ಬೆಂಗಳೂರು : “ಒರಿಯರ್ದೊರಿ ಅಸಲ್’ ತುಳು ಚಿತ್ರ ಬೆಂಗಳೂರಿನಲ್ಲಿ ಮೈಸೂರು ರಸ್ತೆಯ ಗೋಪಾಲನ್ ಮಾಲ್‌ನಲ್ಲಿ ತೆರೆ ಕಂಡಿದೆ . ದಕ್ಷಿಣ ಕನ್ನಡದಲ್ಲಿ ತೆರೆಕಂಡು ಯಶಸ್ವಿ 60 ದಿನಗಳನ್ನು ದಾಟಿ ಮುನ್ನುಗುತ್ತಿರುವ ಅಸಲ್ 40 ವರ್ಷಗಳ ತುಳು ಚಿತ್ರರಂಗದ ಇತಿಹಾಸದಲ್ಲಿ ಯಾವ ಚಿತ್ರಕ್ಕೂ ಈ ರೀತಿಯ ಪ್ರೋತ್ಸಾಹ ಸಿಕ್ಕಿಲ್ಲ ಎಂದು ನಿರ್ಮಾಪಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಹೇಳಿದ್ದಾರೆ.
ಮಸ್ಕತ್, ದೋಹಾ, ಕತಾರ್, ದುಬೈಗಳಲ್ಲೂ ಚಿತ್ರ ಬಿಡುಗಡೆ ಸದ್ಯದಲ್ಲೇ ಮಾಡಲಾಗುವುದು. ಅಷ್ಟೇಅಲ್ಲ, ಅಮೆರಿಕಾಕ್ಕೂ ಈ ಸಿನಿಮಾ ಕೊಂಡೊಯ್ಯುವ ಪ್ರಯತ್ನ ನಡೆಯುತ್ತಿದೆ ಎಂದು ಮುಂದಿನ ಬಿಡುಗಡೆಯ ವಿವರ ಹೇಳಿದ್ದಾರೆ. ಒರಿಯರ್ದೊರಿ ಅಸಲ್’ ನಾಟಕವನ್ನು ಸಿನಿಮಾಗೆ ಪ್ರರಿವರ್ತಿಸಲಾಗಿದ್ದರೂ, ಇಲ್ಲಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಪಾತ್ರಗಳನ್ನು ಹಾಗು ಸನ್ನಿವೇಶಗಳನ್ನು ಬದಲಿಸಿ ಹೊಸ ರೂಪ ನೀಡಲಾಗಿದೆ ಎಂದರು.
ನಿರ್ದೇಶಕ ಹ.ಸೂ. ರಾಜಶೇಖರ್, ಚಿತ್ರದ ಅತಿಥಿ ಪಾತ್ರವೊಂದರಲ್ಲಿ ಕಾಣಿಸಿಕೊಂಡ ಗುರುಕಿರಣ್ ,ಚಿತ್ರದ ನಾಯಕಿ ರಮ್ಯಾ ,ನಾಯಕ ಲಿಖೀತ್ ಶೆಟ್ಟಿ, ನಟಿ ರೇಖಾದಾಸ್ ಚಿತ್ರದ ಬಗ್ಗೆ ಖುಷಿ ಪಟ್ಟಿದ್ದಾರೆ. ಬೆಂಗಳೂರಿನ ತುಳುವರು ಸಿನಿಮಾ ಕ್ಕೆ ಪ್ರೋತ್ಸಾಹ ನೀಡಿದಲ್ಲಿ, ಇಲ್ಲಿಯೂ ಶತ ದಿನ ಚಿತ್ರ ನಡೆಸುವುದಾಗಿ ಕೊಡಿಯಾಲ್ ಬೈಲ್ ಹೇಳಿದ್ದಾರೆ.
Click this button or press Ctrl+G to toggle between Kannada and English