ಟಿಪ್ಪು ಜಯಂತಿ ಸರ್ಕಾರದ ವತಿಯಿಂದ ಮಾಡುತ್ತೇವೆ: ಸಿದ್ದರಾಮಯ್ಯ

11:48 AM, Monday, October 23rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

tippu jayanthiಮಂಗಳೂರು:  ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಮಾಡಿಯೇ ಮಾಡುತ್ತೇವೆ,  ಬಿಜೆಪಿ ರಾಜಕೀಯ ಕಾರಣದಿಂದ ಟಿಪ್ಪು ಜಯಂತಿ ವಿರೋಧಿಸುತ್ತಿದೆಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ವಿವಿಧ ಯೋಜನೆಗಳ ಉದ್ಘಾಟನೆಗಾಗಿ ಆಗಮಿಸಿದ ಅವರು ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಿಸಿದ್ದಾರೆ. ಶೋಭಾ ಕೂಡಾ ಅವರಿಗೆ ಸಾಥ್ ನೀಡಿದ್ದರು. ಟೊಪ್ಪಿ ಹಾಕಿ ಖಡ್ಗ ಝಳಪಿಸಿ ಅಂದು ಯಡಿಯೂರಪ್ಪ ಫೋಸ್ ನೀಡಿದ್ದರು ಎಂದು ವ್ಯಂಗ್ಯವಾಡಿದರು.

ಸಚಿವ ಹೆಗಡೆ ಹೇಳಿಕೆಗೆ ಪ್ರತಿಕ್ರಿಯಿಸಿ ಪ್ರೋಟೊಕಾಲ್ ಪ್ರಕಾರ ನಾವು ಎಲ್ಲರಿಗೂ ಆಹ್ವಾನ ನೀಡುತ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟದ್ದು. ಅವರಿಗೆ ಟಿಪ್ಪು ಇತಿಹಾಸ ಗೊತ್ತಿಲ್ಲ, ಮೈಸೂರಿನ ನಾಲ್ಕು ಯುದ್ಧಗಳು ಅವರಿಗೆ ಗೊತ್ತಿದೆಯೇ? ಟಿಪ್ಪು ಸತ್ತದ್ದು ಹೇಗೆ? ಮಕ್ಕಳನ್ನು ಅಡ ಇಟ್ಟದ್ದು ಯಾಕೆ? ಎಂದು ಪ್ರಶ್ನೆಗಳ ಸರಮಾಲೆ ಸುರಿದು, ಯಾರೋ ಒಬ್ಬ ವ್ಯಕ್ತಿ ಕಾರ್ಯಕ್ರಮಕ್ಕೆ ಬಂದಿಲ್ಲ ಅಂದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಲ್ಲ ಎಂದರು.

ಇನ್ನೊಂದೆಡೆ ಸಿಎಂರನ್ನು ಸ್ವಾಗತಿಸಲು ಬಂದಿದ್ದ ಅಭಯಚಂದ್ರ ಜೈನ್ ಹಾಗೂ ಐವನ್ ಡಿಸೋಜ ಬೆಂಬಲಿಗರ ನಡುವೆ ವಾಗ್ವಾದ ನಡೆಯಿತು.

ಐವನ್ ಡಿಸೋಜ ಬೆಂಬಲಿಗರ ಜಯಕಾರಕ್ಕೆ ಜೈನ್ ಆಕ್ಷೇಪ ವ್ಯಕ್ತಪಡಿಸಿದರು ಎನ್ನಲಾಗಿದ್ದು, ಐವನ್ ಪರ ಭಿತ್ತಿಪತ್ರ ಹಿಡಿದಿದ್ದ ಬೆಂಬಲಿಗರ ವಿರುದ್ಧ ಜೈನ್‌‌ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಅಲ್ಲದೇ ಸಿಎಂ ಪಕ್ಕದಲ್ಲಿಯೇ ನಾಯಕರಿಬ್ಬರ ತಳ್ಳಾಟ ನೂಕಾಟ ನಡೆದಿದೆ ಎಂದು ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ಜೊತೆ ಸಚಿವರಾದ ಡಿಕೆಶಿ, ರೋಶನ್ ಬೇಗ್ ಸಹ ಆಗಮಿಸಿದ್ದು, ಸಚಿವ ರಮಾನಾಥ್‌‌ ರೈ, ಯು.ಟಿ. ಖಾದರ್ ಎಲ್ಲರನ್ನು ಸ್ವಾಗತಿಸಿ ಮಂಗಳೂರು ಏರ್ ಪೋರ್ಟ್‌ನಿಂದ ಸರ್ಕ್ಯೂಟ್ ಹೌಸ್‌ಗೆ ಜೊತೆಯಾಗಿ ತೆರಳಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English