ಮ್ಯಾಟ್ರಿಮೊನಿ, ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಮುಲ್ಕಿಯ ನಿವಾಸಿ

11:53 AM, Tuesday, October 17th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

Mulkiಮಂಗಳೂರು: ಕನ್ನಡ ಮ್ಯಾಟ್ರಿಮೊನಿ ವೆಬ್‌ಸೈಟ್‌ನಲ್ಲಿ ತನ್ನ ಮದುವೆಯ ಕುರಿತು ವಿವರ ಹಾಕಿದ ಮುಲ್ಕಿಯ ವ್ಯಕ್ತಿಯೊಬ್ಬರು ವಂಚನೆಗೊಳಗಾಗಿ ಲಕ್ಷಾಂತರ ರೂ. ಹಣ ಕಳೆದುಕೊಂಡಿರುವ ಘಟನೆ ನಡೆದಿದೆ.

ಮುಲ್ಕಿಯ ನಿವಾಸಿಯೊಬ್ಬರು ಕನ್ನಡ ವಿವಾಹ ಕುರಿತ ವೆಬ್‌ಸೈಟೊಂದರಲ್ಲಿ ಮದುವೆಯಾಗುವ ಇಚ್ಛೆ ವ್ಯಕ್ತಪಡಿಸಿ ಅವರ ಬಗ್ಗೆ ವಿವರವನ್ನೂ ನೀಡಿದ್ದರು. ಇದನ್ನು ನೋಡಿದ ಇಂಗ್ಲೆಂಡ್ ಪ್ರಜೆ ಸ್ಟೆಲ್ಲಾ ಮೋರಿಸ್‌ ಎಂಬಾಕೆ ಅವರನ್ನು ಮದುವೆಯಾಗಲು ತಯಾರಾಗಿದ್ದಾಳೆ. ಅಲ್ಲದೇ ಇಂಗ್ಲೆಂಡ್‌ಗೆ ಬಂದರೆ ಅಲ್ಲಿ ಉದ್ಯೋಗ ತೆಗೆಸಿಕೊಡುವುದಾಗಿ ಆಕೆಯ ಮೊಬೈಲ್ ಸಂಖ್ಯೆ +447743371221 ವಾಟ್ಸ್ಆ್ಯಪ್ ಮೂಲಕ ಮೆಸೇಜ್ ಮಾಡಿದ್ದಳು. ಅಷ್ಟೇ ಅಲ್ಲ, ಮೈಕಲ್ ಆ್ಯಂಟನಿ ಎಂಬ ವ್ಯಕ್ತಿಯ ಪರಿಚಯ ನೀಡಿ, ಆತನ ಮೊಬೈಲ್ ನಂಬರ್‌ ಕೂಡಾ ಒದಗಿಸಿದ್ದಳು.

ಇತ್ತ ಮೈಕಲ್ ಆ್ಯಂಟನಿ ಮುಲ್ಕಿಯ ವ್ಯಕ್ತಿಗೆ ಕರೆಮಾಡಿ ಆತನಿಗೆ ವೀಸಾ ಭರ್ತಿ ಮಾಡುವ ಫಾರಂ ಹಾಗೂ ಅದಕ್ಕೆ ತಗಲುವ ಶುಲ್ಕ 26,560ರೂ.ಗಳನ್ನು ಕೆನರಾ ಬ್ಯಾಂಕ್‌ನ ಕಿನ್ನಿಗೋಳಿ ಶಾಖೆಯ ಖಾತೆಯಿಂದ ನೆಫ್ಟ್ ಮೂಲಕ ಆತನ ಖಾತೆಗೆ ಹಾಕಿಸಿಕೊಂಡಿದ್ದಾನೆ.

ನಂತರದ ದಿನಗಳಲ್ಲಿ ಮೈಕಲ್ ಆ್ಯಂಟನಿ ಮತ್ತು ಜೇಮ್ಸ್ ಭೇವನ್ ಎಂಬುವರ ಹೆಸರಿನ ಇಮೇಲ್ ಮೂಲಕ ಆ್ಯಂಟಿ ಟೆರರಿಸ್ಟ್ ಪ್ರಮಾಣ ಪತ್ರ ಅರ್ಜಿ ಮತ್ತು ಅದಕ್ಕೆ ಸಂಬಂಧಿಸಿದ ಶುಲ್ಕ 83000 ರೂ. ಹಣವನ್ನು ಪಡೆದಿದ್ದಾರೆ. ಹೀಗೆ ಸ್ಟೆಲ್ಲಾ ಮೇರಿಸ್, ಮೈಕಲ್ ಆಂಟನಿ ಮತ್ತು ಜೇಮ್ಸ್ ಭೆವನ್ ವಿವಿಧ ರೀತಿಯಲ್ಲಿ ಮುಲ್ಕಿಯ ವ್ಯಕ್ತಿಗೆ ಕೆಲಸ ಹಾಗೂ ವೀಸಾ ಕೊಡಿಸುವುದಾಗಿ ನಂಬಿಸಿ ಹಣ ಕೀಳುತ್ತಾ ಬಂದಿದ್ದು, ಸುಮಾರು 11,39,535ರಷ್ಟು ಹಣ ಪೀಕಿದ್ದಾರೆ.

ಈ ಸಂದರ್ಭದಲ್ಲಿ ಮುಲ್ಕಿ ವ್ಯಕ್ತಿಗೆ ಸಂಶಯ ಬಂದಿದ್ದು, ಕೊನೆಗೂ ತಾನು ಮೋಸಹೋಗಿದ್ದೇನೆಂದು ಅರಿವಾಗಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಸೈಬರ್ ಕ್ರೈಂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English