ಮಂಗಳೂರು: ರಸ್ತೆ ಅಗಲೀಕರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯವಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಹೇಳಿದರು. ಅವರು ಕುಡುಪಾಡಿ ಮಸೀದಿ ಬಳಿ ರಸ್ತೆ ವಿಸ್ತರಣೆ ಬಗ್ಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು.
ಸಾರ್ವಜನಿಕರ ಕೋರಿಕೆಯ ಮೇರೆಗೆ ಈ ರಸ್ತೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ರಸ್ತೆ ಅಗಲೀಕರಣ 20 ಫೀಟ್ ಗೆ ಇಳಿಸುವಂತೆ ಸಾರ್ವಜನಿಕರು ಮನವಿ ಮಾಡಿದಾಗ ಶಾಸಕರು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲು ಸೂಚಿಸಿದರು.
ಅಧಿಕಾರಿಗಳೊಂದಿಗೆ ಸ್ಥಳೀಯರು ಸಹಕರಿಸುವಂತೆ ಮನವಿ ಮಾಡಿದ ಶಾಸಕ ಜೆ.ಆರ್.ಲೋಬೊ ಅವರು ಯಾವುದೇ ಕೆಲಸ ಮಾಡುವಾಗ ಸಾಧಕ ಬಾಧಕದ ಬಗ್ಗೆ ಕೂಲಂಕಷ ತನಿಖೆ ಮಾಡಬೇಕು. ಜನರೂ ಕೂಡಾ ತಮಗೆ ಸಹಕಾರವಾಗುವ ರೀತಿಯಲ್ಲಿ ಅಧಿಕಾರಿಗಳಿಗೆ ಕೂಡಾ ನೆರವು ನೀಡಬೇಕು ಎಂದರು.
ಈ ಸಭೆಯಲ್ಲಿ ಸ್ಥಳೀಯರು ನೀಡಿದ ಅಹವಾಲು ಸ್ವೀಕರಿಸಿ ಸಭೆಯ ನಂತರ ಸ್ಥಳ ತನಿಖೆ ಮಾಡಿದರು. ಸಭೆಯಲ್ಲಿ ಕುಮಾರಿ ಅಪ್ಪಿ, ಕಾರ್ಪೊರೇಟರ್ ಶೈಲಜಾ, ಆಶ್ರಯ ಸಮಿತಿ ಸದಸ್ಯರಾ ಮಹಮ್ಮದ್ ನವಾಜ್, ಮಸೀದಿಯ ಮುಖ್ಯಸ್ಥರು, ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಹಾಜರಿದ್ದರು.
Click this button or press Ctrl+G to toggle between Kannada and English