ಮಂಗಳೂರು: ಅನ್ನ ಕಿತ್ತುಕೊಂಡ ಸರ್ಕಾರಕ್ಕೆ ಅನ್ನ ಸೃಷ್ಟಿಸುವ ಪಾಠ ಹೇಳಿಕೊಟ್ಟಿದ್ದಾರೆ. ಕಲ್ಲಡ್ಕ ಶಾಲೆಗೆ ಮಧ್ಯಾಹ್ನ ಊಟಕ್ಕಾಗಿ ಬರುತ್ತಿದ್ದ ಧನ ಸಹಾಯವನ್ನು ನಿಲ್ಲಿಸಿದ ರಾಜ್ಯ ಸರ್ಕಾರಕ್ಕೆ ಕಲ್ಲಡ್ಕ ಶಾಲೆಯ ಮಕ್ಕಳು ಸೆಡ್ಡು ಹೊಡೆದಿದ್ದಾರೆ. ಸುದೇಕಾರು ಎಂಬಲ್ಲಿನ ಶಾಲೆಯ ಗದ್ದೆಯಲ್ಲಿ ಶಾಲಾ ಮಕ್ಕಳು ಶುದ್ಧ ಸಾವಯವ ಬಂಗಾರದ ಬೆಳೆ ಬೆಳೆದಿದ್ದಾರೆ. ಕಲ್ಲಡ್ಕ ಶಾಲೆಯ ಮಕ್ಕಳೇ ನಾಟಿ ಮಾಡಿ ಗೊಬ್ಬರ ಹಾಕಿ ಪೋಷಿಸಿದ್ದಾರೆ. ಮಕ್ಕಳ ಬೆವರು ಈಗ ಭತ್ತವಾಗಿ ಪರಿವರ್ತನೆಗೊಂಡಿದೆ.
ಸುಮಾರು ಎರಡು ಎಕರೆ ಗದ್ದೆಯಲ್ಲಿ ಶಾಲಾ ಮಕ್ಕಳು ಸೇರಿ ಭತ್ತ ಬೆಳೆದಿದ್ದಾರೆ. ಭತ್ತ ಶಾಲಾ ಮಕ್ಕಳ ಊಟಕ್ಕಾದರೆ ಹುಲ್ಲು ಕಾಲೇಜಿನ ವಸುಧಾರ ಗೋಶಾಲೆಗೆ ಮೀಸಲು.
ಗದ್ದೆಯಲ್ಲಿ ಹುಲುಸಾಗಿ ಬೆಳೆದ ಭತ್ತದ ಪೈರನ್ನು ಇತ್ತೀಚೆಗೆ ಮಕ್ಕಳು ಕಟಾವು ಮಾಡಿದ್ದಾರೆ. ಈ ಕಾರ್ಯದಲ್ಲಿ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದ ಸಂಸ್ಥಾಪಕ ಡಾ. ಕಲ್ಲಡ್ಕ ಪ್ರಭಾಕರ ಭಟ್ ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ.
ಗಂಟೆ ಗಂಟೆಗೂ ವಾಟ್ಸಪ್ ಫೇಸ್ ಬುಕ್ ನಲ್ಲಿ ಸ್ಟೇಟಸ್ ಬದಲಿಸುವ ಇಂದಿನ ಮಾರ್ಡನ್ ಮೆಂಟಾಲಿಟಿ ಮಕ್ಕಳಿಗೆ ಈ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ. ಅಕ್ಕಿ ಹೇಗೆ ಉತ್ಪತ್ತಿಯಾಗುತ್ತದೆ ಎಂದರೆ ಅಂಗಡಿಯಲ್ಲಿ ಎಂಬ ಉತ್ತರಿಸುವ ಇಂದಿನ ನಗರ ಪ್ರದೇಶದ ಮಕ್ಕಳ ನಡುವೆ ಕೆಸರು ಗದ್ದೆಗಿಳಿದು, ತಾವೇ ನಾಟಿ ಮಾಡಿ, ತಾವೇ ಕಟಾವು ಮಾಡಿ, ತಾವು ಬೆಳೆದ ಆಹಾರ ತಾವೇ ತಿನ್ನುವ ಈ ವಿದ್ಯಾರ್ಥಿಗಳು ದೇಶಕ್ಕೆ ಮಾದರಿಯಾಗಿದ್ದಾರೆ .
Click this button or press Ctrl+G to toggle between Kannada and English