ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ವಿಧಿ ವಶ

9:54 AM, Thursday, September 16th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಮೂಡುಬಿದಿರೆ:  ಹಿರಿಯ ಪತ್ರಕರ್ತ ಕೆಜೆ.ಶೆಟ್ಟಿ ಕಡಂದಲೆ ಅವರು ಅಲ್ಪ ಕಾಲದ ಅಸೌಖ್ಯದಿಂದಾಗಿ ಬುಧವಾರ ಸಂಜೆ ನಿಧನರಾದರು ಸ್ವ ಗೃಹದಲ್ಲಿ ನಿಧನರಾಗಿದ್ದಾರೆ. ಅವರು ಐವರು ಗಂಡು ಮತ್ತು ಐವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಕ್ರಷಿಕರಾಗಿ ತಮ್ಮನ್ನು ತೊಡಗಿಸಿ ಕೊಂಡಿದ್ದ ಅಪ್ರತಿಮ ಸಾಧಕ ಕೆಜೆ.ಶೆಟ್ಟಿ ಕಡಂದಲೆ ಶಿಕ್ಷಕರಾಗಿ, ಸಾಹಿತಿಯಾಗಿ,  ಅಪ್ರತಿಮ ಹೋರಾಟಗಾರರಾಗಿ, ಹರಿತವಾದ ಬರಹಗಳಿಂದ ಜನರ ಮನ ಮುಟ್ಟಿದ್ದರು.
ಕಡಂದಲೆಯಲ್ಲಿ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟು.  ಸ್ವತಃ ತಾವೇ ಸಂಪಾದಕರಾಗಿ ಚಂದನ ಮಾಸ ಪತ್ರಿಕೆಯನ್ನು ನಡೆಸುತ್ತಿದ್ದರು. ಸ್ಥಳೀಯ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು,
ಕಡಂದಲೆಗೆ ಏಂಜಲ್ ಹಾರ್ಡ್  ಕಂಪನಿಯು ಬಂದಾಗ ಒಂಭತ್ತು ತಿಂಗಳ ನಿರಂತರ ಹೋರಾಟ ಮಾಡಿ ಜೈಲು ವಾಸದ ವನ್ನು ಅನುಭವಿಸಿದ್ದರು .
ಹೊಸ ಸಂಜೆಯಲ್ಲಿ ‘ಹೊಸರಂಗು’, ವಿಜಯ ಕಿರಣದಲ್ಲಿ ’ಅರಣ್ಯ ಕಾಂಡ’ ಉದಯದೀಪ, ವಾರದ ರಾಜಕೀಯ, ಕರಾವಳಿ ಮಾರುತ ಪತ್ರಿಕೆಗಳಿಗೆ ಅಂಕಣ ಬರೆಯುತ್ತಿದ್ದರು.
ಕಾರ್ಕಳ ತಾಲೂಕು ನಾಲ್ಕನೇ ಸಾಹಿತ್ಯ ಸಮ್ಮೆಳನ ಬೆಳ್ಮಣ್‌ನಲ್ಲಿ ನಡೆದಾಗ ಅಧ್ಯಕ್ಷತೆ ವಹಿಸಿದ್ದರು. ನವಶಕ್ತಿ ಪ್ರಕಾಶನ ಕಡಂದಲೆ ಮೂಲಕ ಶ್ರೀನಿವಾಸ ಜೋಕಟ್ಟೆ ಅವರ ಕ್ರತಿಯನ್ನು ಹೊರತಂದಿದ್ದರು.
ರಾಜಕೀಯ ಬರಹಗಳನ್ನು ಸಂಜಯ ಕಾವ್ಯ ನಾಮದಿಂದ ಬರೆಯುತ್ತಿದ್ದರು. ಇಪ್ಪತ್ತು ವರ್ಷ ಕಾಲ ಕಡಂದಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸ್ವಯಂ ನಿವ್ರತ್ತಿ ಹೊಂದಿದ್ದರು.
ಬಾಲ ಮುರಳಿ,ಬಾಲರ್ ಬಂಧು,ಬಾಲ ಗೀತೆ, ಮುಗುಳು ಮಲ್ಲಿಗೆ ಮೊದಲಾದ ಮಕ್ಕಳ ಕವಿತೆಗಳು,
ಅಜ್ಜಿ ಹೇಳಿದ ಕಥೆಗಳು ಭಾಗ – 1, ಅಜ್ಜಿ ಹೇಳಿದ ಕಥೆಗಳು ಭಾಗ-2, ಅಪ್ಪದ ಮರ ಮೊದಲಾದ ಮಕ್ಕಳ ಕಥೆಗಳು
ಮುಂಬಯಿ ವರ, ಮೀಸೆ ಕಳಕೊಂಡವಕಥಾ ಸಂಕಲನ ವರದಕ್ಷಿಣೆ ಮತ್ತು ತುಳುನಾಡ ಸಿರಿ ಕಾದಂಬರಿಗಳು
ಅಬ್ಬಗ ದಾರಗ ಪಾಡ್ದನ ಕಥೆಗಳ ಸಂಗ್ರಹ ಪುಟ್ಟನ ತಲೆ ಹರಟೆ, ಸತ್ತವನ ಸಂತಾಪ,ಸರಸ-ವಿರಸ,ಪುಟ್ಟ ಸ್ವರ್ಗಕ್ಕೆ ಹೋದ, ಕಲಿಯುಗ ಮತ್ತು ಸುಳ್ಳು, ಹೊಸ ಹೆಂಡತಿ ಅವರ ನಗೆ ಬರಹಗಳು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English