ಅಡಿಕೆ ಮಾರುಕಟ್ಟೆಯಲ್ಲಿ ಚೇತರಿಕೆ : ಹಳೆ ಅಡಿಕೆ ಕಿಲೋ. 179 ರೂ.

11:12 AM, Saturday, August 27th, 2011
Share
1 Star2 Stars3 Stars4 Stars5 Stars
(5 rating, 1 votes)
Loading...

Arecanut Bunch/ಅಡಿಕೆ

ಪುತ್ತೂರು : ಅಡಿಕೆ ಮಾರುಕಟ್ಟೆಗೆ ಸರಿಯಾಗಿ ಪೂರೈಕೆ ಆಗದಿರುವುದರಿಂದ ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆಯಲ್ಲಿ ಇನ್ನಷ್ಟು ಚೇತರಿಕೆ ಉಂಟಾಗಿದೆ. ಶುಕ್ರವಾರ ಹಳೆ ಅಡಿಕೆ ಕೆ.ಜಿ.ಯೊಂದರ 179 ರೂ. ಮತ್ತು ಹೊಸ ಅಡಿಕೆ ಕೆ.ಜಿ.ಯೊಂದರ 168 ರೂ.ಗಳಿಗೆ ವಿಕ್ರಯಗೊಂಡಿದೆ ಎಂದು ಕೃಷಿಕರು ಮಾಹಿತಿ ನೀಡಿದ್ದಾರೆ.

ಗಡಿ ಪ್ರದೇಶ ಕಾಸರಗೋಡು ಜಿಲ್ಲೆಯ ಬಾಯಾರು, ಪೆರ್ಲ ಪ್ರದೇಶದಲ್ಲಿ ಅಡಿಕೆ ಧಾರಣೆ ಪುತ್ತೂರಿಗಿಂತ ಕೆ.ಜಿ.ಯೊಂದರ 1 ರೂ. ಹೆಚ್ಚಿತ್ತು. ಎಂಬ ಮಾಹಿತಿಗಳು ಕೂಡಾ ಕೃಷಿಕರಿಂದ ಲಭ್ಯವಾಗಿದ್ದು, ಅಡಿಕೆ ಮಾರುಕಟ್ಟೆಯಲ್ಲಿ ಧಾರಣೆ ಏರಿಕೆಯ ಪರಿಸ್ಥಿತಿ ಇನ್ನಷ್ಟು ಮುಂದುವರಿಯುವ ಸಾಧ್ಯತೆಗಳಿವೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English