ಬಂಟ್ವಾಳ: ತಾಲೂಕಿನ ಮೂರು ಪೊಲೀಸ್ ಠಾಣೆಗಳ ಎಸ್ಐಗಳನ್ನು ಬದಲಾವಣೆ ಮಾಡುವ ಮೂಲಕ ಸರ್ಕಾರ ಪೊಲೀಸ್ ಇಲಾಖೆಗೆ ಸರ್ಜರಿ ಮಾಡಿದೆ.
ಬಂಟ್ವಾಳ ನಗರ ಪೊಲೀಸ್ ಠಾಣೆಯ ಎಸ್ಐಯವರನ್ನು ಮಂಗಳೂರಿನ ಡಿಎಸ್ಪಿ ಕಚೇರಿಗೆ, ನಗರ ಠಾಣಾ ಅಪರಾಧ ವಿಭಾಗದ ಎಸ್ಐ ಅಗಿದ್ದ ಗಂಗಾಧರಪ್ಪ ಅವರನ್ನು ನೂತನವಾಗಿ ನಿರ್ಮಾಣವಾಗುವ ಬೆಳ್ತಂಗಡಿ ಟ್ರಾಫಿಕ್ ಪೊಲೀಸ್ ಠಾಣೆಗೆ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್ಐ ಉಮೇಶ್ರನ್ನು ಮಂಗಳೂರು ಡಿಸಿಬಿ ಕಚೇರಿಗೆ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಎಸ್.ಐ.ಚಂದ್ರಶೇಖರ್ ಅಯ್ಯರನ್ನು ಡಿಎಸ್ಎ ಮಂಗಳೂರು ಕಚೇರಿಗೆ ವರ್ಗಾವಣೆ ಮಾಡಲಾಗಿದೆ.
ತೆರವಾದ ಬಂಟ್ವಾಳ ನಗರ ಠಾಣೆಗೆ ಸುಳ್ಯದಲ್ಲಿ ಎಸ್ಐ ಆಗಿದ್ದ ಚಂದ್ರಶೇಖರ್, ಪ್ರೋಬೆಷನರಿ ಅವಧಿ ಮುಗಿದು ನೂತನವಾಗಿ ನೇಮಕವಾಗಿದ್ದ ಮೂವರು ಅಧಿಕಾರಿಗಳನ್ನು ಕ್ರಮವಾಗಿ ನಗರ ಠಾಣಾ ಅಪರಾಧ ವಿಭಾಗಕ್ಕೆ ಹರೀಶ್, ಬಂಟ್ವಾಳ ಗ್ರಾಮಾಂತರ ಠಾಣೆಗೆ ಪ್ರಸನ್ನ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಗೆ ಯಲ್ಲಪ್ಪ ಅವರನ್ನು ನೇಮಕ ಮಾಡಲಾಗಿದೆ.
ಬಂಟ್ವಾಳ ನಗರ, ಗ್ರಾಮಾಂತರ ಮತ್ತು ಟ್ರಾಫಿಕ್ ಪೊಲೀಸ್ ಠಾಣೆಯ ಉಪ ನೀರಿಕ್ಷಕರನ್ನು ಬದಲಾವಣೆ ಮಾಡಿ ಹೊಸ ಮುಖಗಳನ್ನು ತಾಲೂಕಿಗೆ ಪರಿಚಯಿಸುವ ಕೆಲಸ ಮಾಡಿದೆ.
Click this button or press Ctrl+G to toggle between Kannada and English