ಮಂಗಳೂರಿನಲ್ಲಿ ಗ್ಯಾಸ್‌ಪೈಪ್‌ ಲೈನ್‌ ವಿರೋಧಿಸಿ ಪ್ರತಿಭಟನೆ

3:30 PM, Friday, August 26th, 2011
Share
1 Star2 Stars3 Stars4 Stars5 Stars
(No Ratings Yet)
Loading...

Bajpe pipeline

ಬಜಪೆ : ಗುರುಪುರ ಶ್ರೀ ವೈದ್ಯನಾಥ ಸಭಾಭವನದಲ್ಲಿ ಕೊಚ್ಚಿ-ಕುಟ್ಟಿನಾಡು-ಮಂಗಳೂರು-ಬೆಂಗಳೂರು ಗ್ಯಾಸ್‌ಪೈಪ್‌ ಲೈನ್‌ ಯೋಜನೆಗಾಗಿ ನಡೆಯುತ್ತಿರುವ ಭೂಸ್ವಾದೀನ ಪ್ರಕ್ರಿಯೆಯನ್ನು ವಿರೋಧಿಸಿ ಪ್ರತಿಭಟನಾ ಸಭೆ ನಡೆಸಿದರು. ಸಭೆಯಲ್ಲಿ ಯಾವುದೇ ಕಾರಣಕ್ಕೂ ಪೈಪ್‌ಲೈನ್‌ ಹಾದು ಹೋಗಲು ಆವಕಾಶ ನೀಡದೆ ಆದನ್ನು ವಿರೋಧಿಸಿ ಹೋರಾಟ ನಡೆಸುವ ತೀರ್ಮಾನ ಕೈಗೊಳ್ಳಲಾಯಿತು.

ಮಂಗಳೂರು ಹಾಗೂ ಬಂಟ್ವಾಳ ತಾಲೂಕಿನ ಒಟ್ಟು 13ಗ್ರಾಮಗಳಿಗೆ ಯೋಜನೆಯ ಭೂಸ್ವಾದೀನಕ್ಕೆ ನೋಟೀಸು ನೀಡಲಾಗಿದೆ. ಎಂಆರ್‌ಪಿಎಲ್‌ ನ ಒಂದು ಪೈಪ್‌ಲೈನ್‌ ಕೆಲವು ಗ್ರಾಮಗಳಿಂದ ಹಾದು ಹೋಗಿದೆ.ಪೈಪ್‌ ಲೈನ್‌ ಇರುವಲ್ಲಿ ಯಾವುದೇ ರಸ್ತೆ ಹಾದುಹೋಗುವಂತಿಲ್ಲವಾಗಿದೆ. ಇದರಿಂದ ಆ ಪ್ರದೇಶದಲ್ಲಿ ಏನೂ ಮಾಡದಂತಾಗಿದೆ.ಇದು ಕೂಡ ಇಲ್ಲಿ ಹಾದೂ ಹೋದರೆ ಇನ್ನೂ ಹಲವು ಪ್ರದೇಶ‌ಕ್ಕೂ ಅದೇ ಗತಿ ಬರುತ್ತದೆ.ಅಂದು ಕೂಡ ಭರವಸೆ ನೀಡಲಾಗಿತ್ತು. ಅದರೂ ಪ್ರಯೋಜನ ವಾಗಿಲ್ಲ. ಈ ಪೈಪ್‌ ಲೈನ್‌ ಸಮುದ್ರದ ಮೂಲಕವೇ ಹಾದು ಹೋಗಲಿ ಎಂದು ನೆರದ ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಮಾತಾನಾಡಿದ ಹೋರಾಟ ಸಮಿತಿಯ ಅಧ್ಯಕ್ಷ ಅಜಿತ್‌ ಕುಮಾರ್‌ ರೈ ಮಾಲಾಡಿ ಜಿಲ್ಲೆಯಲ್ಲಿ ಕೃಷಿಕರ ಜಾಗವನ್ನು ಕಬಳಿಸುವ ಹಲವಾರು ಕಂಪನೆಗಳು ಯಾವುದೇ ಪರಿಹಾರ ಸರಿಯಾಗಿ ನೀಡದೆ ಜನರನ್ನು ಮೋಸ ಮಾಡುತ್ತಿದೆ.ಯೋಜನೆ ಜಾರಿ ಗೊಳಿಸುವಾಗ ಆಲ್ಲಿನ ಜನಾಭಿಪ್ರಾಯ ಸಂಗ್ರಸಬೇಕು.ಬಲಾತ್ಕಾರದ ಸ್ವಾಧೀನಕ್ಕೆ ಅವಕಾಶ ನೀಡಬಾರದು ಎಂದು ಹೇಳಿದರು.

ಕೃಷ್ಣಪ್ರಸಾದ್‌ ರೈ ಮಾತನಾಡಿ ಮುಂದಿನ ದಿನಗಳಲ್ಲಿ ಇನ್ನೊಂದು ಪೈಪ್‌ಲೈನ್‌ ಬರಲಿದೆ.ಇದರಿಂದ ಗುರುಪುರದ ಆಸುಪಾಸಿನ ಗ್ರಾಮಗಳು ನಾಲ್ಕು ಭಾಗಗಳಾಗುವ ಸಂಭವವಿದೆ ಎಂದು ಹೇಳಿದರು.

ಸ‌ಭೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಶ್ರೀಧರ ಆಳ್ವ, ಹರೀಶ್‌ ಶೆಟ್ಟಿ,ಕಂದಾವರ,ಶಿವಪ್ಪ ಬಂಗೇರ,13ಗ್ರಾಮಗಳ ಒಟ್ಟು 150ರಷ್ಟು ಮಂದಿ ಸಭೆಯಲ್ಲಿ ಭಾಗವಹಿಸಿದ್ದರು.

ಶನಿವಾರ ಮಂಗಳೂರಿನಲ್ಲಿ ಕೊಚ್ಚಿ-ಕುಟ್ಟಿನಾಡು-ಮಂಗಳೂರು-ಬೆಂಗಳೂರು ಗ್ಯಾಸ್‌ಪೈಪ್‌ ಲೈನ್‌ ವಿರೋಧಿಸಿ ಪ್ರತಿಭಟನಾ ಸಭೆ ನಡೆಯಲಿದೆ.

image description

1 ಪ್ರತಿಕ್ರಿಯೆ - ಶೀರ್ಷಿಕೆ - ಮಂಗಳೂರಿನಲ್ಲಿ ಗ್ಯಾಸ್‌ಪೈಪ್‌ ಲೈನ್‌ ವಿರೋಧಿಸಿ ಪ್ರತಿಭಟನೆ

  1. opmrzzlhge, vtdffhsoptwq.com/

    nCnIXB zfgufaboyhkd, [url=http://mpbywlhdlqdz.com/]mpbywlhdlqdz[/url], [link=http://byakypgxfxsd.com/]byakypgxfxsd[/link], http://imwqdridyshg.com/

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English