ಪ್ರೇಂ ಕಿರಣ್ ಈ ವರ್ಷದಿಂದ ಸಾಮಾಜಿಕ ಜಾಲತಾಣವಾಗಿರುವ ಫೇಸ್‌ಬುಕ್‌ನಲ್ಲಿ ಸಕ್ರಿಯನಾಗಿರುವ ಮಾಹಿತಿಯನ್ನು ಜಿಲ್ಲಾ ಅಪರಾಧ ಪೊಲೀಸ್ ಠಾಣೆಯ(ಡಿಸಿಬಿ) ಹಾಗೂ ಅಕ್ರಮ ಮಾನವ ಸಾಗಣೆ ವಿರೋಧಿ ಘಟಕದ ಅಧಿಕಾರಿ ರತ್ನಕುಮಾರ್ ಜಿ., ಠಾಣಾ ಸಿಬ್ಬಂದಿಯವರ ಮೂಲಕ ಪಡೆದಿದ್ದರು. ಅದರಂತೆ ಉಡುಪಿ ಪೊಲೀಸರು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಸಹಾಯ ಪಡೆದು ನಾಪತ್ತೆಯಾಗಿದ್ದ ಪ್ರೇಂ ಕಿರಣ್‌ನನ್ನು ಮುಂಬೈಯ ಕಾಲ್ ಬಾ ದೇವಿ ಪ್ರಿನ್ಸ್ ಸ್ಟ್ರೀಟ್‌ನ ದವಾ ಬಜಾರ್ ಎಂಬಲ್ಲಿ ಪತ್ತೆ ಹಚ್ಚಿ ಅ.9ರಂದು ಉಡುಪಿ ಜಿಲ್ಲಾ ಸೆನ್ ಅಪರಾಧ ಪೊಲೀಸ್ ಠಾಣೆಗೆ ಕರೆತಂದರು.

ಬಳಿಕ ಬಾಲಕನ ತಂದೆಯ ಸಮಕ್ಷಮದಲ್ಲಿ ವಿಚಾರಿಸಿದಾಗ, ನನಗೆ ಓದಿನಲ್ಲಿ ಆಸಕ್ತಿ ಇರಲಿಲ್ಲ. ಅದಕ್ಕಾಗಿ ಕೆಲಸ ಮಾಡಿ ಹಣ ಸಂಪಾದಿಸುವ ಉದ್ದೇಶದಿಂದ ಮನೆ ಬಿಟ್ಟು ಹೋಗಿದ್ದೇನೆ. ಮುಂಬೈಯ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದ ನಾನು ಸ್ವಇಚ್ಛೆಯಿಂದ ಹೋಗಿದ್ದೇನೆಯೇ ಹೊರತು ಯಾರೂ ನನ್ನನ್ನು ಅಪಹರಿಸಿಲ್ಲ. ಯಾವ ಸಂಘಟನೆಯಲ್ಲಿಯೂ ನಾನು ತೊಡಗಿಸಿಕೊಂಡಿಲ್ಲ ಮತ್ತು ಮುಂದೆ ತಂದೆಯ ಜೊತೆ ಇರುತ್ತೇನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English