ಕಾರ್ಕಳ: ಸಾವಿರಾರು ಹಣತೆಗಳ ಬೆಳಕಿನಲ್ಲಿ ದೇವಾಲಯದ ಸೊಬಗು

5:59 PM, Monday, October 23rd, 2017
Share
1 Star2 Stars3 Stars4 Stars5 Stars
(5 rating, 1 votes)
Loading...

 

karkalaಉಡುಪಿ: ಭಾನುವಾರ ನಸುಕಿನ ವೇಳೆಯಲ್ಲಿ ನಡೆದ ವಿಶ್ವರೂಪ ದರ್ಶನ ವೇಳೆ ನೆರೆದ ಅಸಂಖ್ಯಾತ ಭಕ್ತರ ಕಣ್ಮನಗಳಿಗೆ ಪಡುತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನ ಸುಂದರವಾಗಿ ಕಾಣಿಸಿತು.

ಸಾವಿರಾರು ಹಣತೆಗಳ ಬೆಳಕಿನಲ್ಲಿ ದೇವಾಲಯದ ಸೊಬಗು ಇಮ್ಮಡಿಗೊಂಡಿತ್ತು. ದೇವಸ್ಥಾನದ ಒಳ ಹಾಗೂ ಹೊರ ಭಾಗಗಳಲ್ಲಿ ಬೆಳಗಿಸಿದ ದೃಶ್ಯ ಸಹೃದಯಿ ಭಕ್ತರ ಮನಕ್ಕೆ ಮುದನೀಡಿತು.

ದೇವಾಲಯದ ಒಳ ಪ್ರಾಂಗಣದಲ್ಲಿ ವರ್ಣರಂಜಿತ ರಂ ಗೋಲಿಗಳು ಮೂಡಿದ್ದವು. ರುದ್ರ ನಾಟ್ಯದ ವರ್ಣಮಯ ರಂಗೋಲಿ, ಉಗ್ರನ ನರಸಿಂಹನ ರೂಪದ ರಚನೆ, ಕಾಶೀಮಠಾಧೀಶ ಸುಂಯಮೀಂದ್ರ ತೀರ್ಥ ಸ್ವಾಮಿಜಿ ವರ್ಣಚಿತ್ರ ರಚನೆ, ನವಿಲು ನೃತ್ಯದ ರಂಗೋಲಿಗಳು, ಭಾರತ ದರ್ಶನ, ಮರಲೀಕೃಷ್ಣನ ರಂಗೋಲಿ, ಕೃಷ್ಣ-ರಾಧೆ, ಲಂಕೆಯಲ್ಲಿ ಹನುಮಂತನ ಸೀತಾದರ್ಶನ, ಗಣಪತಿ ದೃಶ್ಯ, ಸಮುದ್ರಮಥನ ಸಂದರ್ಭದ ಲಕ್ಷ್ಮೀನಾರಾಯಣ ಸಂಯೋಗ, ಬೆಟ್ಟದ ಮೇಲೆ ನಿಂತ ಹನುಮಂತನ ರಚನೆ ಮೊದಲಾದವು ಗಮನ ಸೆಳೆದವು.

ನಸುಕಿನ ವೇಳೆ ಮೂರು ಗಂಟೆಗೆ ಮಣ್ಣಗೋಪುರದಿಂದ ಭಜನೆ ಹೊರಟು ದೇವಾಲಯವನ್ನು ತಲುಪಿತು. ಮೂರೂವರೆ ಗಂಟೆಗೆ ದೇವಾಲಯ ದಲ್ಲಿ ಮಂತ್ರಘೋಷ ಸಹಿತ ಭಜನಾ ಸಂಕೀರ್ತನೆಗಳ ಹಿನ್ನೆಲೆಯಲ್ಲಿ ದೇವಾಲಯದ ದ್ವಾರಪೂಜೆ ನಡೆದು ದೇವರ ದರ್ಶನ ಆರಂಭಗೊಂಡಿತು. ಅಸಂಖ್ಯಾತ ಮಂದಿ ಸರದಿ ಸಾಲಿನಲ್ಲಿ ಆಗಮಿಸಿ ದೇವರ ವಿಶ್ವರೂಪ ದರ್ಶನ ಪಡೆದರು.

ಹಿನ್ನೆಲೆಯ ಸಂಕೀರ್ತನೆಯ ಗಾನ ಹೊಸತಾದ ದೈವಿಕ ವಾತಾ ವರಣಕ್ಕೆ ಸಾಕ್ಷಿಯಾಗಿತ್ತು. ಬಂದ ಎಲ್ಲ ಭಕ್ತಾದಿಗ ಳಿಗೂ ದೇವಾಲಯದಿಂದ ಪ್ರಸಾದ ವಿತರಣೆ ವ್ಯವಸ್ಥೆಯಿತ್ತು. ದೇವಾಲಯದ ಒಳಗಿನ ದೃಶ್ಯವನ್ನು ಭಕ್ತಾದಿಗಳಿಗೆ ಗೋಚರಿಸುವಂತೆ ಹೊರಗೆ ಟೀವಿಯನ್ನು ಅಳವಡಿಸಲಾಗಿತ್ತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English