ನಕಲಿ ಗೋರಕ್ಷಕರು ಎಂಬ ಹೇಳಿಕೆ ಸುಳ್ಳು :ಜಗದೀಶ್ ಶೇಣವ

11:20 AM, Wednesday, October 18th, 2017
Share
1 Star2 Stars3 Stars4 Stars5 Stars
(5 rating, 1 votes)
Loading...

vishva hindu parishathಮಂಗಳೂರು: ಗೋವುಗಳ ರಕ್ಷಣೆಗೆ ಮುಂದಾಗುವವರೆಲ್ಲ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ವಿಶ್ವ ಹಿಂದೂ ಪರಿಷತ್, ಬಜರಂಗದಳ ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾಧ್ಯಕ್ಷ ಜಗದೀಶ್ ಶೇಣವ, ನಮ್ಮ ಅನಿಸಿಕೆ ಪ್ರಕಾರ ದೇಶದಲ್ಲಿ ಯಾರೂ ನಕಲಿ ಗೋರಕ್ಷಕರಿಲ್ಲ. ಇರುವವರೆಲ್ಲ ಗೋವುಗಳನ್ನು ಪ್ರೀತಿಸುವವರು. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನಕಲಿ ಗೋ ರಕ್ಷಕರು ಎಂಬ ಹೇಳಿಕೆಯನ್ನು ವಿರೋಧಿಸುವುದಾಗಿ ತಿಳಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಅಕ್ರಮ ಕಸಾಯಿಖಾನೆ ಕುರಿತು ಮಾಹಿತಿ ನೀಡಿದ ಸಾಫ್ಟ್‌‌ವೇರ್ ಎಂಜಿನಿಯರ್ ನಂದಿನಿ ಮೇಲೆ ದುಷ್ಕರ್ಮಿಗಳು ನಡಸಿದ ಹಲ್ಲೆಯನ್ನು ವಿಶ್ವಹಿಂದೂ ಪರಿಷತ್, ಬಜರಂಗದಳ ಖಂಡಿಸುತ್ತದೆ. ನಂದಿನಿಯವರ ಕೊಲೆ ಯತ್ನ ನಡೆಸಿದವರನ್ನು ಈ ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English