ಭ್ರಷ್ಟಾಚಾರದ ವಿರುದ್ದ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ

10:52 AM, Saturday, August 27th, 2011
Share
1 Star2 Stars3 Stars4 Stars5 Stars
(No Ratings Yet)
Loading...

ABVP-protst/ ಎ.ಬಿ.ವಿ.ಪಿ  ಪ್ರತಿಭಟನೆ

ಮಂಗಳೂರು : ನಗರದ ಕೆ.ಪಿ.ಟಿ. ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಬಸವೇಶ್ವರ ವೃತ್ತದಲ್ಲಿ ಮತ್ತು ಹಂಪನಕಟ್ಟೆ ಸಿಗ್ನಲ್‌ ವೃತ್ತದಲ್ಲಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟವನ್ನು ಬೆಂಬಲಿಸಿ ಹಾಗೂ ಜನ ಲೋಕಪಾಲ ಮಸೂದೆ ಜಾರಿಗೆ ಒತ್ತಾಯಿಸಿ ಎ.ಬಿ.ವಿ.ಪಿ. ಕಾರ್ಯಕರ್ತರು ಮಾನವ ಸರಪಳಿ ರಚಿಸಿ ರಸ್ತೆ ತಡೆ ಮತ್ತು ಪ್ರತಿಭಟನೆ ನಡೆಸಿದರು.

ಬಸವೇಶ್ವರ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಬಿ.ವಿ.ಪಿ. ಮಂಗಳೂರು ನಗರ ಸಂಘಟನಾ ಕಾರ್ಯದರ್ಶಿ ವಿನಯ್‌ ಮತ್ತು ಮಿಥೇಶ್‌ ನೇತೃತ್ವ ವಹಿಸಿದ್ದರು. ಹಂಪನಕಟ್ಟೆ ಸಿಗ್ನಲ್‌ ವೃತ್ತದಲ್ಲಿ ಎ.ಬಿ.ವಿ.ಪಿ. ದ.ಕ. ಜಿಲ್ಲಾ ಸಹ ಸಂಚಾಲಕ ಮಹೇಶ್‌ ಮತ್ತು ಮಂಗಳೂರು ತಾಲೂಕು ಸಂಚಾಲಕ ಸುಜಿತ್‌ ನಾಯಕತ್ವದಲ್ಲಿ ಮಾನವ ಸರಪಳಿ ಹಾಗೂ ಪ್ರತಿಭಟನೆ ನಡೆಯಿತು. ಮುಖಂಡರಾದ ಮಿಥೇಶ್‌, ಜಗದೀಶ್‌, ಹರಿಶ್ಚಂದ್ರ, ಅನಿಲ್‌ ಮುಂತಾದವರು ಭಾಗವಹಿಸಿದ್ದರು.

ಪ್ರತಿಭಟನೆಯನ್ನುದ್ದೇಶಿಸಿ ಮಹೇಶ್‌ ಮತ್ತು ಸುಜಿತ್‌ ಮಾತನಾಡಿದರು. ಭ್ರಷ್ಟಾಚಾರವನ್ನು ತಡೆಗಟ್ಟಲು ಜನಲೋಕಪಾಲ್‌ ಮಸೂದೆ ಅಗತ್ಯವಾಗಿ ಬೇಕು ಎಂದ ಅವರು ಭ್ರಷ್ಟಾಚಾರದಲ್ಲಿ ಭಾಗಿಯಾದವರನ್ನು ಬಂಧಿಸ ಬೇಕು ಎಂದು ಒತ್ತಾಯಿಸಿದರು.

ನಗರದ ಕೆ.ಪಿ.ಟಿ. ಬಳಿ ಮತ್ತು ಹಂಪನಕಟ್ಟೆ ಸಿಗ್ನಲ್‌ ವೃತ್ತದಲ್ಲಿ ಕೆಲ ಹೊತ್ತು ರಸ್ತೆಗಳಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English